ಹೊನ್ನಾವರ: ರೋಟರಿ ಕ್ಲಬ್ ಹೊನ್ನಾವರ ಆಶ್ರಯದಲ್ಲಿ ಆರೋಗ್ಯ ರಕ್ಷಣೆಯಲ್ಲಿ ಸೈಕಲ್ ತುಳಿಯುವುದರ ಮಹತ್ವ ಸಾರುವ ಉದ್ದೇಶದಿಂದ ‘ಗೊಡ್ವಿನ್ ಸೈಕಲ್ ರೇಸ್’ ಎಂಬ ಜಿಲ್ಲಾ ಮಟ್ಟದ ಸೈಕಲ್ ರೇಸ್ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಹೊನ್ನಾವರದ ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಜಿ ಧ್ವಜ ತೋರಿಸಿ ಸೈಕಲ್ ರೇಸ್ ಸ್ಪರ್ಧೆಗೆ ಚಾಲನೆ ನೀಡಿದರು. ಈ ಸ್ಪರ್ಧೆಯು ಹೊನ್ನಾವರದಿಂದ ಪ್ರಾರಂಭವಾಗಿ ಕುಮಟಾ ತಲುಪಿ ಮತ್ತೆ ಹೊನ್ನಾವರಕ್ಕೆ ಬಂದು ಓಟ್ಟು 40 ಕಿ.ಮೀ ಕ್ರಮಿಸಿ ಸಂಪನ್ನಗೊಂಡಿತು.
ಉಡುಪಿ, ಭಟ್ಕಳ, ಹೊನ್ನಾವರ, ಶಿರಸಿ ಸೇರಿ ಸುಮಾರು 70 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಪ್ರಥಮ ಬಹುಮಾನ ಗುರುರಾಜ ಎನ್ ಹೆಗಡೆ ಶಿರಸಿ, ದ್ವಿತೀಯ ಬಹುಮಾನ ವಿಷ್ಣು ತೊಡ್ಕರ್ ಕಾರವಾರ ಮತ್ತು ತೃತೀಯ ಬಹುಮಾನ ನಾಗರಾಜ ಗೌಡ ಕರ್ಕಿ ಪಡೆದುಕೊಂಡರು.
ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಜಿ ಮಾತನಾಡಿ, ಪ್ರತಿಭೆಯನ್ನು ಗುರುತಿಸುವ ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ಸಂಘಟಕರಿಗೆ ಅಭಿನಂದಿಸಿದರು. ಸೈಂಟ್ ಮಿಲಾಗ್ರಿಸ್ ಸಂಸ್ಥೆಯ ಅಧ್ಯಕ್ಷ ಜಾರ್ಜ್ ಎಸ್ ಫರ್ನಾಂಡೀಸ್ ಮಾತನಾಡಿ ರೊಟರಿ ಹೊನ್ನಾವರ ಕಳೆದ ಹಲವು ವರ್ಷಗಳಿಂದ ಹೊನ್ನಾವರದಲ್ಲಿ ರಾಷ್ಟ್ರಮಟ್ಟದ ಅಂದ ಮಕ್ಕಳ ಚೆಸ್ ಸ್ಪರ್ದೆ, ಸೈಕಲ್ ರೇಸ್ ಹೀಗೆ ಅತ್ಯುತ್ತಮ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನಮನ್ನಣೆ ಗಳಿಸುತ್ತಿದೆ. ತಮ್ಮ ಉತ್ತಮ ಚಟುವಟಿಕೆಗಳಿಂದ ಈ ಬಾರಿ ರೋಟರಿ ಹೊನ್ನಾವರ 7 ಪ್ರಶಸ್ತಿಯನ್ನು ಗಳಿಸಿದ ಸಂಸ್ಥೆಯ ಸರ್ವ ಸದಸ್ಯರಿಗೆ ಅಭಿನಂದಿಸಿದರು.
ಸೇಫ್ ಸ್ಟಾರ್ ಸೌಹಾರ್ದ ಅಧ್ಯಕ್ಷರಾದ ಜಿ.ಜಿ. ಶಂಕರ ಮಾತನಾಡಿ, ವಿಶ್ವದಾದ್ಯಂತ ಧರ್ಮ, ಜಾತಿ, ರಾಜಕಾರಣ ಮುಕ್ತ ಸಂಸ್ಥೆಯಾಗಿ ಹೆಸರು ಗಳಿಸಿದೆ. ರೋಟರಿ ಸಂಸ್ಥೆಯು ಸಂಕಷ್ಟದ ಸಮಯದಲ್ಲಿ ಭಾರತವನ್ನು ಪೋಲಿಯೊ ಮುಕ್ತಗೊಳಿಸಲು ಮುಂದೆ ಬಂದು ನಿರಂತರ ಸೇವೆಯನ್ನು ನೀಡುತ್ತಾ ಬಂದಿದೆ. ಈ ದಿಸೆಯಲ್ಲಿ ಆರೋಗ್ಯ ರಕ್ಷಣೆಯಲ್ಲಿ ಸೈಕಲ್ ತುಳಿಯುವುದರ ಮಹತ್ವ ಸಾರುವ ಉದ್ದೇಶದಿಂದ ಸೈಕಲ್ ರೇಸ್ ಆಯೋಜಿಸಿದಕ್ಕಾಗಿ ಸಂತಸ ವ್ಯಕ್ತಪಡಿಸಿದರು.
ಅಧ್ಯಕ್ಷರಾದ ರೊ.ದೀಪಕ ಲೋಪಿಸ್ ಅತಿಥಿಗಳನ್ನು ಸ್ವಾಗತಿಸಿದರು. ರೊ. ದಿನೇಶ ಕಾಮತ ಕಾರ್ಯಕ್ರಮವನ್ನು ನಿರೂಪಿಸಿದರು. ರೊ. ರಾಜೇಶ ನಾಯ್ಕ ವಂದನಾರ್ಪಣೆಯನ್ನು ನಿರ್ವಹಿಸಿದರು. ರೊ. ಶ್ರೀಕಾಂತ ನಾಯ್ಕ ಇವೆಂಟ್ ಚೇರ್ಮೆನ ಆಗಿ ಕಾರ್ಯನಿರ್ವಹಿಸಿದರು. ಸ್ಪರ್ಧೆಯ ನಿರ್ಣಾಯಕರಾಗಿ ಜಾಕೊಬ್ ಫರ್ನಾಂಡೀಸ್ ಕಾರ್ಯ ನಿರ್ವಹಿಸಿದರು. ರೋಟರಿ ಕ್ಲಬ್ ಕುಮಟಾ ಮತ್ತು ರೋಟರಿ ಕ್ಲಬ್ ಗೋಕರ್ಣ ದ ಸದಸ್ಯರು ಸೈಕಲ್ ರೇಸ್ ನಿರ್ವಹಿಸಲು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಗೊಡ್ವಿನ್ ಸೈಕಲ್ ಮಾಲೀಕರಾದ ಮಹಮ್ಮದ ಅಖಿಲ್ ಖಾಜಿ, ಹೀರೊ ಸೈಕಲ್ ಏರಿಯಾ ಮ್ಯಾನೆಜರ್ ಇಂತಿಯಾಜ ಗೊಲಸಂಗಿ ರೊ. ಸ್ಟಿಫನ್ ರೊಡ್ರಿಗಸ್, ರೊ ಮಹೆಶ ಕಲ್ಯಾಣಪುರ, ರೊ. ಎಸ್.ಎಂ ಭಟ್, ರೊ ರಂಗನಾಥ ಪೂಜಾರಿ, ರೊ ಹೆನ್ರಿ ಲಿಮಾ, ರೊ.ಎಸ್.ಎನ್. ಹೆಗಡೆ, ರೊ. ಡಾ. ಆಶಿಕ್ ಹೆಗ್ಡೆ, ರೊ. ಡಾ. ರಾಜೇಶ ಕಿಣಿ ಉಪಸ್ತಿತರಿದ್ದರು.