Slide
Slide
Slide
previous arrow
next arrow

ಮಾ.8ಕ್ಕೆ ಶ್ರೀಕ್ಷೇತ್ರ ಯಾಣದಲ್ಲಿ ವೈಫೈ ಸೇವೆಗೆ ಚಾಲನೆ

300x250 AD

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಜಗತ್ಪ್ರಸಿದ್ಧ ಪ್ರವಾಸಿ ತಾಣವಾದ ಯಾಣದಲ್ಲಿ ದೇಶದ ಮೊಟ್ಟ ಮೊದಲ ಸಾರ್ವಜನಿಕ ವೈಫೈ ಸೇವೆಯನ್ನು ಮಾ.8, ಮಹಾಶಿವರಾತ್ರಿ ದಿನದಂದು ಬೆಳಿಗ್ಗೆ 10 ಗಂಟೆಗೆ ಸಂಸದರಾದ ಅನಂತಕುಮಾರ ಹೆಗಡೆ ಲೋಕಾರ್ಪಣೆಗೊಳಿಸಲಿದ್ದು, ಕುಮಟಾ ಶಾಸಕರಾದ  ದಿನಕರ ಶೆಟ್ಟಿ ವಿಶೇಷ ಆಮಂತ್ರಿತರಾಗಿ ಆಗಮಿಸಲಿದ್ದಾರೆ.

ಯಾಣ ಸುತ್ತ ಮುತ್ತಲ ಪ್ರದೇಶದಲ್ಲಿ ಮೊಬೈಲ್ ಸಿಗ್ನಲ್ ಸಿಗದೆ ಪ್ರವಾಸಿಗರಿಗೆ ತುಂಬಾ ತೊಂದರೆಯಾಗುತ್ತಿತ್ತು. ಇಂತಹ ದುರ್ಗಮ ಪ್ರದೇಶದಲ್ಲಿ ಸಂಸದ ಅನಂತಕುಮಾರ ಹೆಗಡೆಯವರ ಪ್ರಯತ್ನದಿಂದ ಇಂದು ವೈಫೈ ಸಂಪರ್ಕ ಸಾಧ್ಯವಾಗಿದೆ. ಬಿ.ಎಸ್.ಎನ್.ಎಲ್. ಭಾರತ ಏರ್ ಫೈ ಹಾಗೂ GNA ಕಂಪನಿಗಳ ಸಹಯೋಗದೊಂದಿಗೆ ಯಾಣದ ಶ್ರೀ ಭೈರವೇಶ್ವರ ದೇವಸ್ಥಾನ ಹತ್ತಿರ ಹಾಗೂ ಎರಡು ಪಾರ್ಕಿಂಗ್ ಸ್ಥಳಗಳಲ್ಲಿ ವೈಫೈ ಸೌಲಭ್ಯ ಸಿಗಲಿದೆ. ಇದರಿಂದ ಪ್ರವಾಸಿಗರಿಗೆ ಹಾಗೂ ಅಂಗಡಿಕಾರರಿಗೆ ಸಂಪರ್ಕದ ಜೊತೆಗೆ ಡಿಜಿಟಲ್ ಪಾವತಿಗೂ ತುಂಬಾ ಅನುಕೂಲವಾಗಲಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು, ಬಿ.ಎಸ್.ಎನ್.ಎಲ್. ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ದೇವಸ್ಥಾನ ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top