Slide
Slide
Slide
previous arrow
next arrow

‘ಯಕ್ಷಗಾನ’ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ: ಸುಮಂಗಲಾ ನಾಯ್ಕ್

300x250 AD

ಸಿದ್ದಾಪುರ : ಈ ನೆಲದ ಸಂಸ್ಕೃತಿ ಆಚಾರ, ವಿಚಾರ ತಿಳಿಸುವ ಯಕ್ಷಗಾನ ಕಲೆಯನ್ನು ಯುವ ಜನತೆ ಉಳಿಸಿಕೊಂಡು ಹೋಗಲು  ಪ್ರಯತ್ನ ಪಡುತ್ತಿರುವುದು ಕಲೆಯ ಉಳಿವಿಗೆ ಕಾರಣವಾಗಿದೆ. ಯುವ ಜನತೆ ಇದರ ಉಳಿವಿಗೆ ಆಸಕ್ತಿ ವಹಿಸಿರುವುದು ಅದರಲ್ಲೂ ವಿದ್ಯಾರ್ಥಿಗಳು ಈ ಕಲೆಯನ್ನು ತರಬೇತಿ ಪಡೆದು ಬೆಳೆಸುತ್ತಿರುವುದು ಮತ್ತು ಇಂತಹ ಸಂಘಟನೆಗಳು ಕಲೆಯನ್ನು ಉಳಿಸಲು ಕಾರ್ಯಕ್ರಮಗಳನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನಿಯ  ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ  ಸುಮಂಗಲ ವಸಂತ ನಾಯ್ಕ್  ಹೇಳಿದರು.

ಅವರು ಪಟ್ಟಣದ ನೆಹರು ಮೈದಾನದಲ್ಲಿ ನಾಡದೇವಿ ಹೋರಾಟ ವೇದಿಕೆ, ಯಕ್ಷ ತರಂಗಿಣಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಸಿದ್ದಾಪುರದಲ್ಲಿ ಶಿವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೈತ ಮುಖಂಡ  ವೀರಭದ್ರ ನಾಯ್ಕ್  ಮಾತನಾಡಿ ಶ್ರೀ ರಾಮ ಸೇತುವೆ ನಿರ್ಮಿಸುತ್ತಿರುವುದಕ್ಕೆ ಅಳಿಲು ಸೇವೆ ರೂಪದಲ್ಲಿ  ಕೊಡುಗೆಯನ್ನ ನೀಡಿದಂತೆ ಇಂದು ಈ  ಸಂಘಟಣೆಯವರು ಯಕ್ಷಗಾನ ಉಳಿವಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವ ಕಾರ್ಯ ಅಭಿನಂದನಾರ್ಹ ಇಂತಹ ಕಲೆ ಉಳಿವಿಗೆ ಪ್ರಯತ್ನಿಸುತ್ತಿರುವವರಿಗೆ ಗೌರವ ಸನ್ಮಾನಗಳು ದೊರೆಯಬೇಕು ಎಂದರು.

ಬಿಜೆಪಿ ಮುಖಂಡ ದಿವಾಕರ್ ನಾಯ್ಕ್  ಹೆಮ್ಮನಬೈಲ್ ಮಾತನಾಡಿ ಭಾಷೆಯನ್ನು ಸ್ಪಷ್ಟವಾಗಿ ಬಳಸುವಂತಹ ಮತ್ತು ನೈಜ ಕಲೆಯನ್ನು ಪ್ರದರ್ಶಿಸುವ ಏಕೈಕ ಕಲೆ  ಯಕ್ಷಗಾನ, ಕಲೆಯು ಸಂಸ್ಕಾರ ಹಾಗೂ ಪುರಾಣವನ್ನು ತಿಳಿಸಿಕೊಡುತ್ತದೆ ಮತ್ತು ಇಂದು ಸಾಧಕರನ್ನು ಸನ್ಮಾನಿಸುತ್ತಿರುವುದು ನಿಜಕ್ಕೂ ಕೂಡ ಸಂತಸದ ವಿಷಯ ಸಮಾಜಕ್ಕೆ ಈ ರೀತಿಯ ಕೊಡುಗೆಗಳು ಅವಶ್ಯಕ ಇದೆ ಎಂದರು. ಕನ್ನಡ ಪರ ಹೋರಾಟಗಾರ ನಾಗಭೂಷಣ್ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ನಾಡದೇವಿ ಹೋರಾಟ ವೇದಿಕೆ  ಗೌರವಾಧ್ಯಕ್ಷ ಲಕ್ಷ್ಮಣ್ ನಾಯ್ಕ್ ಬೇಡ್ಕಣಿ, ದತ್ತು  ನಾಲಿಗಾರ್, ಕಾಂಗ್ರೆಸ್  ಮುಖಂಡ ಗಾಂಧೀಜಿ ನಾಯ್ಕ್, ಮನೋಜ್ ಸಿರ್ಸಿ ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ಬಿಇಓ ಜಿ.ಐ.ನಾಯ್ಕ್, ಶೌರ್ಯ ಪ್ರಶಸ್ತಿ ವಿಜೇತ ಗೌರಿ ನಾಯ್ಕ್ ಗಣೇಶನಗರ ಸಿರ್ಸಿ, ಈ ಕ್ಷೇತ್ರಂಗಿಣಿ ಸಂಸ್ಥಾಪಕ ನಂದನಾಯಕ್‌ರವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ದಿವಾಕರ್ ಸಂಪಖಂಡ  ಸ್ವಾಗತಿಸಿದರು, ನಾಡ ದೇವಿ ಹೋರಾಟ ವೇದಿಕೆ ಅಧ್ಯಕ್ಷ ಅನಿಲ್ ಕೊಠಾರಿ ಹೊಂದಿಸಿದ್ದರು. ಕುಮಾರಿ ನಿಶಾ ನಾಯ್ಕ್ ಪ್ರಥಮ,   ಭಾರ್ಗವ ದ್ವಿತೀಯ, ಸೂರ್ಯ  ತೃತೀಯ ಸ್ಥಾನ ಪಡೆದರು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಒಂದು ಕಲೆಯನ್ನ ಯುವ ಜನತೆಯು ಆಯ್ಕೆ ಮಾಡಿ ಅದರಲ್ಲಿ ಪರಿಣಿತಿಯನ್ನು ಹೊಂದುತ್ತಾರೆ ಎಂದರೆ ಅದು ಆ ಕಲೆಗಿರುವ ಶಕ್ತಿಯಾಗಿದೆ, ಯಕ್ಷಗಾನ ಕಲೆಗೆ ಈ ನಾಡಿನಲ್ಲಿ ವಿಶೇಷವಾದ ಶಕ್ತಿ ಇದೆ, ಸ್ಥಳೀಯವಾಗಿ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ ಸನ್ಮಾನಿಸುವುದು ಮತ್ತು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಅವಕಾಶವನ್ನು ಕೊಡುವುದು ವಿದ್ಯಾರ್ಥಿಗಳ ಭವಿಷ್ಯ ಕ್ಕೆ  ಹೊಸ ಅವಕಾಶವನ್ನ ಒದಗಿಸಿದಂತೆ ಮತ್ತು ಕಲಾವಿದರಾಗಿ ರೂಪುಗೊಳ್ಳಲು ಇಂತಹ ಕಾರ್ಯಕ್ರಮಗಳು ಬಹಳಷ್ಟು ಜನರಿಗೆ ಮುಂದಿನ ದಿನದಲ್ಲಿ ಕಲಾವಿದರನ್ನಾಗಿ ರೂಪಿಸುತ್ತದೆ  ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ್ ನಾಯ್ಕ್  ಹೇಳಿದರು. ಅವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಹರೀಶ್ ನಾಯ್ಕ್  ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top