Slide
Slide
Slide
previous arrow
next arrow

ಶಿಕ್ಷಕ ಎಮ್.ಎಚ್.ನಾಯ್ಕ್ ನಿವೃತ್ತಿ: ಬೀಳ್ಕೊಡುಗೆ

300x250 AD

ಸಿದ್ದಾಪುರ: ತಾಲೂಕಿನ ಮನಮನೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಮ್.ಎಚ್‌. ನಾಯ್ಕ್ ನಿವೃತ್ತರಾಗಿದ್ದು, ಶಾಲಾ ಎಸ್‌ಡಿಎಮ್‌ಸಿ ವತಿಯಿಂದ ಹಾಗೂ ಗ್ರಾಮಸ್ಥರಿಂದ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭ ಶಾಲೆಯ ಆವರಣದಲ್ಲಿ ನಡೆಯಿತು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ ಸಮಾಜದಲ್ಲಿ ಶಿಕ್ಷಕರ ಪಾತ್ರ ಮುಖ್ಯ, ಶಿಕ್ಷಕ ಸೇವೆಯಿಂದ ನಿವೃತ್ತರಾಗಿದ್ದೀರಿ, ಆದರೆ ಸಮಾಜಕ್ಕೆ ನಿಮ್ಮ ಸೇವೆ ಅಗತ್ಯವಿದೆ ಎಂದರು.  ಸಾಮಾಜಿಕ ಕಾರ್ಯಕರ್ತ ಗಣೇಶ ನಾಯ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ನಾಯ್ಕ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಟಿ.ಮಂಜು, ಪತ್ರಕರ್ತ ಕನ್ನೇಶ ಕೋಲಸಿರ್ಸಿ,ಶಿಕ್ಷಕರಾದ ಎಸ್.ಜಿ ನಾಯ್ಕ, ಸತ್ಯನಾರಾಯಣ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಶಿಕ್ಷಕ ಎಮ್.ಎಚ್.ನಾಯ್ಕ, ಅಧ್ಯಕ್ಷತೆ ವಹಿಸಿದ್ದ  ಎಸ್‌ಡಿಎಮ್‌ಸಿ ಅಧ್ಯಕ್ಷ ಆನಂದ ನಾಯ್ಕ,
ಮಾತನಾಡಿದರು.

ವಿದ್ಯಾರ್ಥಿಗಳಾದ ಇಂದು, ಆದರ್ಶ, ಚಿನ್ಮಯ, ಅಶುತೋಷ, ರಾಧಿಕಾ, ಸಹನ, ಶಿಕ್ಷಕರ ಪರವಾಗಿ ಶ್ರೀಧರ, ಫೂರ್ಣಿಮಾ ನಾಯ್ಕ, ಶ್ರೀನಿವಾಸ ಎಮ್.ಟಿ., ರವಿಕುಮಾರ ,ಜಯಶ್ರೀ,ಲಂಭೋದರ, ಅನಿಸಿಕೆ ವ್ಯಕ್ತಪಡಿಸಿದರು. ಉಪಾಧ್ಯಕ್ಷೆ ವಾಸಂತಿ ನಾಯ್ಕ, ಸದಸ್ಯರು,  ಶಿವಶಂಕರ ಕೋಲಸಿರ್ಸಿ,ಶ್ರೀಮತಿ ವಿಜಯ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕಿ ವಿಜಯಲಕ್ಷ್ಮಿ ನಿರೂಪಣೆ ಮಾಡಿದರು. ಶಿಕ್ಷಕರಾದ ಶ್ರೀಧರ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top