Slide
Slide
Slide
previous arrow
next arrow

ಉತ್ತರ ಕನ್ನಡಕ್ಕೆ ಕಾಂಗ್ರೆಸಿನಿಂದ ಅಂಜಲಿ ನಿಂಬಾಳ್ಕರ್ ಖಚಿತ ?

300x250 AD

ಶಿರಸಿ: ಕಿತ್ತೂರು-ಖಾನಾಪುರವನ್ನೊಳಗೊಂಡ ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ. ಬನವಾಸಿಯಲ್ಲಿ ನಡೆದ ಕದಂಬೋತ್ಸವ ಕಾರ್ಯಕ್ರಮಕ್ಕೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ವ‌ರ್ ಸಿಎಂ ಸಿದ್ದರಾಮಯ್ಯ ಜೊತೆ ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸುವ ಮೂಲಕ ಅಭ್ಯರ್ಥಿಯಾಗುವ ಸಿದ್ಧತೆ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಕೆನರಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಅಂಜಲಿ ನಿಂಬಾಲ್ಕರ್ ಅವರಿಗೆ ಸಿಗಲಿದೆ ಎನ್ನಲಾಗಿತ್ತು. ಆದರೆ ಈವರೆಗೆ ಅವರು ಜಿಲ್ಲೆಗೆ ಆಗಮಿಸರಲಿಲ್ಲ.

ಟಿಕೇಟ್ ಬಹುತೇಕ ಖಚಿತ ಆಗಿರುವ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಹಿರಿಯ ಶಾಸಕರಾದ ಆರ್ ವಿ ದೇಶಪಾಂಡೆ ಹಾಗೂ ಸತೀಶ್ ಸೈಲ್ ಜೊತೆ ನಿಂಬಾಳ್ಕರ್ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ವೇಳೆ ಸಿಎಂ ಜೊತೆ ಕೆನರಾ ಕ್ಷೇತ್ರದ ಟಿಕೇಟ್ ಸಂಬಂಧ ಚರ್ಚೆ ನಡೆಸಲಾಗಿತ್ತು. ಅಂಜಲಿ ನಿಂಬಾಲ್ಕರ್ ಆಯ್ಕೆ ಮಾಡಲು ಎಲ್ಲರೂ ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಜಿಲ್ಲೆಗೆ ಸಿಎಂ ಜೊತೆಯೇ ಆಗಮಿಸಿದ್ದಾರೆ ಎನ್ನಲಾಗಿದೆ.

300x250 AD
Share This
300x250 AD
300x250 AD
300x250 AD
Back to top