ಜೊಯಿಡಾ: ರಾಜ್ಯದ ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಜಿಲ್ಲಾ ಕುಣಬಿ ಸಮಾಜದ ನೇತೃತ್ವದಲ್ಲಿ ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ಕುಣಬಿ ಭವನದ ಆವರಣದಲ್ಲಿ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹವು ಮಂಗಳವಾರ ಎರಡನೇಯ ದಿನಕ್ಕೆ ಕಾಲಿಟ್ಟಿದೆ.
ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಗಾಂಗೋಡಾ ಗ್ರಾಮ ಪಂಚಾಯತ್ ಪ್ರವೀಣ್ ದೇಸಾಯಿ, ಗ್ರಾ.ಪಂ ಮಾಜಿ ಉಪಾಧ್ಯಕ್ಷರಾದ ಸುಬ್ರಾಯ ಭಟ್ ಬೆಂಬಲ ಸೂಚಿಸಿದರು. ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆ ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಹೋರಾಟವನ್ನು ಕೈಗೊಂಡರೂ ಗಾಂಗೋಡಾ ಗ್ರಾಮ ಪಂಚಾಯತ್ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಜೋಯಿಡಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷರು ಹಾಗೂ ಮುಸ್ಲಿಂ ಸಮಾಜದ ಅಧ್ಯಕ್ಷರಾದ ರಫೀಕ್ ಖಾಜಿ, ಅಸ್ಲಾಂ, ರಾಜು ಮೇಸ್ತ್ರಿ, ಕೆಪಿಸಿಸಿ ಸದಸ್ಯರಾದ ಸದಾನಂದ ದಬಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ದೇಸಾಯಿ ಮೊದಲಾದವರು ಕುಣಬಿ ಸಮುದಾಯದವರ ಹೋರಾಟ ನ್ಯಾಯಯುಚಿತವಾಗಿದೆ. ಇದು ಕುಣಬಿ ಸಮುದಾಯದ ಬದುಕಿಗಾಗಿ ಮತ್ತು ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ. ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕುಣಬಿ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ್ ಗಾವಡಾ, ಕಾರ್ಯದರ್ಶಿ ಚಂದ್ರಶೇಖರ ಸಾವರಕರ, ಹಿರಿಯ ಮುಖಂಡರಾದ ಮಾಬಳು ಕುಂಡಲಕರ, ದತ್ತಾ ಮಿರಾಶಿ, ಸಂದೀಪ್ ಮಿರಾಶಿ, ಸುಭಾಷ್ ವೇಳಿಪ್, ಸುಷ್ಮಾ ಮಿರಾಶಿ, ಸಂದೀಪ್ ಗಾವಡಾ, ನಾರಾಯಣ ವೇಳಿಪ, ಕಾಂತಾ ಡಿಗಳಂಬ, ತುಕಾರಾಮ ಮಿರಾಶಿ, ದಯಾನಂದ್ ಮಿರಾಶಿ, ಚಂದ್ರಕಾಂತ ಅಂಬರ್ಡಾ ಕುಣಬಿ ಮುಖಂಡರು ಇದ್ದರು.