Slide
Slide
Slide
previous arrow
next arrow

ಹೊಲನಗದ್ದೆ ಶಾಲೆಯ ವಿವೇಕ ಕೊಠಡಿ ಉದ್ಘಾಟಿಸಿದ ದಿನಕರ ಶೆಟ್ಟಿ

300x250 AD

ಕುಮಟಾ: ತಾಲೂಕಿನ ಹೊಲನಗದ್ದೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿವೇಕ ಕೊಠಡಿ ಹಾಗೂ ಅಕ್ಷರ ದಾಸೋಹ ಕೊಠಡಿಯನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.

ನಂತರ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಹೊಲನಗದ್ದೆ ಗ್ರಾ.ಪಂ. ಭಾಗದ ಗ್ರಾಮಗಳು ಪಟ್ಟಣದಿಂದ ಹತ್ತಿರದಲ್ಲಿ ಇದ್ದರೂ ಇಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಚೆನ್ನಾಗಿದೆ. ಇದರ ಅರ್ಥ ಇಲ್ಲಿನ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸದೆ ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿರುವುದು ಸಂತೋಷದ ಸಂಗತಿ. ಇದರ ಅರ್ಥ ಇಲ್ಲಿನ ಶಾಲೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಇದರ ಸಂಪೂರ್ಣ ಕೀರ್ತಿ ಶಿಕ್ಷಕರಿಗೆ ಸಲ್ಲುತ್ತದೆ. ಹಿಂದಿನ ಬಿಜೆಪಿ ಸರ್ಕಾರ ಶಾಲೆಗಳಲ್ಲಿನ ಕೊಠಡಿಗಳ ಕೊರತೆಯನ್ನು ನೀಗಿಸಲು ವಿವೇಕ ಶಾಲೆ ಯೋಜನೆಯನ್ನು ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ ಕುಮಟಾ ತಾಲೂಕಿಗೆ 27 ವರ್ಗಕೋಣೆಗಳನ್ನು ತಂದಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಹೊಲನಗದ್ದೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತೆಪ್ಪ, ಕಡ್ಲೆ ಹಾಗೂ ಹೊಲನಗದ್ದೆಯಲ್ಲಿ ವಿವೇಕ ಕೊಠಡಿಯನ್ನು ಒದಗಿಸಿದ್ದೇನೆ. ಮೊದಲು ಸರ್ಕಾರಿ ಶಾಲೆಗಳಲ್ಲಿ ಸೇವೆಸಲ್ಲಿಸುತ್ತಿರುವ ಅತಿಥಿ ಶಿಕ್ಷಕರಿಗೆ ಕೇವಲ 5,500ರೂ. ಗೌರವಧನ ನೀಡಲಾಗುತ್ತಿತ್ತು. ಈ ಮೊತ್ತವನ್ನು ಹೆಚ್ಚಿಸುವಂತೆ ಅಂದಿನ ಶಿಕ್ಷಣ ಮಂತ್ರಿ ಬಿ. ಸಿ. ನಾಗೇಶ್ ಅವರಲ್ಲಿ ಮನವಿ ಮಾಡಿಕೊಂಡಿದ್ದೆ. ತಕ್ಷಣ ಸ್ಪಂದಿದ ಅವರು ಅತಿಥಿ ಶಿಕ್ಷಕರ ಸಂಬಳವನ್ನು ಹೆಚ್ಚಿಸಿದ್ದರು. ಒಟ್ಟಿನಲ್ಲಿ ನನ್ನ ಶಾಸಕತ್ವದ ಅವಧಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂದು ಹೇಳಿದರು.

300x250 AD

ತಾಲೂಕು ಪಂಚಾಯತ್ ಇ. ಓ. ರಾಜೇಂದ್ರ ಎಲ್. ಭಟ್, ಹೊಲನಗದ್ದೆ ಗ್ರಾ. ಪಂ. ಅಧ್ಯಕ್ಷ ಎಮ್. ಎಮ್. ಹೆಗಡೆ, ಉಪಾಧ್ಯಕ್ಷ ಮಹಾಂತೇಶ್ ಹರಿಕಾಂತ, ಸದಸ್ಯರುಗಳಾದ ಅನುರಾಧಾ ಭಟ್, ದತ್ತಾತ್ರೇಯ ಪಟಗಾರ ಹಾಗೂ ಶ್ರೀಕಾಂತ್ ಮಡಿವಾಳ, ದೀಪಾ ಹಿಣಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ರೇಖಾ ಸಿ. ನಾಯ್ಕ್, ಪ್ರಾ. ಶಾ. ಶಿ. ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವಕರ ಮತ್ತು ತಾಲೂಕಾ ಅಧ್ಯಕ್ಷ ರವೀಂದ್ರ ಭಟ್ ಸೂರಿ, SDMC ಅಧ್ಯಕ್ಷ ಚಂದ್ರಹಾಸ ನಾಯ್ಕ್ ಹಾಗೂ ಇತರರು ಇದ್ದರು.

Share This
300x250 AD
300x250 AD
300x250 AD
Back to top