ಅಂಕೋಲಾ: ಯಾವುದೇ ಸಮಾಜ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದರೆ ಆ ಸಮಾಜ ಖಂಡಿತವಾಗಿ ಯಶಸ್ಸು ಗಳಿಸಲು ಸಾಧ್ಯ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಕೆ. ಗಾಂವಕರ ಹೇಳಿದರು.
ಅವರು ಮೀನುಗಾರರ ರಕ್ಷಣಾ ವೇದಿಕೆ ಅಂಕೋಲಾ ಹಾಗೂ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ಇವರ ಸಂಯುಕ್ತ ಆಶ್ರಯದಲ್ಲಿ ಅಂಕೋಲಾ ದೈವಜ್ಞ ಕಲ್ಯಾಣ ಮಂಟಪ ಸಭಾಭವನದಲ್ಲಿ ಹಮ್ಮಿಕೊಂಡ ಮೀನುಗಾರರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಕಠಿಣ ಪರಿಶ್ರಮದ ಮೀನುಗಾರರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವದರ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ. ಹರಿಹರ ಹರಿಕಾಂತ ಅವರಂತಹ ಉತ್ತಮ ಸಂಘಟಕರಿಂದ ಸಮಾಜ ಸಂಘಟನೆಯ ಮೂಲಕ ಯುವ ಸಮೂಹ ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾದ ನ್ಯಾಯವಾದಿ ಜಿ.ಟಿ.ನಾಯ್ಕ ಮಾತನಾಡಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಿಕೊಟ್ಟವರೇ ಮೀನುಗಾರರು. ಒಗ್ಗಟ್ಟಿನಿಂದ ಸಮುದ್ರದ ಅಲೆಯೊಂದಿಗೆ ಹೋರಾಡುವ ಮೀನುಗಾರರು ಅದೇ ಸಿದ್ಧಾಂತದಲ್ಲಿ ಬದುಕುವವರು. ಮೀನುಗಾರರಿಗೆ ಸಂಕುಚಿತ ಮನೋಭಾವನೆ ಬೇಡ. ಎಲ್ಲ ರಂಗದಲ್ಲೂ ಮುಂದೆ ಬರುವ ವಿಫುಲ ಅವಕಾಶವಿದೆ ಆದರೆ ಶಿಕ್ಷಣದಿಂದ ವಂಚಿತರಾಗಬಾರದು. ಮೀನುಗಾರ ಸಮಾಜದಲ್ಲಿ ಅನೇಕ ನಾಯಕರಿದ್ದಾರೆ ಇಂತಹವರ ನೇತೃತ್ವದಲ್ಲಿ ಸಮಾಜವನ್ನು ಬೆಳೆಸಲಿ ಎಂದರು. ಮೀನುಗಾರರ ರಕ್ಷಣಾ ವೇದಿಕೆಯ ಅಧ್ಯಕ್ಷ ಹರಿಹರ ಹರಿಕಾಂತ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಮೀನುಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ, ಸೇಂಟ್ ಮಿಲಾಗ್ರಿಸ್ ಕೋ ಆಪ್ ಸೊಸೈಟಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ದೈವಜ್ಞ ಸಭಾಭವನದ ಅಧ್ಯಕ್ಷ ಗಣೇಶ ಉಪೇಂದ್ರ ಕುಡ್ತಲಕರ ಮಾತನಾಡಿದರು. ಶಿಕ್ಷಕ ಹಾಗೂ ಯಕ್ಷಗಾನ ಕಲಾವಿದ ರಾಜೇಶ ನಾಯಕ ಸೂರ್ವೆ ವಿದ್ಯಾರ್ಥಿಗಳನ್ನುಧ್ದೇಶಿಸಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಹಿರಿಯ ನಿವೃತ್ತ ಉಪನ್ಯಾಸಕ ಟಿ.ಟಿ.ತಾಂಡೇಲ, ಜಿಲ್ಲಾ ಎಂಜಿನೀಯರ್ಸ ಅಸೋಸಿಯೇಶನ್ ಉಪಾಧ್ಯಕ್ಷ ಸಂತೋಷ ನಾಯ್ಕ, ನಾಗರಿಕ ವೇದಿಕೆ ಅಧ್ಯಕ್ಷ ನಾಗರಾಜ ನಾಯ್ಕ, ಹಾರವಾಡ ಗ್ರಾ.ಪಂ. ಉಪಾಧ್ಯಕ್ಷ ಸಂತೋಷ ದುರ್ಗೇಕರ, ಬೊಬ್ರುವಾಡ ಗ್ರಾ.ಪಂ. ಉಪಾಧ್ಯಕ್ಷೆ ಪರಮೇಶ್ವರಿ ಪಿರನಕರ ಉಪಸ್ಥಿತರಿದ್ದರು. ಜಿ.ಆರ್. ತಾಂಡೇಲ ಸ್ವಾಗತಿಸಿದರು. ಸೃಷ್ಠಿ ಸಂಗಡಿಗರು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಮೀನುಗಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರ ನೀಡಲಾಯಿತು. ಹಾಗೂ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಇದೇ ವೇಳೆ ಹಿರಿಯ ನಿವೃತ್ತ ಉಪನ್ಯಾಸಕರಾದ ಟಿ.ಟಿ. ತಾಂಡೇಲ, ಡಾ.ಪ್ರಕಾಶ ಮೆಸ್ತಾ, ನಿವೃತ್ತ ಸೈನಿಕ ಮಹೇಶ ಹರಿಕಂತ್ರ, ಹರಿಶ್ಚಂದ್ರ ಎಂ ತಾಂಡೇಲ, ತೇಜಸ್ವಿ ಈಶ್ವರ ತಾಂಡೇಲ, ಜನ್ಮಿತಾ ಕಾಶಿನಾಥ ಹರಿಕಂತ್ರ, ಕುಮಾರ ಬಿ ಎಲ್ ಸೃಜನ್, ಸೌಜನ್ಯ ಖಾರ್ವಿ, ಗಣೇಶ ಕುಡ್ತಲಕರ ಹಾಗೂ ಸಂಘಟಕ ಹರಿಹರ ಹರಿಕಾಂತ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.