ಹೊನ್ನಾವರ: ಗ್ರಾಮದ ಅಭಿವೃದ್ದಿ ಹಾಗೂ ಶಾಲೆಯ ಅಭಿವೃದ್ದಿಗೆ ಗ್ರಾಮಸ್ಥರ ಶ್ರಮವು ಬಹುಮುಖ್ಯ ಪಾತ್ರವಹಿಸಲಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಸಾಲ್ಕೋಡ್ ಗ್ರಾಮದ ಕಾನಕ್ಕಿ ಹಳೇ ವಿದ್ಯಾರ್ಥಿ ಬಳಗ ಮೇಲಿನಕೇರಿ, ವರ್ಷದ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಾನು ಶಾಸಕನಾದ ಬಳಿಕ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರ ಹೆಚ್ಚಿನ ಒತ್ತು ನೀಡಿದ್ದೇನೆ. ಅದರಲ್ಲೂ ವಿಶೇಷವಾಗಿ ಸಾಲ್ಕೋಡದ ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಮೇಲಿನಕೇರಿ ಶಾಲೆಯ ಕೊಠಡಿ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ, ಡಾಂಬರಿಕರಣ ಕಾಣದ ಈ ರಸ್ತೆ ಕಾಂಕ್ರಿಟಿಕರಣಕೊಂಡು ಸುಸಜ್ಜಿತವಾದ ರಸ್ತೆ ನಿರ್ಮಾಣವಾಗಿರುವುದು ಬಿಜೆಪಿ ಸರ್ಕಾರದಲ್ಲಿ ಅವಧಿಯಲ್ಲಿ ಎಂದು ಸ್ಮರಿಸಿದರು.
ಶಾಸಕ ದಿನಕರ ಶೆಟ್ಟಿ, ಉದ್ಯಮಿ ಸುಧೀರ ಪಂಡಿತ್, ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ಪರಮೇಶ್ವರ ಹೆಗಡೆ, ಪಾರ್ವತಿ ನಾಯ್ಕ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಾಲ್ಕೋಡ್ ಗ್ರಾ.ಪಂ.ಅಧ್ಯಕ್ಷೆ ಯಮುನಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ಗ್ರಾ.ಪಂ.ಸದಸ್ಯರಾದ ಸಚೀನ ನಾಯ್ಕ, ಕುಂಬ್ರಿ ಮರಾಠಿ ಸಮೋಹದ ಅಧ್ಯಕ್ಷರಾದ ಮಂಜು ಮರಾಠಿ, ಕಾರ್ಯದರ್ಶಿ ಶಿವಾನಂದ ಮರಾಠಿ, ಶಾಲೆಯ ಕಟ್ಟಡ ನಿರ್ಮಾಣ ಸ್ಥಳ ದಾನಿ ಪರಮೇಶ್ವರ ಹೆಗಡೆ, ಗೆಳೆಯರ ಬಳಗದ ಅಧ್ಯಕ್ಷರಾದ ರಾಮ ಮರಾಠಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಚಂದ್ರು ಮರಾಠಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯಾಧ್ಯಾಪಕಿ ರಮೇಶ ನಾಯ್ಕ ಸ್ವಾಗತಿಸಿ, ಶಿಕ್ಷಕ ಎಂ.ಎನ್.ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಸಿದ್ದಿವಿನಾಯಕ ಯಕ್ಷಗಾನ ಮಂಡಳಿ ಉಳ್ಳೂರುಮಠ ಇವರಿಂದ ಸುಧನ್ವಾರ್ಜುನ, ಅಭಿಮನ್ಯ ಕಾಳಗ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.