Slide
Slide
Slide
previous arrow
next arrow

ಶಿರಡಿ ಸಾಯಿಬಾಬಾ ವಾರ್ಷಿಕ‌ ವರ್ಧಂತಿ ಉತ್ಸವ ಸಂಪನ್ನ

300x250 AD

ದಾಂಡೇಲಿ : ಬಸವೇಶ್ವರ ನಗರದ ಶ್ರೀಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ 18ನೇ ವಾರ್ಷಿಕ ವರ್ಧಂತಿ ಉತ್ಸವವು ಶನಿವಾರ ಸಂಭ್ರಮ, ಸಡಗರದಿಂದ ಜರುಗಿತು.

ಬೆಳಗ್ಗಿನಿಂದಲೇ ವಿವಿಧ ಪೂಜಾರಾಧನಗಳೊಂದಿಗೆ ಆರಂಭಗೊಂಡ ವರ್ಧಂತಿ ಉತ್ಸವದಲ್ಲಿ ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಜರುಗಿತು. ತದನಂತರ ಲೋಕ ಕಲ್ಯಾಣಾರ್ಥವಾಗಿ ಪುರುಷ ಸೂಕ್ತ ಹವನ ಹಾಗೂ ಪೂರ್ಣಹುತಿ ಪೂಜಾ ಕಾರ್ಯಕ್ರಮ ಜರಗಿತು. ಮಧ್ಯಾಹ್ನ ಶ್ರೀ ಶಿರಡಿ ಸಾಯಿಬಾಬಾರವರ ಮಹಾ ಮಂಗಳಾರತಿಯಾದ ನಂತರ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

300x250 AD

ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದ್ದರು. ವಾರ್ಷಿಕ ವರ್ಧಂತಿ ಉತ್ಸವಕ್ಕೆ ಶ್ರೀ.ಶಿರಡಿ ಸಾಯಿಬಾಬಾ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಭಕ್ತಾಭಿಮಾನಿಗಳು ಶ್ರಮಿಸಿದ್ದರು.

Share This
300x250 AD
300x250 AD
300x250 AD
Back to top