ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಉತ್ಸವವಾದ ಕದಂಬೋತ್ಸವವನ್ನು ಮಾರ್ಚ್ 5 ಮತ್ತು 6 ರಂದು ಬನವಾಸಿಯಲ್ಲಿ ವೈಭವದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಕದಂಬೋತ್ಸವದ ಅಂಗವಾಗಿ ಮಾರ್ಚ್ 3 ರಂದು ಗುಡ್ನಾಪುರದಿಂದ ಕದಂಬ ಜ್ಯೋತಿ ಹೊರಡಲಿದ್ದು, ಆ ದಿನ ಸಂಜೆ ಗುಡ್ನಾಪುರದಲ್ಲಿ ವಿವಿಧ ಸಾಂಸೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಕದಂಬೋತ್ಸವದ ಅಂಗವಾಗಿ ನಡೆಯುವ ಕ್ರೀಡಾಸ್ಪರ್ಧೆಗಳ ನೊಂದಣಿಯನ್ನು ಫೆಬ್ರವರಿ 21 ರಿಂದ 25 ರವರೆಗೆ ಮಾಡಿಕೊಳ್ಳಬಹುದಾಗಿದ್ದು, ಫೆಬ್ರವರಿ 27 ರಿಂದ 29 ರ ವರೆಗೆ ಎಲ್ಲಾ ಸ್ಪರ್ಧೆಗಳು ನಡೆಯಲಿವೆ. ಸ್ಪರ್ದೆಗಳಿಗೆ ನೊಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ರವಿ ನಾಯಕ್ ಮೊ.ಸಂ.Tel:+917899104699 ಅವರನ್ನು ಸಂಪರ್ಕಿಸಬಹುದಾಗಿದ್ದು, ಕುಸ್ತಿ, ಕಬಡ್ಡಿ, ವಾಲಿಬಾಲ್ ಸೇರಿದಂತೆ ಹಲವು ಕ್ರೀಡೆಗಳು ನಡೆಯಲಿವೆ ಎಂದರು.
ಮಾರ್ಚ್ 5 ಮತ್ತು 6 ರಂದು ಬನವಾಸಿಯಲ್ಲಿ ಅತ್ಯಂತ ವೈಭವದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕದಂಬೋತ್ಸವದಲ್ಲಿ ನಡೆಯಲಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.