Slide
Slide
Slide
previous arrow
next arrow

ಶಿಕ್ಷಕರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಿ; ಎಂ.ಎಚ್. ನಾಯ್ಕ

300x250 AD

ಸಿದ್ದಾಪುರ: ಮಾನವೀಯ ಸಂಬಂಧಗಳಿಗೆ ಅತಿಹೆಚ್ಚು ಗೌರವ ಕೊಡುವಲ್ಲಿ ಉಳಿದೆಲ್ಲ ಇಲಾಖೆಗಳಿಗಿಂತ ಶಿಕ್ಷಣ ಇಲಾಖೆ ಮುಂಚೂಣಿಯಲ್ಲಿದೆ. ವಿದ್ಯೆ ಮತ್ತು ಅರಿವನ್ನು ವಿಸ್ತರಿಸುವ ಕಾರ್ಯ ಶಿಕ್ಷಣ ಇಲಾಖೆಯ ಎಲ್ಲರಿಂದ ಆಗುತ್ತಿದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕ ಪಿ.ಬಸವರಾಜ ಹೇಳಿದರು.

ಅವರು ತಾಲೂಕಿನ ಶಿಕ್ಷಕರ ವೇದಿಕೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ,ಮಾಧ್ಯಮಿಕ ಶಾಲಾ ನೌಕರರ ಸಂಘ ಇವುಗಳ ಸಹಯೋಗದಲ್ಲಿ ಪಟ್ಟಣದ ಬಾಲಭವನದಲ್ಲಿ ಹಮ್ಮಿಕೊಂಡ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆಯ್.ನಾಯ್ಕ ಅವರ ಬೀಳ್ಕೊಡುಗೆ ಮತ್ತು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ ಅವರ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಇಲಾಖೆಯ ಬೇರೆ ಬೇರೆ ಹಂತಗಳಲ್ಲಿ ಕಾರ್ಯನಿರ್ವಹಿಸಿದವರು ಜಿ.ಆಯ್.ನಾಯ್ಕ. ವ್ಯಕ್ತಿಯೊರ್ವನಲ್ಲಿ ಬದ್ಧತೆ ಇದ್ದಾಗ ಅತ್ಯುತ್ತಮ ಸಾಧನೆ ಮಾಡಬಹುದು ಎನ್ನುವದಕ್ಕೆ ಇವರು ನಿದರ್ಶನ.ವೃತ್ತಿಯಲ್ಲಿ ಎದುರಾಗುವ ಅಡೆ ತಡೆಗಳನ್ನು ಸಮಾಧಾನ ಚಿತ್ತದಿಂದ ಗ್ರಹಿಸಿ, ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಹರಿಸುವ ಮನಸ್ಥಿತಿ ಅವರದ್ದು. ಅವರಿಂದ ಶಿಕ್ಷಣ ಇಲಾಖೆಗೆ ಅಮೂಲ್ಯವಾದ ಕೊಡುಗೆಗಳು ದೊರೆಕಿವೆ ಎಂದರು.

ಸನ್ಮಾನ ಸ್ವೀಕರಿಸಿದ ಜಿ.ಆಯ್.ನಾಯ್ಕ ಮಾತನಾಡಿ ನನ್ನ ಸೇವಾವಧಿಯಲ್ಲಿ ಕಾರ್ಯನಿರ್ವಹಿಸಿದ್ದರ ಕುರಿತು ಸಂತೃಪ್ತಿ ಇದೆ. ಇದು ಮರೆಯಲಾಗದ್ದು. ಬುದ್ಧಿಶಾಲಿ ಮಕ್ಕಳ ಜೊತೆಗೆ ಕೆಳಹಂತದಲ್ಲಿರುವ ಮಕ್ಕಳನ್ನೂ ಶೈಕ್ಷಣಿಕವಾಗಿ ಉತ್ತಮಗೊಳಿಸುವ ಜವಾಬ್ದಾರಿ ಇರುವ ಶಿಕ್ಷಕರು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.

300x250 AD

ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಿ.ಆಯ್.ನಾಯ್ಕ ಓರ್ವ ಸಜ್ಜನ,ಮಾನವೀಯ ಮೌಲ್ಯದ ವ್ಯಕ್ತಿ. ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದವರು. ನಾವೆಲ್ಲರೂ ಇನ್ನಷ್ಟು ಶೈಕ್ಷಣಿಕ ಪ್ರಗತಿಗೆ ಪ್ರಯತ್ನಿಸೋಣ ಎಂದರು.ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ,ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ,ನಾಮಧಾರಿ ನೌಕರರ ಸಂಘದ ಅಧ್ಯಕ್ಷ ರವಿ ನಾಯ್ಕ,ಪ್ರೌ.ಶಾ.ಸಹ ಶಿ.ಸಂಘದ ಅಧ್ಯಕ್ಷ ಟಿ.ಕೆ.ನಾಯ್ಕ, ಮಾ.ಶಾ.ನೌ.ಸಂಘದ ಕಾರ್ಯದರ್ಶಿ ಲೋಕೇಶ ನಾಯ್ಕ,ಪ್ರೌ.ಸ.ಶಿ.ಸಂಘದ ಕಾರ್ಯದರ್ಶಿ ಚಂದ್ರಶೇಖರ ನಾಯ್ಕ,ಶಿ.ವೇದಿಕೆ ಕಾರ್ಯದರ್ಶಿ ಮಹೇಶ ಶೇಟ್, ಎಂ.ಎಂ.ಅಂಬಿಗಾರ್, ಎಚ್.ಪಾಲೇಕರ,ರೀಟಾ ಮುಂತಾದವರು ಮಾತನಾಡಿದರು. ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್.ಪಮ್ಮಾರ ಇದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಕೆ.ನಾಯ್ಕ ಕಡಕೇರಿ ಸ್ವಾಗತಿಸಿದರು.ಗಣೇಶ ಪೂಜಾರಿ, ಸಂತೋಷ ಅಳ್ವೆಕೋಡಿ ನಿರೂಪಿಸಿದರು. ಶ್ರೀಕಾಂತ ನಾಯ್ಕ ವಂದಿಸಿದರು.

Share This
300x250 AD
300x250 AD
300x250 AD
Back to top