Slide
Slide
Slide
previous arrow
next arrow

ಮಾ.3ಕ್ಕೆ ಗೋಳಿಯಲ್ಲಿ ‘ಬಹುಮುಖಿ’ ನಾಟಕ ಪ್ರದರ್ಶನ

300x250 AD

ಸಿದ್ದಾಪುರ: ತಾಲೂಕಿನ ಹಿತ್ಲಕೈನ ಒಡ್ಡೋಲಗ (ರಿ) ರಂಗ ಪರ್ಯಾಟನ 2023-24 ರ ತಂಡವು ಮಾ.3 ಭಾನುವಾರದಂದು ನಾಟಕದ ಮಹತ್ತರ ಇತಿಹಾಸ ಹೊಂದಿರುವ ಗೋಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ “ಬಹುಮುಖಿ” ಎಂಬ ನಾಟಕವನ್ನು ಪ್ರದರ್ಶಿಸಲಿದೆ.

ಖ್ಯಾತ ಸಾಹಿತಿಗಳಾದ ವಿವೇಕ ಶಾನಭಾಗ ರಚನೆಯ ಈ ನಾಟಕವನ್ನು ಗಣಪತಿ ಬಿ ಹಿತ್ಲಕೈ ನಿರ್ದೇಶಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಬೆಂಗಳೂರು ಹಾಗೂ ಸ್ಥಳೀಯ ಸಂಘಟನೆಗಳು ಹಾಗೂ ಕಲಾಪೋಷಕರು ಸಹಕಾರದಲ್ಲಿ ಸಂಜೆ 6.30 ಗಂಟೆಗೆ ಪ್ರಾರಂಭವಾಗಲಿದ್ದು ಕಾರ್ಯಕ್ರಮದ ಶುಭಾರಂಭಕ್ಕೆ  ಕರ್ನಾಟಕ ರಾಜ್ಯ ಗ್ರಾಹಕರ ಸಹಕಾರಿ ಮಹಾ ಮಂಡಳಿ ನಿರ್ದೇಶಕ ಶ್ರೀಪಾದ ಹೆಗಡೆ ಕಡವೆ, ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಗೋಳಿ ಅಧ್ಯಕ್ಷ ಎಮ್.ಎಲ್. ಹೆಗಡೆ, ಶಂಕರ ನಾರಾಯಣ ಹೆಗಡೆ ಹಾರುಗಾರ, ಶ್ರೀ ಸಿದ್ದಿವಿನಾಯಕ ನಾಟ್ಯ ಕಲಾ ಸಂಘ ಗೋಳಿ ಅಧ್ಯಕ್ಷ ಜಿ.ಆರ್.ಭಟ್ಟ ಟೊಣ್ಣೆಮನೆ ಕಾರ್ಯಕ್ರವನ್ನು ಉದ್ಘಾಟಿಸಲಿದ್ದಾರೆ. ರಂಗಾಸಕ್ತರು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಸಂಘಟಕರು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top