Slide
Slide
Slide
previous arrow
next arrow

ಮಾ.4,5ಕ್ಕೆ ಕರ್ಜಗಿ ಚಂಡಿಕಾದೇವಿ ಪುನರ್ ಪ್ರತಿಷ್ಠಾಪನೆ: ಯಕ್ಷಗಾನ ಪ್ರದರ್ಶನ

300x250 AD

ಸಿದ್ದಾಪುರ: ತಾಲೂಕಿನ ಕರ್ಜಗಿಯ ನೂತನ ಚಂಡಿಕಾದೇವಿ ದೇವಸ್ಥಾನದಲ್ಲಿ ಚಂಡಿಕಾದೇವಿ ಪುನರ್ ಪ್ರತಿಷ್ಠಾಪನೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಮಾ.4 ಹಾಗೂ 5ರಂದು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಲಿದೆ ಎಂದು ದೇವಸ್ಥಾನದ ವ್ಯವಸ್ಥಾಪಕರಾದ ಸುರೇಶ ಮಂಜುನಾಥ ಶೇಟ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು ಶಕ್ತಿ ಮಾತೆ ಚಂಡಿಕಾದೇವಿ ಪೂರ್ವೇತಿಹಾಸ ಹೊಂದಿರುವ ಜಗನ್ಮಾತೆಯಾಗಿದೆ. ಶಿಥಿಲಗೊಂಡ ದೇವಸ್ಥಾನವನ್ನು ಭಕ್ತರ ಹಾಗೂ ಸ್ಥಳೀಯರ ಸಹಕಾರದಿಂದ ಸುಮಾರು ಒಂದು ಕೋಟಿ ರೂ.ಗಳಲ್ಲಿ ದೇವಸ್ಥಾನವನ್ನು  ನಿರ್ಮಿಸಲಾಗಿದೆ. 

ವಿದ್ವಾನ ವಿಶ್ವನಾಥ ಭಟ್ಟ ನೀರಗಾನ ಇವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಾ.4ರಂದು ಬೆಳಗ್ಗೆ ಪಂಚಗವ್ಯ ಹೋಮ, ಸ್ಥಳ ಶುದ್ಧಿ, ಗುರುಗಣಪತಿ ಪ್ರಾರ್ಥನೆ ಸಂಕಲ್ಪ ಋತ್ವಿಕವರಣ,ಮಹಾಗಣಪತಿ ಹೋಮ, ಚಂಡಿಪಾಠ, ಚೌಡಿಪೂಜೆ, ಸಂಜೆ ರಾಕ್ಷೋಘ್ನ ವಾಸ್ತು ಹೋಮ, ಬಲಿ, ಕಲಶಸ್ಥಾಪನೆ,ರಾಜೋಪಚಾರ ಪೂಜೆ. ಮಾ.5ರಂದು ಆಧಿವಾಸ ಹೋಮ, ಜಪ, ಶ್ರೀದೇವರ ಪ್ರತಿಷ್ಠೆ,ಶಾಂತಿ, ಪ್ರಾಯಶ್ಚಿತ್ತ, ಕಲಾಸಾನಿಧ್ಯ, ಹೋಮ, ಪೂರ್ಣಾಹುತಿ, ಶಿಖರ ಪ್ರತಿಷ್ಠಾಪನೆ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಬೆಳಗ್ಗೆ ಶ್ರೀಗಳರವರನ್ನು ಮೆರವಣಿಗೆ ಹಾಗೂ ಪೂರ್ಣಕುಂಬದೊಂದಿಗೆ ಸ್ವಾಗತಿಸಲಾಗುತ್ತದೆ.

ಮಧ್ಯಾಹ್ನ 12ಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ, ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ  ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಯವರ  ದಿವ್ಯ ಸಾನ್ನಿಧ್ಯದಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ, ಶಾಸಕ ಭೀಮಣ್ಣ ನಾಯ್ಕ, ಸಂಸದ ಅನಂತಕುಮಾರ ಹೆಗಡೆ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸುರೇಶ ಎಂ.ಶೇಟ್ ಕರ್ಜಗಿ, ಹಸರಗೋಡ ಗ್ರಾಪಂ ಸದಸ್ಯ ಪ್ರದೀಪ ಹೆಗಡೆ, ಆರ್.ಜಿ. ಶೇಟ್ ಕಾನಸೂರು, ಉಪೇಂದ್ರ ಪೈ, ಗಣಪತಿ ಶೇಟ್ ಶಿರಸಿ, ಕೆ.ಟಿ.ಗೌಡ ಕಾರವಾರ, ದಿನೇಶ ಎನ್. ಗೌಡ ಬೀರಗದ್ದೆ, ಗಣಪತಿ ಭಟ್ಟ ಕರ್ಜಗಿ, ಚಂದ್ರ ಗೌಡ, ಸುಬ್ರಾಯ ಕುಪ್ಪ ಗೌಡ ಇತರರು ಉಪಸ್ಥಿತರಿರುತ್ತಾರೆ.

300x250 AD

ಇದೇ ಸಂದರ್ಭದಲ್ಲಿ ಡಾ.ಉಮೇಶ ಭದ್ರಾಪುರ ರಚಿಸಿದ ‘ಕರ್ನಾಟಕದ ಕರೆ ಒಕ್ಕಲಿಗರು’ ಕೃತಿಯನ್ನು ಜಗದ್ಗುರುಗಳು ಬಿಡುಗಡೆ ಮಾಡುವರು. ರಾತ್ರಿ 9.30ರಿಂದ ಸಿಗಂದೂರು ಯಕ್ಷಗಾನ ಮಂಡಳಿಯವರಿಂದ ‘ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ದೇವಸ್ಥಾನ ಕಮಿಟಿ ಅಧ್ಯಕ್ಷ ಸುಧಾಕರ ಡಿ.ಗೌಡ, ಕಟ್ಟಡ ಸಮಿತಿ ಅಧ್ಯಕ್ಷ ದೇವೇಂದ್ರ ಎಸ್.ಗೌಡ, ಆರ್ಥಿಕ ಸಮಿತಿ ಸದಸ್ಯ ಸೀತಾರಾಮ ಗೌಡ, ಉಮಾಕಾಂತ ಗೌಡ, ಮಹಾಬಲೇಶ್ವರ ಡಿ.ಗೌಡ, ದುಗ್ಗು ಪಿ. ಗೌಡ ಇದ್ದರು.

Share This
300x250 AD
300x250 AD
300x250 AD
Back to top