Slide
Slide
Slide
previous arrow
next arrow

ಅರಣ್ಯ ಅತಿಕ್ರಮಣದಾರರ ಸಮಸ್ಯೆ ಗಂಭೀರವಾಗಿ ಪರಿಗಣಿಸಿ: ಕಾಗಾಲ್

300x250 AD

ಕಾರವಾರ: ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳನ್ನು ಬಗೆಹರಿಸುವ ಕ್ರಮವನ್ನು ಕೈಗೊಳ್ಳಬೇಕೆಂದು ಜಿಲ್ಲಾ ಜನಪರ ಒಕ್ಕೂಟಗಳ ಸಂಘಟನೆಯ ಅಧ್ಯಕ್ಷ ನಾಗೇಶ ನಾಯ್ಕ ಕಾಗಾಲ್ ಸರ್ಕಾರಕ್ಕೆ ಮನವಿ ಮಾಡಿದರು.

ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಅವರು ಸಾವಿರಾರು ಅತಿಕ್ರಮಣದಾರ ಕುಟುಂಬಗಳು ಆತಂಕದಲ್ಲಿಯೇ ಜೀವನ ಕಳೆಯುವ ಪರಿಸ್ಥಿತಿಯಿದ್ದು, ಜಿಲ್ಲೆಯಿಂದ ಸುಧೀರ್ಘವಾಗಿ ಜನಪ್ರತಿನಿಧಿಯಾಗಿ ಆಯ್ಕೆಯಾದವರು ಕೇಂದ್ರದಲ್ಲಿ ಈ ಸಮಸ್ಯೆ ಬಗ್ಗೆ ಧ್ವನಿ ಎತ್ತಲು ವಿಫಲರಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಹೆಚ್ಚಿದ್ದು, ದುರದೃಷ್ಟವಶಾತ್ ಜನರ ಬೇಡಿಕೆ ಈಡೇರಿಲ್ಲ. ತಾತ್ಕಾಲಿಕವಾಗಿಯಾದರೂ ಜಿಲ್ಲೆಯಲ್ಲಿ ಇರುವ ಆಸ್ಪತ್ರೆಯಲ್ಲಿಯೇ ಟ್ರಾಮಾ ಸೆಂಟರ್ ಒಳಗೊಂಡು ಎಲ್ಲಾ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಪರಿಸರ ಪೂರಕವಾಗಿ ದೊಡ್ಡ ಮಟ್ಟದಲ್ಲಿ ಉದ್ದಿಮೆಯನ್ನು ಸ್ಥಾಪನೆ ಮಾಡಲು ಶಾಸಕರು, ಸಚಿವರು, ಸಂಸದರು ಒಳಗೊಡು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು. ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

300x250 AD

ಜಿಲ್ಲೆಯಲ್ಲಿ ಇ-ಸ್ವತ್ತಿನ ಸಮಸ್ಯೆಯಿದ್ದು, ಸರ್ಕಾರ ಬಗೆಹರಿಸಬೇಕಾಗಿದೆ. ಭೂ ಸುದಾರಣೆ ಕಾಯ್ದೆಯ ತಿದ್ದುಪಡಿಬರಬೇಕಾಗಿದೆ. ಅವೈಜ್ಞಾನಿಕ ಹಾಗೂ ಅಪೂರ್ಣ ಹೆದ್ದಾರಿ 66ರ ಅಗಲೀಕರಣ ಮಾಡಿದ್ದು, ಸಾವು ನೋವು ಉಂಟಾಗುತ್ತಿದೆ. ಶೀಘ್ರದಲ್ಲೇ ಹೆದ್ದಾರಿ ಕಾಮಗಾರಿ ಮುಗಿಸಬೇಕು ಎಂದರು.
ವಿ.ಎನ್ ನಾಯ್ಕ ಬೇಡ್ಕಣಿ, ಮಾಧವ ನಾಯ್ಕ, ಚಂದ್ರಪ್ಪ ಚನ್ನಯ್ಯ, ವಿಜಯ್ ಕಲಕರಡಿ, ಸುನೀಲ್ ಸೋನಿ, ಪ್ರೀತಮ್ ಮಾಸುರಕರ್, ಬೆನೆತ್ ಸಿದ್ದಿ, ವೀರಭದ್ರ ನಾಯ್ಕ, ದಾಮೋದರ ನಾಯ್ಕ, ಜಾನ್ ಸಿದ್ದಿ, ಸಂತೋಷ ಬೋವಿವಡ್ಡರ ಮುಂತಾದವರು ಪತ್ರಿಕಾಗೋಷ್ಟಿಯಲ್ಲಿದ್ದರು.

Share This
300x250 AD
300x250 AD
300x250 AD
Back to top