Slide
Slide
Slide
previous arrow
next arrow

ದೇವಳಮಕ್ಕಿ ಶಾಲೆಯ ನೂತನ ಕೊಠಡಿ‌,ಸಭಾಭವನ ಶಂಕುಸ್ಥಾಪನೆ

300x250 AD

ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬುಧವಾರದಂದು ಕೈಗಾ ಅಣು ವಿದ್ಯುತ್ ಸ್ಥಾವರ ನಿಗಮದ ಸಿಎಸ್ಆರ್ ವಿಶೇಷ ಯೋಜನೆ ಅಡಿಯಲ್ಲಿ ಅಲ್ಲಿನ ಅಧಿಕಾರಿಗಳು ಅಂದಾಜು 76 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಕೊಠಡಿ ಮತ್ತು ಸಭಾಭವನ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ದೇವಳಮಕ್ಕಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರು ಸಹ ಸರಿಯಾಗಿ ಪಾಠ ಮಾಡಲು ಕೊಠಡಿಗಳ ಸಂಖ್ಯೆ ಕಡಿಮೆ ಇತ್ತು ಅನೇಕ ವರ್ಷಗಳಿಂದ ಶಾಲೆಗೆ ಹೆಚ್ಚುವರಿಯಾಗಿ ಕೊಠಡಿಗಳು ಬೇಕು ಅಂತ ಅಲ್ಲಿನ ಗ್ರಾಮಸ್ಥರು, ಶಿಕ್ಷಕರು,ಹಾಗೂ ಎಸ್‌ಡಿಎಂಸಿ ಸದಸ್ಯರ ಆಗ್ರಹದೊಂದಿಗೆ ಮತ್ತು ವಿವಿಧ ಪತ್ರಿಕಾ ಮಾಧ್ಯಮಗಳಲ್ಲಿ ವರದಿಗಳ ಮೂಲಕ ಎಚ್ಚೆತ್ತು ಅದೇ ರೀತಿ ಕೈಗಾ ಅಣು ವಿದ್ಯುತ್ ಸ್ಥಾವರದ ನಿರ್ದೇಶಕರಾದ ಪಿ.ರಾಯಚೂರು ಅವರ ಸಹಕಾರದೊಂದಿಗೆ ಸಿಎಸ್ಆರ್ ಯೋಜನೆ ಅಡಿಯಲ್ಲಿ ಬೃಹತ್ ಮೊತ್ತದ ಅಂದಾಜು 76 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಕೊಠಡಿ ಮತ್ತು ಸಭಾಭವನ ಇದೀಗ ಶಂಕುಸ್ಥಾಪನೆಗೊಂಡಿದೆ.

300x250 AD

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೈಗಾ ಅಣು ವಿದ್ಯುತ್ ಸ್ಥಾವರದ ವೈಜ್ಞಾನಿಕ ಅಧಿಕಾರಿಗಳಾದ ಎನ್ ಸುರೇಶ್, ಎಮ್ ರಮೇಶ್, ಕೈಗಾ ಯೂನಿಯನ್ ಅಧ್ಯಕ್ಷ ಸುಮಂತ್ ಹೆಬ್ಬಾರಕರ,ಸಿ ಎಸ್ ಆರ್ ಯೋಜನೆಯ ಉಪಾಧ್ಯಕ್ಷ ಟಿಪ್ಪೆಸ್ವಾಮಿ, ಕಾರ್ಯದರ್ಶಿ ಆಶೀಶ್ ಲಾರ್, ಇಂಜಿನಿಯರ್ ಗಳಾದ ಸಾಯಿನಾಥ ನಾಯ್ಕ, ಚಂದನ ನಾಯ್ಕ , ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಗೌಡ, ರಾಮಶ್ರೀ ನಿರ್ಮಾಣ ಸಂಸ್ಥೆಯ ಗುತ್ತಿಗೆದಾರ ಜಯಪ್ರಕಾಶ್ , ಎಸ್ ಡಿ ಎಂ ಸಿ ಅಧ್ಯಕ್ಷೆ ಭಾಗ್ಯ ಭಟ್ಟ, ಉಪಾಧ್ಯಕ್ಷ ಚಂದ್ರಕಾಂತ ಗೌಡ, ಪ್ರಭಾರಿ ಮುಖ್ಯ ಶಿಕ್ಷಕಿ ಎಲ್ಸಿ ಅಲ್ಮೇಡಾ, ಗ್ರಾಮಸ್ಥರಾದ ದೀಪಕ ಹಳದೀಪುರ, ಪ್ರಜ್ವಲ್ ಶೇಟ್ ,ಎಸ್ ಡಿ ಎಂ ಸಿ ಸದಸ್ಯರು, ಪಾಲಕರು,ಸಹ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top