ಜೊಯಿಡಾ: ತಾಲೂಕಿನ ರಾಮನಗರದಲ್ಲಿ ನಡೆಯಲಿರುವ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ತಹಶೀಲ್ದಾರ್ ಮಂಜುನಾಥ್ ಮುನ್ನೋಳ್ಳಿ ಜೋಯಿಡಾದ ತಾಪಂ ಸಭಾಭವನದಲ್ಲಿ ಶುಕ್ರವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿ ಅವರು ಕನ್ನಡ ನಾಡಿನಲ್ಲಿ ಶ್ರೀಮಂತ ಸಂಸ್ಕೃತಿ ಇದೆ. ಕನ್ನಡ ನಾಡಿನಿ ಗಡಿ ತಾಲೂಕಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸರಕಾರ ಮತ್ತು ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಅಕ್ಷರ ಜಾತ್ರೆಯನ್ನು ಯಶಸ್ವಿಗೊಳಿಸಲಾಗುವುದು ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎನ್. ಭಾರತಿ ಮಾತನಾಡಿ ನಾಡಹಬ್ಬ ಯಶಸ್ವಿಯಾಗಿ ಆಚರಿಸಬೇಕಾಗಿದೆ. ಪೂರ್ವ ಸಿದ್ಧತೆಗಳು ಸಮಗ್ರವಾಗಿ ನಡೆದಿದೆ. ಇಲಾಖೆಗಳು ಸಂಪೂರ್ಣವಾಗಿ ಸಹಕರಿಸಲಿದೆ ಎಂದರು.
ಕಸಪ ಅಧ್ಯಕ್ಷ ಪಾಂಡುರಂಗ ಪಟಗಾರ ಅವರು ಪ್ರಾಸ್ತಾವಿಕಾಗಿ ಮಾತನಾಡಿದರು. ವೇದಿಕೆಯಲ್ಲಿ ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷ ಅಂತೊನಿ ಜಾನ್, ಕಸಾಪ ನಿಕಟಪೂರ್ವ ಅಧ್ಯಕ್ಷ ಸುಭಾಷ್ ಗಾವಡಾ, ಪೂರ್ವಭಾವಿ ಸಮಿತಿಯ ಉಪಾಧ್ಯಕ್ಷ ಅರುಣ್ ಕಾಮ್ರೇಕರ, ಪ್ರಮುಖರಾದ ಸಂತೋಷ ಸಾವಂತ್, ಕಸಾಪ ಕಾರ್ಯದರ್ಶಿ ಪ್ರೇಮಾನಂದ. ಖಜಾಂಚಿ ತುಳಸಿದಾಸ್ ವೆಳಿಪ, ಇಲಾಖಾ ಅಧಿಕಾರಿಗಳು ಇದ್ದರು, ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ್ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಮಾದೇವ ಹಳದನಕರ ನಿರೂಪಿಸಿದರು. ತಾಲೂಕು ಪಂಚಾಯತ್ ವ್ಯವಸ್ಥಾಪಕ ಜಿ. ವಿ ಭಟ್ ವಂದಿಸಿದರು.