Slide
Slide
Slide
previous arrow
next arrow

ಯಾಣದಲ್ಲಿ ಸಾರ್ವಜನಿಕ ವೈಪೈ ಸೇವೆಗೆ ಸಂಸದ ಅನಂತಕುಮಾರ ಚಾಲನೆ

300x250 AD

ಶಿರಸಿ: ಮಹಾಶಿವರಾತ್ರಿಯ ಪರ್ವಕಾಲದಲ್ಲಿ ದೇಶದ ಮೊದಲ ಭಾರತ್ ಏರ್ ವೈಫೈ 7 ನೆಟ್ವರ್ಕ್ ಸೇವೆಯನ್ನು ಪ್ರಸಿದ್ಧ ಪ್ರವಾಸಿ ಕ್ಷೇತ್ರ ಯಾಣದಲ್ಲಿ ಸಂಸದ ಅನಂತಕುಮಾರ ಹೆಗಡೆ ಶುಕ್ರವಾರ ಲೋಕಾರ್ಪಣೆಗೊಳಿಸಿದರು.

ಭಾರತ್ ಸಂಚಾರ ನಿಗಮ, ಅರಣ್ಯ ಇಲಾಖೆಗಳ ಸರಕಾರದಲ್ಲಿ ಜಪನೀಸ್ ತಂತ್ರಜ್ಞಾನ ಹೊಂದಿದ ಏರ್ ವೈಫೈ 7 ಮೂಲಕ ನೆಟ್ವರ್ಕ್ ಇಲ್ಲದ ಸ್ಥಳದಲ್ಲೂ ನೇರವಾಗಿ ಮಾತನಾಡುವ, ವೈಫೈ ಕಾಲಿಂಗ್ ಮಾಡುವ, ಹಣ ವರ್ಗಾವಣೆ ಕೂಡ ಮಾಡಬಹುದಾಗಿದೆ. ಶಿರಸಿ‌ ನಗರದಲ್ಲೂ ಇದರ ಪ್ರಾಯೋಗಿಕ ಅನುಷ್ಠಾನ ಮಾಡಲಾಗಿದೆ. ಅದನ್ನೂ ಶೀಘ್ರ ಉದ್ಘಾಟಿಸಲಾಗುತ್ತದೆ ಎಂದರು.

300x250 AD

ಭಾರತ್ ಏರ್ ವೈಫೈ ಎಂದರೆ ವೈಫೈ 7 ತಂತ್ರಜ್ಞಾನ ಆಗಿದೆ. ಒಂದು, ಎರಡು ಕಿಲೋಮೀಟರ್ ತನಕ ವೈಫೈ ವ್ಯವಸ್ಥೆ ಮಾಡಬಹುದು. ಭಾರತ್ ಏರ್ ವೈಫೈ ಹಾಗೂ ಬಿ.ಎಸ್.ಎನ್.ಎಲ್. ಶೇ.50ರ ಸಹಭಾಗಿತ್ವ ಇದೆ. ಯಾವುದೇ ಹಳ್ಳಿಯಲ್ಲಿ ವೈಫೈ ವಿಲೇಜ್‌ ಮಾಡುವ ಮೂಲಕ ಕೈಗಾರಿಕೆ, ವೃತ್ತಿ ಪರತೆಗೆ ತೊಡಗಿಕೊಳ್ಳಬಹುದು ಎಂದರು. ಈ ವೇಳೆ ಭಾರತ ವೈಫೈನ ಸಿಇಓ ನಾಗರಾಜ,ಜಪಾನ್‌ದ ಕ್ವ್ಯಾಕ್, ಕೃಷ್ಣ ಎಸಳೆ, ಸುರೇಶ ಶೆಟ್ಟಿ, ರಾಜೇಶ ಶೆಟ್ಟಿ ಇತರರು ಇದ್ದರು.

Share This
300x250 AD
300x250 AD
300x250 AD
Back to top