Slide
Slide
Slide
previous arrow
next arrow

ಶಿರಸಿ ಐದುರಸ್ತೆ ವೃತ್ತಕ್ಕೆ ಅಂಬೇಡ್ಕರ್ ವೃತ್ತವೆಂದು ಘೋಷಿಸಲು ಆಗ್ರಹ

300x250 AD

ಶಿರಸಿ: ನಗರದ ಶ್ರೀ ಶೃದ್ಧಾನಂದ ಗಲ್ಲಿಯ ದಕ್ಷಿಣ ಭಾಗದಲ್ಲಿರುವ ಐದುರಸ್ತೆ ವೃತ್ತಕ್ಕೆ “ಡಾ. ಬಿ. ಆರ್. ಅಂಬೇಡ್ಕರ ವೃತ್ತ” ಎಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಪರಿಶಿಷ್ಟ ಮುಖಂಡರಿಂದ ಸಹಾಯಕ ಆಯುಕ್ತರಿಗೆ ಮನವಿ ನೀಡಲಾಯಿತು.

1991 ಏಪ್ರಿಲ್ 14 ರಂದು ಅತ್ಯಂತ ವಿಜೃಂಭಣೆಯಿಂದ
ಶಿರಸಿಯ ತಾಲೂಕಿನಾದ್ಯಂತ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಡಾ. ಭೀಮ್‌ರಾವ್ ಅಂಬೇಡ್ಕರ ಜನ್ಮ ಶತಾಬ್ದ ದಿನಾಚರಣೆಯನ್ನು ಆಚರಿಸಲಾಗಿತ್ತು. ಅಂದಿನ ಕಾರ್ಯಕ್ರಮದ ಮೊದಲ ಹಂತವಾಗಿ ಮುಂಜಾನೆ ಯುವಜನತೆ ಹಾಗೂ ಕ್ರೀಡಾಪಟುಗಳಿಂದ ಭೀಮಜ್ಯೋತಿ ನಗರ ಸಂಚರಿಸಿ ತದನಂತರ ತಾಲೂಕು ಆಡಳಿತ, ಊರ ನಾಗರಿಕರು, ಮಹಿಳೆಯರು ಸೇರಿ ಡಾ.ಅಂಬೇಡ್ಕರ ಭಾವಚಿತ್ರದ ಬೃಹತ್ ಮೆರವಣಿಗೆಯ ಮೂಲಕ ಬಾಪೂಜಿನಗರದಿಂದ ಪ್ರಾರಂಭಗೊಂಡು ಶ್ರೀ ಮಾರಿಕಾಂಬಾ ದೇವಸ್ಥಾನದ ಹಾಗೂ ನಗರದ ಪ್ರಮುಖ ಬೀದಿಗಳಿಂದ ಹಾಯ್ದು ಶೃದ್ಧಾನಂದ ಗಲ್ಲಿ ಶ್ರೀ ಮಾರುತಿ ಮಂದಿರ ಮುಂಭಾಗ ಸಭಾ ಕಾರ್ಯಕ್ರಮ ನಡೆಸಲಾಯಿತು.

ಆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಂದಿನ ಶಾಸಕರಾಗಿದ್ದ ಗೋಪಾಲ ಮುಕುಂದ ಕಾನಡೆ ಮತ್ತು ಉದ್ಘಾಟಕರಾಗಿ ಅಂದಿನ ಉಪವಿಭಾಗಾಧಿಕಾರಿಗಳಾಗಿದ್ದ ಲಾಲ್‌ಗೌಡರು ಉಪಸ್ಥಿತರಿದ್ದು ಸಾವಿರಾರು ಜನ ಸೇರಿದ್ದ ಈ ಐತಿಹಾಸಿಕ ಸಮಾರಂಭದಲ್ಲಿ ಸದರಿ ಐದು ರಸ್ತೆ ವೃತ್ತಕ್ಕೆ ಡಾ.ಅಂಬೇಡ್ಕರ ವೃತ್ತವೆಂದು ನಾಮಕರಣ
ಮಾಡುವಂತೆ ನಾವೆಲ್ಲರೂ ಒಕ್ಕೊರಲಿನಿಂದ ವಿನಂತಿಮಾಡಲಾಗಿತ್ತು. ಇದಕ್ಕೆ  ಶಾಸಕರು ಸರಕಾರ ಮಟ್ಟದಲ್ಲಿ ಆದೇಶ ಹೊರಡಿಸಿ ಕಾರ್ಯರೂಪಕ್ಕೆ ತರುವ ಕೆಲಸ ಮಾಡುವ ಆಶ್ವಾಸನೆ ನೀಡಿದ್ದರು. ಈ ಕುರಿತು ಶಿರಸಿ ನಗರಸಭೆಯಲ್ಲಿ ಡಾ.ಅಂಬೇಡ್ಕರ ವೃತ್ತ ನಾಮಕರಣ ಹಾಗೂ 1992 ಏಪ್ರಿಲ್ 14ನೇ ದಿನ ಅಂಬೇಡ್ಕರ ಜಯಂತ್ಯೋತ್ಸವ ನಡೆಯುವ
ಸಂದರ್ಭದಲ್ಲಿ ಇನ್ನೋರ್ವ ಹಿರಿಯ ಮುಖಂಡ ಶಿವರಾಯ ಶಿರೂರ ಮಾಸ್ತರ ಅವರಿಂದ ಉದ್ಘಾಟಿಸಿದ
ಡಾ.ಅಂಬೇಡ್ಕರ ಬೀದಿ ಎಂಬ ನಾಮಕರಣ ಫಲಕ ಅನಾವರಣ ಮಾಡಿದ್ದು ಕ್ರಮವಾಗಿ ಈ ಎರಡು ಪ್ರಮುಖ ನಿರ್ಣಯ ಕೈಗೊಳ್ಳುವ ಚರ್ಚೆ ಕೂಡ ನಡೆಸಲಾಗಿದೆ.ಈ ವಿಷಯ ಪ್ರಸ್ತಾಪಿಸಿದಾಗಲೆಲ್ಲಾ ಶಾಸಕರು ಸಕರಾತ್ಮಕವಾಗಿ ಸ್ಪಂದಿಸಿದರೂ ಕಾರ್ಯರೂಪಕ್ಕೆ ತರುವಲ್ಲಿ ವಿಳಂಬವಾಗಿದೆ. ಆದ್ದರಿಂದ ನಮಗೆ ನಮ್ಮ ಸಂವಿಧಾನದ ಹಕ್ಕೊತ್ತಾಯದ ಹೋರಾಟ ನಡೆಸಲು ಅನಿವಾರ್ಯವಾಗಿದೆ.ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಸಹಾಯಕ ಆಯುಕ್ತರಾದ ಅಪರ್ಣಾ ರಮೇಶ ಮನವಿ ಸ್ವೀಕರಿಸಿದರು.

300x250 AD

ಮನವಿ ನೀಡುವ ಸಂದರ್ಭದಲ್ಲಿ ಪರಿಶಿಷ್ಟ ಮುಖಂಡರಾದ ರಾಚಪ್ಪ ಜೋಗಳೆಕರ್,ಸುಭಾಶ ಕಾನಡೆ,ರಾಜೇಂದ್ರ ಜೋಗಳೆಕರ್,ನಾಗರತ್ನ ಜೋಗಳೆಕರ್, ಕುಮಾರ ಬೋರ್ಕರ್,ಅರವಿಂದ ನೇತ್ರಕರ್, ಅಮರ ನೇರಲಕಟ್ಟೆ,ಸುಭಾಶ ಮಂಡೂರ್,ರಘು ಕಾನಡೆ, ನಂದಕುಮಾರ ಜೋಗಳೆಕರ್,ವಾಣಿ ಶಿರಾಲಿ,ರಮ್ಯ ಸಿರ್ಸಿಕರ್, ಪುರಂದರ ಬೋರ್ಕರ್, ಗಣೇಶ ಜೋಗಳೆಕರ್, ಮಾದೇವ ರೇವಣಕರ್,ತುಕರಾಮ್ ನೇತ್ರೆಕರ್ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top