Slide
Slide
Slide
previous arrow
next arrow

ದಾಂಡೇಲಿಯಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ಅನಾವರಣ

300x250 AD

ದಾಂಡೇಲಿ : ನಗರಸಭೆಯ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯ ಅನಾವರಣ ಕಾರ್ಯಕ್ರಮವು ಶನಿವಾರ ಸಂಜೆ ನಗರಸಭೆಯ ಆವರಣದಲ್ಲಿ ಜರುಗಿತು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್  ಪುತ್ಥಳಿಯನ್ನು‌ ಅನಾವರಣಗೊಳಿಸಿ ಮಾತನಾಡಿದ ಶಾಸಕರಾದ ಆರ್.ವಿ.ದೇಶಪಾಂಡೆ, ದಾಂಡೇಲಿಗರ ಬಹು ವರ್ಷಗಳ ಕನಸು ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ‌ ಅನಾವರಣದ ಮೂಲಕ ನನಸಾಗಿದೆ.‌ ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಅಂಬೇಡ್ಕರ್ ಅವರು ಶಿಕ್ಷಣತಜ್ಞ, ನ್ಯಾಯಶಾಸ್ತ್ರಜ್ಞ, ಸಮಾಜ ಸುಧಾರಕ, ಅರ್ಥಶಾಸ್ತ್ರಜ್ಞ ಮತ್ತು ಭಾರತೀಯ ಸಾಮಾಜಿಕ ರಚನೆಯನ್ನು ಸುಧಾರಿಸಲು ಪಟ್ಟುಬಿಡದೆ ಹೋರಾಡಿದ ಭಾರತದ ಶ್ರೇಷ್ಠ ರಾಜಕೀಯ ನಾಯಕರಲ್ಲಿ ಒಬ್ಬರು. ತಮ್ಮ ರಾಜಕೀಯ ಜೀವನದುದ್ದಕ್ಕೂ, ಅವರು ಸಮಾಜದ ಕಲ್ಯಾಣಕ್ಕಾಗಿ ವಿಶೇಷವಾಗಿ ಮಹಿಳೆಯರು ಮತ್ತು ದೀನದಲಿತ ವರ್ಗಕ್ಕಾಗಿ ಕೆಲಸ ಮಾಡಿದರು. ಅಂಬೇಡ್ಕರ್ ಅವರ ಪುತ್ಥಳಿಯನ್ನು ಸ್ಥಾಪಿಸುವ ಮೂಲಕ ನಾವು ಅವರ ಆದರ್ಶಗಳನ್ನು‌ ಪಾಲಿಸಿ ಸದೃಢ ಸಮಾಜ ನಿರ್ಮಾಣಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಕರೆ‌ ನೀಡಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ.ಒಕ್ಕುಂದ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರು ನಡೆದು‌ ಬಂದ ಹಾದಿಯನ್ನು‌ ವಿವರಿಸಿದರು.

ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ತಯಾರಿಸಿದ ಕಲಾವಿದ ಕೊಲ್ಲಾಪುರದ ಡೊಂಗರಸಾಲಿ ದಂಪತಿಗಳನ್ನು ಸನ್ಮಾನಿಸಲಾಯ್ತು. ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿ ವತಿಯಿಂದ ಆರ್.ವಿ.ದೇಶಪಾಂಡೆ ಅವರನ್ನು, ಪೌರಾಯುಕ್ತರಾದ ಆರ್.ಎಸ್.ಪವಾರ್ ಮತ್ತು ನಗರಸಭೆಯ ಲೆಕ್ಕಾಧಿಕಾರಿ ಮೈಕಲ್ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು.

300x250 AD

ಪೌರಾಯುಕ್ತರಾದ ಆರ್.ಎಸ್.ಪವಾರ್ ಸಂವಿಧಾನದ ಪಿಠೀಕೆಯನ್ನು ಓದಿದರು. ಬಾಲಕಿ‌ ಹರ್ಷಿತಾ ಆರ್. ಮಾಲಕರಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತಾಗಿ ಮಾತಾನಾಡಿದರು.

ವೇದಿಕೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಶಾಹಿದಾ ಪಠಾಣ್, ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರಾದ ರಾಜಶೇಖರ್.ಐ.ಎಚ್,  ನಗರ ಸಭೆಯ ನಿಕಟ ಪೂರ್ವ ಅಧ್ಯಕ್ಷ ಸರಸ್ವತಿ ರಜಪೂತ, ನಿಕಟ ಪೂರ್ವ ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಅನಿಲ್ ನಾಯ್ಕರ್, ನಂದೀಶ್ ಮುಂಗರವಾಡಿ, ಅಷ್ಪಾಕ್ ಶೇಖ, ಮೋಹನ‌ ಹಲವಾಯಿ, ಮಜೀದ್ ಸನದಿ, ಮಹಾದೇವ ಜಮಾದಾರ, ಆಸೀಪ್‌ ಮುಜಾವರ, ರುಕ್ಮಿಣಿ ಬಾಗಾಡೆ, ಪ್ರೀತಿ ನಾಯರ್, ಶಿಲ್ಪಾ‌ ಕೋಡೆ, ಸುಧಾ ರಾಮಲಿಂಗ ಜಾಧವ್, ಸಪೂರ ಯರಗಟ್ಟಿ, ವೆಂಕಟ್ರಮಣಮ್ಮ‌ ಮೈಥುಕುರಿ, ರುಹಿನಾ ಖತೀಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಆರ್.ಹೆಗಡೆ, ಆಶ್ರಯ ಸಮಿತಿ ಸದಸ್ಯರಾದ ಪ್ರಭುದಾಸ ಎನಿಬೇರಾ, ಪ್ರಮೀಳಾ‌ ಮಾನೆ, ಸರಸ್ವತಿ ಚೌವ್ಜಾಣ್, ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಉಪಾಧ್ಯಕ್ಷರಾದ ಚಂದ್ರಕಾಂತ ನಡಿಗೇರ ‌ಮೊದಲಾದವರು ಉಪಸ್ಥಿತರಿದ್ದರು.

ಕನ್ಯಾ ವಿದ್ಯಾಲಯದ ಪ್ರಾಚಾರ್ಯರಾದ ಹನುಮಂತ ಕುಂಬಾರ್ ಅವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು

Share This
300x250 AD
300x250 AD
300x250 AD
Back to top