Slide
Slide
Slide
previous arrow
next arrow

ಪೋಲಾಗುತ್ತಿರುವ ನೀರು: ಸಾರ್ವಜನಿಕರ ಆಕ್ರೋಶ, ಕ್ರಮಕ್ಕೆ ಆಗ್ರಹ

300x250 AD

ಮುಂಡಗೋಡ: ಜೀವ ಸಂಕುಲಕ್ಕೆ ಅಮೂಲ್ಯವಾಗಿರುವ ನೀರನ್ನು ಮಿತವಾಗಿ ಬಳಸಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿರುವ ಅಧಿಕಾರಿಗಳಿಗೆ ಕಳೆದ ಒಂದು ವರ್ಷದಿಂದಲೂ ಪಟ್ಟಣಕ್ಕೆ ನೀರು ಪೂರೈಸುವ ಪೈಪ್ ಹಾಗೂ ವಾಲ್‌ಗಳಿಂದ ಪ್ರತಿದಿನವು ನೀರು ಪೋಲಾಗುತ್ತಿದ್ದರೂ ದುರಸ್ಥಿಗೊಳಿಸದ ಪ.ಪಂಚಾಯತ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಸನವಳ್ಳಿ ನೀರು ಶುದ್ದಿಕರಣ ಘಟಕದಿಂದ ಪಟ್ಟಣಕ್ಕೆ ನೀರು ಸರಬುರಾಜ ಆಗುವ ಪೈಪ್ ಹಾಗೂ ವಾಲ್‌ಗಳಿಂದ ನೀರು ಪೋಲಾಗಿ ರಸ್ತೆಯ ಪಕ್ಕದಲ್ಲಿರುವ ಚರಂಡಿಯಲ್ಲಿ ಹರಿಯುತ್ತಿದ್ದು ಹಾಗೂ ನೀರು ಒಂದೆಡೆ ಶೇಖರಣೆಯಾಗಿ ಕೆರೆಯಂತಾದರೂ  ಪ.ಪಂಚಾಯತ ಅಧಿಕಾರಿಗಳು ಮಾತ್ರ ದುರಸ್ಥಿಗೊಳಿಸದೆ ನಿರ್ಲಕ್ಷ್ಯವಹಿಸಿದ್ದು ಕಂಡುಬರುತ್ತಿದೆ.

ನೀರಿನ ಮಟ್ಟ ಕುಸಿತ: ಕಳೆದ ಸಾಲಿನಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ತಾಲೂಕಿನ ಜಲಾಶಯಗಳು ಹಾಗೂ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಬೇಸಿಗೆಯ ಆರಂಭಕ್ಕೂ ಮುಂಚೆಯೆ ತಾಲೂಕಿನ ಕೆಲ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ ಗ್ರಾಮೀಣ ಭಾಗದ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಪಟ್ಟಣಕ್ಕೆ ನೀರು ಪೂರೈಸುವ ಸನವಳ್ಳಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಮುಂಜಾಗೃತ ಕ್ರಮವಾಗಿ ಈಗಾಗಲೇ ಪಟ್ಟಣಕ್ಕೆ 3 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಆದರೆ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಪೈಪ್ ಹಾಗೂ ವಾಲ್‌ಗಳಿಂದ ನೀರು ಸಾಕಷ್ಟು ಪ್ರಮಾಣದಲ್ಲಿ ಪೋಲಾಗುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಪಟ್ಟಣಕ್ಕೆ ನೀರು ಸರಬುರಾಜ ಆಗುವ ಪೈಪ್‌ಗಳಿಂದ ಹಾಗೂ ವಾಲ್‌ಗಳಿಂದ ನೀರು ಪೋಲಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ಇತ್ತ ಗಮನ ಹರಿಸಿಲ್ಲ. ಇದರಿಂದ ಪ್ರತಿದಿನವು ನೀರು ಪೋಲಾಗಿ ರಸ್ತೆ ಪಕ್ಕದ ಅರಣ್ಯದಲ್ಲಿ ನೀರು ನಿಂತು ಕೆರೆಯಾಗಿದೆ. ಹೆದ್ದಾರಿಯ ಪಕ್ಕದಲ್ಲೇ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತರೂ ಇದೆ ಮಾರ್ಗವಾಗಿ ಶುದ್ದಿಕರಣ ಘಟಕಕ್ಕೆ ಹೋಗುವ ಅಧಿಕಾರಿಗಳು ಮಾತ್ರ ಗಮನ ಹರಿಸದೆ ನಿರ್ಲಕ್ಷವಹಿಸಿದ್ದಾರೆ.

300x250 AD

ಜಾಗೃತಗೊಳ್ಳಬೇಕಾದ ಅಧಿಕಾರಿಗಳು: ಕುಡಿಯುವ ನೀರಿನ ಮಹತ್ವದ ಕುರಿತು ಸಾಮಾಜಿಕ ಜಾಲತಾಣ ಹಾಗೂ ಪಟ್ಟಣ ಪಂಚಾಯತ ವಾಹನದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಮಾತ್ರ ನೀರು ಮಿತವಾಗಿ ಬಳಕೆಯ ಕುರಿತು ಜಾಗೃತೆ ಮೂಡಿಸುತ್ತಿರುವ ಅಧಿಕಾರಿಗಳು ನೀರು ಪೋಲಾಗುತ್ತಿರುವ ಕಡೆ ಗಮನಹರಿಸಿ ದುರಸ್ಥಿಗೊಳಿಸುವ ಮೂಲಕ ನೀರು ಪೋಲಾಗದಂತೆ ಜಾಗೃತರಾಗಿರಬೇಕೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋಟ್
ಬೇಸಿಗೆಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಪೈಪ್ ಹಾಗೂ ವಾಲ್‌ಗಳಿಂದ ನೀರು ಪೋಲಾಗುತ್ತಿರುವುದನ್ನು ದುರಸ್ಥಿಗೊಳಿಸಲು ಸಿಬ್ಬಂದಿಗಳಿಗೆ ಸೂಚಿಸಿದ್ದೇನೆ. ಚಂದ್ರಶೇಖರ ಬಿ. ಮುಖ್ಯಾಧಿಕಾರಿಗಳು. ಪ.ಪಂ. ಮುಂಡಗೋಡ

Share This
300x250 AD
300x250 AD
300x250 AD
Back to top