ಅಂಕೋಲಾ: ತಾಲೂಕಿನ ಕುಕ್ಕಡ ಲೇವಲ ಸರ್ವೆ ವ್ಯಾಪ್ತಿಯ ಆಳ ಸಮುದ್ರದ ಪ್ರದೇಶದಲ್ಲಿ ಹವಾಮಾನದ ವೈಪರೀತ್ಯಕ್ಕೆ ಸಿಲುಕಿ, ಪರ್ಶಿಯನ್ ಬೋಟ್ ಮುಳುಗಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಬೋಟನಲ್ಲಿದ್ದ 17 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾರವಾಡ ಸೀಬರ್ಡ್ ಕಾಲನಿಯ ಇಂದು ಚಂದ್ರು ತಾಂಡೇಲ ಮಾಲಕತ್ವದ ಓಂ ನಮ: ಶಿವಾಯ ಹೆಸರಿನ ಬೋಟ್ ಸಂಪೂರ್ಣ ನೀರಿನಲ್ಲಿ ಮುಳುಗಿದೆ.
1 ಕೋಟಿ 80 ಲಕ್ಷ ಮೌಲ್ಯದ ಬೋಟ್ ಇದಾಗಿದ್ದು, ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದರು. ಸೋಮವಾರ ಮುಂಜಾನೆ ಬೃಹತ ಚಂಡ ಮಾರುತಕ್ಕೆ ಸಿಲುಕಿದ ಬೋಟನ್ನು ಹಾರವಾಡ ಗ್ರಾಪಂ ಸದಸ್ಯ ಉಮೇಶ ಕಾಂಚನ ಮಾಲಕತ್ವದ ಕಾತ್ಯಾಯನಿ ಬೋಟ್ 33 ಬೋಟ್ ತೆರಳಿ ಮೀನುಗಾರ ಕಾರ್ಮಿಕರನ್ನು ರಕ್ಷಿಸಿ ತರಲಾಗಿದೆ.
ಬೋಟನಲ್ಲಿ ಹಾರವಾಡ ಹಾಗೂ ಮುದಗಾದ 10 ಮೀನುಗಾರರು ಮತ್ತು 7 ಕಾರ್ಮಿಕರು ಓರಿಸ್ಸಾ ಮೂಲದವರಾಗಿದ್ದರು ಎಂದು ತಿಳಿದು ಬಂದಿದೆ.
ಹಟ್ಟಿಕೇರಿ ಗ್ರಾಪಂ ಸದಸ್ಯ ವಿನೋದ ನಾಯ್ಕ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ. ಹವಾಲ್ದಾರ್ ಪದ್ಮಾ ಗಾಂವಕರ ಪ್ರಕರಣ ದಾಖಲಿಸಿಕೊಂಡಿದ್ದಾರೆ.