ದಾಂಡೇಲಿ : ಇತ್ತೀಚೆಗೆ ಅಗಲಿದ ಹಿರಿಯ ಸಾಹಿತಿ ವಿಷ್ಣು ನಾಯ್ಕರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಾಂಡೇಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶಯದಲ್ಲಿ ನಗರದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ವಿಷ್ಣು ನಾಯ್ಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನ ಆಚರಿಸಿದ ನಂತರ ಹಿರಿಯರಾದ ಬಾಬಣ್ಣ ಶ್ರೀವತ್ಸ, ಎಂ.ಆರ್. ನಾಯಕ, ಬಿ.ಎ. ನಾಗಶೆಟ್ಟಿಕೊಪ್ಪ , ಸಾಹಿತಿಗಳಾದ ಪ್ರವೀಣ ನಾಯಕ ಹಿಚಕಡ, ಜಿ.ಎಸ್. ಹೆಗಡೆ, ನಾಗರೇಖಾ ಗಾಂವಕರ, ಭೀಮಾಶಂಕರ ಅಜನಾಳ , ವೆಂಕಮ್ಮ ಗಾಂವಕರ್, ಎನ್. ಆರ್. ನಾಯ್ಕ, ಕಸಾಪ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ, ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರ್, ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ, ಗೌರವ ಕಾರ್ಯದರ್ಶಿ ಪ್ರವೀಣ ನಾಯ್ಕ ಮುಂತಾದವರು ಮಾತನಾಡಿ ನುಡಿ ನಮನ ಸಲ್ಲಿಸಿದರು. ವಿಷ್ಣು ನಾಯ್ಕರ ಸಾಹಿತ್ಯ, ಕಾವ್ಯ, ರಂಗಭೂಮಿ, ರೈತ ಹೋರಾಟ, ಮಹಿಳಾಪರ ಧ್ವನಿ, ಅವರ ಶಿಕ್ಷಕ ವೃತ್ತಿ ಸೇರಿದಂತೆ ಅವರ ಒಟ್ಟೂ ಬದುಕಿನ ಬಗ್ಗೆ ಮಾತನಾಡಿದ ಅವರ ಒಡನಾಡಿಗಳು ವಿಷ್ಣು ನಾಯ್ಕರು ಈ ಜಿಲ್ಲೆಯ ಸಾಂಸ್ಕೃತಿಕ ವ್ಯಕ್ತಿಯಾಗಿದ್ದರು. ನಾಡಿನಾದ್ಯಂತ ಹೆಸರು ಮಾಡಿದಂತಹ ಮಹನೀಯರಾಗಿದ್ದರು. ಇದೆಲ್ಲದಕ್ಕಿಂತ ಹೆಚ್ಚಾಗಿ ಅವರೊಬ್ಬ ಮಾನವೀಯ ಸಂಬಂಧದ ಜೀವಿಯಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ದುಂಡಪ್ಪ ಗೂಳೂರ, ಸುಧಾಕರ ಶೆಟ್ಟಿ, ನರೇಶ ನಾಯ್ಕ, ಕೀರ್ತಿ ಗಾಂವಕರ, ಮೋಹನ ಹಲವಾಯಿ, ಡಿ. ಸ್ಯಾಮಸನ್, ಫಿರೋಜ್ ಫಿರ್ಜಾದೆ, ಎಸ್. ಎಸ್. ಹಿರೇಮಠ, ಹನುಮಂತ ಕಾರ್ಗಿ, ಗಿರೀಶ್ ಶಿರೋಡಕರ್, ಜಲಜಾ ವಾಸರೆ ಮುಂತಾದವರು ಇದ್ದರು.