ಶಿರಸಿ: ಸಾಹಿತ್ಯ ಚಿಂತಕರ ಚಾವಡಿ ಶಿರಸಿ ಪಾರಂಪರಿಕ ವೈದ್ಯ ಪರಿಷತ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಮನೆ ಮದ್ದು ಮಾಹಿತಿ ಕಾರ್ಯಗಾರ ಶಿರಸಿಯ ನೆಮ್ಮದಿ ಕೇಂದ್ರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ವನಸ್ಪತಿಗಳ ಬಳಕೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ತಾಮ್ರದ ಬಿಂದಿಗೆಯಲ್ಲಿ ಇಟ್ಟ ನೀರನ್ನು ಕುಡಿಯುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.ಮನೆ ಮದ್ದಿನ ಸರಳ ವಿಧಾನ ಅನೇಕ ಇವೆ ಅವುಗಳನ್ನು ಸರಿಯಾದ ಕ್ರಮದಲ್ಲಿ ಮಾಡಿದಾಗ ಪರಿಣಾಮಕಾರಿ ಆಗಬಲ್ಲವೂ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್.ಎಂ.ಹೆಗಡೆ ಮಕ್ಕಳತಾಯಿಮನೆ, ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೂ ಅಂಟುವಾಳದ ಮಹತ್ವವನ್ನು ವಿವರಿಸಿದರು.
ಉದ್ಘಾಟಕರಾಗಿ ಆಗಮಿಸಿದ ಸುಮನ ಮಳಲಗದ್ದೆಯವರು ಮನುಷ್ಯನ ಶರೀರದಲ್ಲಿ ರಕ್ತ ದಪ್ಪ ಆದಾಗ ನಂಜು ಜಾಸ್ತಿ ಆಗುತ್ತದೆ ಆಗ ಬಾಯಾರಿಕೆ ಉಂಟಾಗುತ್ತದೆ.ಆಗ ಸಾಂಪ್ರದಾಯಿಕವಾಗಿ ರೂಢಿಯಲ್ಲಿರುವ ಕಹಿ ಜೀರಿಗೆ, ಕೊಡಸ ಈ ರೀತಿಯ ಮನೆಮದ್ದನ್ನು ಉಪಯೋಗಿಸಬೇಕು ಹಾಗೂ ಅರಿಶಿಣದ ಹಲವಾರು ಪ್ರಕಾರಗಳು ಹಾಗೂ ಅರಿಶಿಣದ ಮಹತ್ವವನ್ನು ತುಂಬಾ ಸವಿಸ್ತಾರವಾಗಿ ವಿವರಿಸಿದರು.
ಇನ್ನೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಮಚಂದ್ರ ಭಟ್ ದೇವಗೊಡ್ಳು, ಪಾರಂಪರಿಕವಾಗಿ ರೂಢಿಯಲ್ಲಿ ಬಂದಿರುವ ಗಿಡಮೂಲಿಕೆಗಳ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಗಿಡಮೂಲಿಕೆ ಪರಿಚಯ ಉಚಿತ ಚಿಕಿತ್ಸಾ ಸಲಹೆ ನಡೆಯಿತು.
ಸುಮಾರು ಮೂವತ್ತಕ್ಕೂ ಹೆಚ್ಚು ಗಿಡಮೂಲಿಕೆಗಳ ಪರಿಚಯವನ್ನು ಹಾಗೂ ಅದರ ಬಹು ಉಪಯೋಗಗಳನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಜುನಾಥ ಹೆಗಡೆ ಹೂಡ್ಲಮನೆ ಹಾಗೂ ರಾಮಚಂದ್ರ ಹೆಗಡೆ ತಾರೆಹಳ್ಳಿ ಸವಿಸ್ತಾರವಾಗಿ ವಿವರಿಸಿದರು.ರಾಜಲಕ್ಷ್ಮೀ ಭಟ್ ಬೊಮ್ನಳ್ಳಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಹಲವಾರು ಜನ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಸಂವಾದದ ಮೂಲಕ ಕಂಡುಕೊಂಡರು.
ಪ್ರಸ್ತಾವಿಕವಾಗಿ ಮಾತನಾಡಿದ ಸಾಹಿತ್ಯ ಚಿಂತಕರ ಚಾವಡಿಯ ಸಂಸ್ಥಾಪಕರಾದ ಎಸ್.ಎಸ್. ಭಟ್, ಕಾರ್ಯಕ್ರಮದ ರೂಪರೇಷೆಗಳನ್ನು ವಿವರಿಸಿದರು. ಹಲವಾರು ಶಿಬಿರಾರ್ಥಿಗಳು ತಮ್ಮ ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡು ವಿಚಾರ ವಿನಿಮಯ ಮಾಡಿಕೊಂಡರು. ಹಲವಾರು ಜನ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಸಂವಾದದ ಮೂಲಕ ಕಂಡುಕೊಂಡರು. ಸಾಹಿತ್ಯ ಚಿಂತಕರ ಚಾವಡಿಯ ಸಂಸ್ಥಾಪಕರಾದ ಎಸ್. ಎಸ್. ಭಟ್ ಕಾರ್ಯಕ್ರಮದ ರೂಪರೇಷೆಗಳನ್ನು ವಿವರಿಸಿದರು.
ಹಲವಾರು ಶಿಬಿರಾರ್ಥಿಗಳು ತಮ್ಮ ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡು ವಿಚಾರ ವಿನಿಮಯ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಸುಮನ ಮಳಲಗದ್ದೆ ಮತ್ತು ರಾಮಚಂದ್ರ ಭಟ್ ದೇವಗೊಡ್ಳು ಇವರನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು. ಶ್ರೀಮತಿ ಭವ್ಯ ಹಳೆಯೂರು ಹಾಗೂ ಶ್ರೀಮತಿ ರಾಜಲಕ್ಷ್ಮಿ ಭಟ್ ಬೊಮ್ನಳ್ಳಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿರೂಪಿಸಿದರು. ಕೆ. ಮಹೇಶ್ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.