Slide
Slide
Slide
previous arrow
next arrow

ಮಾ.4ಕ್ಕೆ ಶಿರಸಿಯಲ್ಲಿ ‘ಬಹುಮುಖಿ’ ನಾಟಕ ಪ್ರದರ್ಶನ

300x250 AD

ಶಿರಸಿ: ಸಿದ್ದಾಪುರದ ಹಿತ್ಲಕೈನ ಒಡ್ಡೋಲಗ (ರಿ) ರಂಗ ಪರ್ಯಟನ 2023-24 ರ ತಂಡವು ಮಾ.4, ಸೋಮವಾರದಂದು ಶಿರಸಿಯ ನೆಮ್ಮದಿ ರಂಗಧಾಮದಲ್ಲಿ ಬಹುಮುಖಿ ಎಂಬ ನಾಟಕವನ್ನು ಪ್ರದರ್ಶಿಸಲಿದೆ.

ವಿನೂತನವಾದ ಈ ನಾಟಕವನ್ನು ಉತ್ತರ ಕನ್ನಡ ಜಿಲ್ಲೆಯವರಾದ ಖ್ಯಾತ ಸಾಹಿತಿ ವಿವೇಕ ಶಾನಭಾಗ  ರಚಿಸಿದ್ದು, ನೀನಾಸಂ ಪದವೀಧರರಾದ ಗಣಪತಿ ವಿ. ಹಿತ್ಲಕೈ ಇವರು ನಿರ್ದೇಶಿಸಿದ್ದಾರೆ. ಸಂಜೆ 6.45 ಕ್ಕೆ ಪ್ರಾರಂಭವಾಗುವ ಈ ನಾಟಕ ಪ್ರದರ್ಶನಕ್ಕೆ ಟಿ.ಎಸ್.ಎಸ್. ಶಿರಸಿ, ಕೆ.ಡಿ.ಸಿ.ಸಿ. ಬ್ಯಾಂಕ್ ಶಿರಸಿ, SCODWES ಶಿರಸಿ, ನಯನಾ ಫೌಂಡೇಶನ್ ಶಿರಸಿ, ನೆಮ್ಮದಿ ಸಂಘಟನಾ ಮುಖ್ಯಸ್ಥರು ಶಿರಸಿ, ಟಿ.ಎಮ್.ಎಸ್. ಶಿರಸಿ, ಸಾಮ್ರಾಟ್ ಹೊಟೇಲ್ ಶಿರಸಿ ಇವರ ಸಹಕಾರವಿದೆ. ಪ್ರತಿ ವರ್ಷ ಒಂದು ಹೊಸನಾಟಕ ಸಿದ್ಧಪಡಿಸಿ ನಾಡಿನಾದ್ಯಂತ ಸಂಚರಿಸುವ ಈ ತಂಡವು ನೀನಾಸಂ ಹಾಗೂ ಅನುಭವಿ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶಿಸುತ್ತಿದೆ. ರಂಗಾಸ್ತಕರು ಕಲಾಭಿಮಾನಿಗಳು ಆಗಮಿಸಿ ನಾಟಕ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಸಂಘಟಕರು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top