Slide
Slide
Slide
previous arrow
next arrow

‘ಕಲ್ಭಾಗ’ ಸಂಗೀತದ ತವರೂರು: ಸುಬ್ರಹ್ಮಣ್ಯ ಭಟ್

300x250 AD

ಹೊನ್ನಾವರ: ಉತ್ತರಕನ್ನಡ ಜಿಲ್ಲೆಯಲ್ಲಿ ಅನೇಕ ಸಂಗೀತ ಕಲಾವಿದರಿದ್ದಾರೆ. ಸಂಗೀತದ ತವರೂರು ಕಲ್ಭಾಗ ಎಂದರೆ ತಪ್ಪಾಗಲಾರದು ಎಂದು  ಶ್ರೀ ಕರಿಕಾನಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಭಟ್ ಅಭಿಪ್ರಾಯಪಟ್ಟರು. 

ಕಲಾಮಂಡಲ ಹೊನ್ನಾವರ ಎಸ್.ಕೆ.ಪಿ ಮ್ಯೂಸಿಕ್ ಟ್ರಸ್ಟ್ ಅರೇಅಂಗಡಿ , ಎಸ್.ಕೆ.ಪಿ ಟ್ರಸ್ಟ್ ನಿಲ್ಕೋಡ್ ಇವರ ಸಹಯೋಗದೊಂದಿಗೆ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ಆಯೋಜಿಸಿದ 26ನೇ ವರ್ಷದ “ಬೆಳದಿಂಗಳ ಸಂಗೀತೋತ್ಸವ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಚಿಕ್ಕ ಕಾರ್ಯಕ್ರಮದಿಂದ ಆರಂಭಗೊಂಡ ಬೆಳದಿಂಗಳ ಸಂಗೀತೊತ್ಸವ 26ನೇ ವರ್ಷಕ್ಕೆ ಬೃಹದಾಕಾರವಾಗಿ ಬೆಳೆದು ದೇಶ ವಿದೇಶದ ಕಲಾಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿದೆ. ಈ ಬಾರಿಯ ಕಾರ್ಯಕ್ರಮಕ್ಕೆ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದ ಟ್ರಸ್ಟ್ ಸಂಪೂರ್ಣ ಸಹಕಾರ ನೀಡಿರುವುದು ವಿಶೇಷವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ ಸಂಗೀತ ಕಲೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಲು ಸರ್ಕಾರ ಮಾಡಬೇಕಾದ ಕಾರ್ಯವನ್ನು ಇಲ್ಲಿ ಸಂಘಟನೆಯವರು ಮಾಡುತ್ತಿರುವುದು ಮೆಚ್ಚಲೆಬೇಕಿದೆ. ನನ್ನ ಕ್ಷೇತ್ರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ದೇಶ ವಿದೇಶದಿಂದ ಆಗಮಿಸಿ ಸಂಗೀತ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದರು

300x250 AD

ಇದೆ ವೇಳೆ ಗಾನಪೂರ್ಣಿಮಾ ವಿಶೇಷ ಪುರಸ್ಕಾರವನ್ನು ಪಂ. ಗಣಪತಿ ಭಟ್ ಹಾಸಣಗಿ ಇವರಿಗೆ, ನಾದಮಾಧವ ರಾಷ್ಟ್ರೀಯ ಪ್ರಶಸ್ತ್ರಿಯನ್ನು ಡಾ. ಶ್ರೀಕಾಂತ ಪಥಕ್ ಗದಗ ಇವರಿಗೆ , ವಿದ್ವಾನ ಅವಿನಾಶ ಹೆಬ್ಬಾರ ಸಂಸ್ಮರಣೆಯಲ್ಲಿ ನೀಡುವ ಯುವ ಪ್ರಶಸ್ತಿಯನ್ನು ಸಂಗೀತಾ ಹೆಗಡೆ ಗಿಳಗುಂಡಿ, ಇವರಿಗೆ ಪ್ರದಾನಿಸಲಾಯಿತು.

ಕಲಾಮಂಡಲದ ಅಧ್ಯಕ್ಷರಾದ ಡಾ. ಎಂ.ಜಿ.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಕಡ್ಲೆ ಗ್ರಾ.ಪಂ.ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ದೇವಾಲಯದ ಟ್ರಸ್ಟಿಗಳಾದ ಬಾಬು ಭಟ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಸಂಗೀತ ಕಾರ್ಯಕ್ರಮ ಜರುಗಿತು.

Share This
300x250 AD
300x250 AD
300x250 AD
Back to top