Slide
Slide
Slide
previous arrow
next arrow

ಮಾರಿಕಾಂಬಾ ಜಾತ್ರೆ: ಎರಡನೇ ಹೊರಬೀಡು ಸಂಪನ್ನ

300x250 AD

ಶಿರಸಿ : ಮಾ.19 ರಿಂದ ಆರಂಭವಾಗುವ ನಾಡಿನ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಪೂರ್ವಭಾವಿ ಆಚರಣೆಯ ಎರಡನೇ ಹೊರಬೀಡು ಉತ್ತರ ದಿಕ್ಕಿನ ಶಿರಸಿಯ ಹುಬ್ಬಳ್ಳಿ ರಸ್ತೆಯಲ್ಲಿರುವ ಗಾಳೀಮಾಸ್ತಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಸಾಂಪ್ರದಾಯಿಕ ವಿಧಿ ವಿಧಾನದೊಂದಿಗೆ ನಡೆಯಿತು.

ದೇವಸ್ಥಾನದಿಂದ ಬಾಬದಾರ ಕುಟುಂಬದವರು ತಂದ ಪಡಲ್ಗಿಗಳನ್ನು ಮೊದಲು ಶ್ರೀ ಮರ್ಕಿದುರ್ಗಿ ದೇವಸ್ಥಾನಕ್ಕೆ ಒಯ್ದು ಪೂಜಿಸಿ, ನಂತರ ಬಿಡ್ಕಿಬೈಲಿನಲ್ಲಿರುವ ಜಾತ್ರಾ ಗದ್ದುಗೆಯಲ್ಲಿ ಇರಿಸಿ ಪೂಜೆ ಸಲ್ಲಿಸಿ, ತದನಂತರ ಗಾಳಿಮಾಸ್ತಿ ದೇವಸ್ಥಾನಕ್ಕೆ ಒಯ್ದು ಸಂಪ್ರದಾಯಿಕವಾಗಿ ಪೂಜೆ-ಆರತಿ ಸಮರ್ಪಿಸಲಾಯಿತು. ಪಡಲ್ಗಿಗಳಿಗೆ ಸಂಪ್ರದಾಯದಂತೆ ಉಡಿ ತುಂಬುವ ಆಚರಣೆ ನೆರವೇರಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರುಗಳು, ಬಾಬದಾರರು, ಪರಿಚಾರಕರು, ನೌಕರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top