Slide
Slide
Slide
previous arrow
next arrow

ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘ ನಿಯೋಗದಿಂದ ಕೇಂದ್ರ ಸಚಿವರುಗಳ ಭೇಟಿ

300x250 AD

ಶಿರಸಿ: ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಳದ ನಿಯೋಗದ ಸದಸ್ಯರು ಮಂಜಪ್ಪ ಹೊಸಬಾಳೆ, ಅಧ್ಯಕ್ಷರು, ಕ್ರ‍್ಯಾಮ್ ಇವರ ನೇತೃತ್ವದಲ್ಲಿ ಮಾ.6ರಂದು ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಕಾನೂನು ಸಚಿವರಾದ ಅರ್ಜುನ ಮೇಘವಾಲ್ ಮತ್ತು ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ ಇವರನ್ನು ಭೇಟಿ ಮಾಡಿದರು.

ನಿಯೋಗವು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಭಾರತಕ್ಕೆ ಅಕ್ರಮವಾಗಿ ಅಡಕೆ ಆಮದಾಗುತ್ತಿರುವುದರಿಂದ ಅಡಕೆಯ ಬೆಲೆಯಲ್ಲಿನ ತೀವ್ರ ಕುಸಿತ ಮತ್ತು ಇದರಿಂದಾಗಿ ಬೆಳಗಾರರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ವಿವರಿಸಲಾಯಿತು. ಹಾಗೂ ಸಿಹಿ ಅಡಿಕೆಪುಡಿಯ ಉತ್ಪನ್ನದ ಮೇಲೆ ಪ್ರಸ್ತುತ ಶೇ.18 ರಂತೆ ಜಿ.ಎಸ್.ಟಿ ದರವನ್ನು ವಿಧಿಸಲಾಗುತ್ತಿದ್ದು, ಇದರಿಂದಾಗಿ ಕ್ರಮಬದ್ಧವಾಗಿ ತೆರಿಗೆ ಪಾವತಿ ಮಾಡುವ ಉತ್ಪಾದಕರ ಮೇಲೆ ಬೀಳುವ ತೆರಿಗೆಯ ಭಾರದಿಂದ ಹಾನಿಯನ್ನುಂಟಾಗುತ್ತಿದೆ. ಕಾರಣ ಅಡಿಕೆ ಬೆಳೆಗಾರರ ಹಿತಕಾಯುವ ನಿಟ್ಟಿನಲ್ಲಿ ಸಿಹಿ ಅಡಿಕೆಪುಡಿ ಮೇಲೆ ಆಕರಿಸುತ್ತಿರುವ ಜಿ.ಎಸ್.ಟಿ ಶುಲ್ಕವನ್ನು ಶೇ.5 ಕ್ಕೆ ಇಳಿಸಿ ಪರಿಷ್ಕರಿಸಲು ಜಿ.ಎಸ್.ಟಿ ಕೌನ್ಸಿಲ್‌ಗೆ ಶಿಫಾರಸ್ಸು ಮಾಡಲು ವಿನಂತಿಸಲಾಯಿತು. ಈ ಕುರಿತಂತೆ ನಿಯೋಗಕ್ಕೆ ಮಾನ್ಯ ಕೇಂದ್ರ ಹಣಕಾಸು ಸಚಿವರು ಸಕರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು.
ಅದರಂತೆ ನಿಯೋಗವು ಕೇಂದ್ರ ಕಾನೂನು ಸಚಿವರಾದ ಅರ್ಜುನ್ ಮೇಘವಾಲ್‌ರವರನ್ನು ಭೇಟಿಯಾಗಿ ಅಡಿಕೆ ಕ್ಯಾನ್ಸರ್ ಕಾರಕ ಎನ್ನುವ ಕುರಿತಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ಬಗ್ಗೆ ಪ್ರಸ್ತಾಪಿಸಿತು. ಆ ಸಂದರ್ಭದಲ್ಲಿ ಮಾನ್ಯ ಕೇಂದ್ರ ಕಾನೂನು ಸಚಿವರು ಪ್ರಸ್ತಾಪಿತ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ರಾಜ್ಯದ ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವ ಭರವಸೆಯನ್ನು ನೀಡಿರುತ್ತಾರೆ.
ಇದೇ ಸಂದರ್ಭದಲ್ಲಿ ನಿಯೋಗವು ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ ಇವರನ್ನು ಭೇಟಿಯಾಗಿ ರಾಜ್ಯದ ಅಡಿಕೆ ಬೆಳೆಗಾರರ ಹಿತ ಕಾಯುವಲ್ಲಿ ಸಹಕರಿಸಲು ಮನವಿ ಮಾಡಿತು. ಮನವಿಗೆ ಸ್ಪಂದಿಸಿದ ಸಚಿವರು ಕೇಂದ್ರ ಸರ್ಕಾರವು ರಾಜ್ಯದ ಅಡಿಕೆ ಬೆಳೆಗಾರರ ಹಿತ ಕಾಯುವಲ್ಲಿ ಸದಾ ಬದ್ಧವಾಗಿದ್ದು, ಮನವಿಗೆ ಪೂರಕವಾಗಿ ಕ್ರಮಕೈಗೊಳ್ಳುತ್ತದೆಂದು ಭರವಸೆ ನೀಡಿದರು.
ನಿಯೋಗದಲ್ಲಿ ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರಾದ ಸುಬ್ರಹ್ಮಣ್ಯ ವೈ.ಎಸ್., ಆಪ್ಕೋಸ್ ಅಧ್ಯಕ್ಷರಾದ ಇಂದೂದರಗೌಡ, ಮ್ಯಾಮ್ಕೋಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಕಾಂತ ಬರುವೆ, ರಾಜೇಶ್ ಕುಮಾರ್ ಖೇರ್, ಮತ್ತು ಶಿರಸಿಯ ಟಿ.ಎಸ್.ಎಸ್.ಲಿ., ಪ್ರಧಾನ ವ್ಯವಸ್ಥಾಪಕ(ಪ್ರಭಾರಿ) ವಿಜಯಾನಂದ ಭಟ್ ಇವರುಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top