Slide
Slide
Slide
previous arrow
next arrow

ಟೆಂಪೋ-ರಿಕ್ಷಾ ನಡುವೆ ಡಿಕ್ಕಿ: ಓರ್ವ ವೃದ್ಧೆ ಸಾವು

300x250 AD

ಹೊನ್ನಾವರ : ತಾಲೂಕಿನ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿತ್ತಾರದ ಹಡಿಕಲ್‌ನಲ್ಲಿ ಟೆಂಪೋ ಮತ್ತು ಆಟೋ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಮೃತ ಪಟ್ಟಿದ್ದು ಇನ್ನೊರ್ವರು ಹೊರ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.

ಬಹುತೇಕ ಗ್ರಾಮೀಣ ಪ್ರದೇಶದ ರಸ್ತೆಗಳು ಕಿರಿದಾಗಿದ್ದು, ಅದರ ಜೊತೆಗೆ ಕೇಬಲ್ ಮತ್ತು ನೀರಾವರಿ ಇನ್ನಿತರ ಕಾರಣಕ್ಕೆ ರಸ್ತೆ ಅಂಚಿನಲ್ಲಿ ಆಗಾಗ ಅಗೆದು ಹೊಂಡವನ್ನು ಸರಿಯಾಗಿ ಮುಚ್ಚದೆ ಇರುವುದು ಮತ್ತಷ್ಟು ಅಪಘಾತಕ್ಕೆ ಕಾರಣವಾಗುತ್ತಿದೆ. ಚಾಲಕರ ನಿರ್ಲಕ್ಷಕ್ಕೆ, ರಸ್ತೆಗಳ ಅವಾಂತರಕ್ಕೆ ಅಮಾಯಕ ಜೀವಗಳು ಬಲಿ ಆಗುತ್ತಿವೆ. ಮಂಗಳವಾರ ನಡೆದ ಅಪಘಾತದಲ್ಲಿ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ವಯೋ ವೃದ್ಧ ಮಹಿಳೆಯೊಬ್ಬರು ಅಪಘಾತದ ವೇಗಕ್ಕೆ ಕುಳಿತಲ್ಲಿಯೇ ಉಸಿರು ನಿಲ್ಲಿಸಿದ್ದು, ಆಟೋ ನುಜ್ಜು ನುಜ್ಜಾಗಿದೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top