Slide
Slide
Slide
previous arrow
next arrow

ಪೀಠೋಪಕರಣ ಅಂಗಡಿಯಲ್ಲಿ ಅಗ್ನಿ ಅವಘಡ:  ಅಪಾರ ಹಾನಿ

300x250 AD

ದಾಂಡೇಲಿ : ನಗರದ ಮಾರುತಿ ನಗರದ ಪೀಠೋಪಕರಣಗಳ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿ, ಅಪಾರ ಹಾನಿಯಾದ ಘಟನೆ ಶನಿವಾರ ನಸುಕಿನ ವೇಳೆಯಲ್ಲಿ ನಡೆದಿದೆ.

ಮಾರುತಿ‌ ನಗರದಲ್ಲಿರುವ ಅಬ್ದುಲ್ ಖುದ್ದುಸ್ ಸೈಯದ್ ಆದಂ ಅವರ ಮಾಲಕತ್ವದ ಕಟ್ಟಡದಲ್ಲಿರುವ ಸಚಿನ್ ಸಿದ್ದರಾಯ್ ಮುಚ್ಚಂಡಿಕರ್ ಎಂಬವರ ಕಟ್ಟಿಗೆ ಪಿಠೋಪಕರಣಗಳ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಗೆ ಅಂಗಡಿಯೊಳಗಿದ್ದ ಮರದ ಪಿಠೋಪಕರಣಗಳು‌ ಸಂಪೂರ್ಣ ಸುಟ್ಟು ಕರಲಾಗಿದೆ.‌ ಪಿಠೋಪಕರಣಗಳನ್ನು ಸಿದ್ದಪಡಿಸುವ ಯಂತ್ರಗಳು‌ ಕೂಡ ಸುಟ್ಟು ಹೋಗಿದ್ದು, ಅಪಾರ ಪ್ರಮಾಣದಲ್ಲಿ‌ ನಷ್ಟ ಸಂಭವಿಸಿದೆ.

300x250 AD

ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ದೌಡಾಯಿಸಿ ಬೆಂಕಿ‌‌ ನಂದಿಸಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ಐ.ಆರ್.ಗಡ್ಡೇಕರ್, ಎಎಸ್ಐ ವೆಂಕಟೇಶ್, ಪೋಲಿಸು ಸಿಬ್ಬಂದಿಗಳಾದ ಮಹಾದೇವ.ಎಸ್. ಬಳೆಗಾರ, ಶಂಕರ ಗುದ್ದನ್ನವರ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This
300x250 AD
300x250 AD
300x250 AD
Back to top