ಜೋಯಿಡಾ: ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಬಿ.ಜಿ.ವಿ.ಎಸ್ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜು ರಾಮನಗರದ ಕುಸ್ತಿ ಕ್ರೀಡಾಪಟುಗಳು ಸಾಧನೆ ಗೈದಿದ್ದಾರೆ.
ಕುಮಾರಿ ಸಾಲಿನ ಎಸ್. ಸಿದ್ದಿ ಇವಳು 60 ಕೆಜಿ ವಿಭಾಗದಲ್ಲಿ ಬಂಗಾರದ ಪದಕ ಪಡೆಯುವ ಮೂಲಕ ಕನಕಗಿರಿ ಮಹಿಳಾ ಕೇಸರಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಕುಮಾರಿ ಪ್ರಿನ್ಸಿಟಾ ಫರ್ನಾಂಡಿಸ್ ಇವಳು 65 ಕೆಜಿ ವಿಭಾಗದಲ್ಲಿ ದ್ವಿತೀಯ ಮತ್ತು ಕುಮಾರಿ ಗಾಯತ್ರಿ ಆರ್. ಸುತಾರ್ ಇವಳು 59 ಕೆ.ಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರ ಸಾಧನೆಗೆ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಕಾರವಾರದ ಅಧ್ಯಕ್ಷೆ ಶ್ರೀಮತಿ ವನಿತಾ ಪಿ.ರಾಣೆ, ಉಪಾಧ್ಯಕ್ಷ ಉಲ್ಲಾಸ್ ನಾಯ್ಕ್. ಕಾರ್ಯದರ್ಶಿ ಮಂಜುನಾಥ ಪವಾರ್. ಜಂಟಿ ಕಾರ್ಯದರ್ಶಿ ಕಿಶೋರ್ ರಾಣೆ ಹಾಗು ಎಲ್ಲ ಸದಸ್ಯರು ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷರು ಗಜೇಂದ್ರ ಗಾಂಧಲೆ ಹಾಗೂ ಎಲ್ಲಾ ಸದಸ್ಯರು ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸಂಜಯ್ ಗೌಡ, ಪ್ರಾಚಾರ್ಯ ಪ್ರೇಮಾನಂದ ಪರಭ ಶುಭವನ್ನು ಹಾರೈಸಿದ್ದಾರೆ.