ಜೋಯಿಡಾ: ತಾಲೂಕಿನ ಜೋಯಿಡಾ ಅರಣ್ಯ ವ್ಯಾಪ್ತಿಯಲ್ಲಿ ಡಿ.ಎರ್.ಎಪ್ ಓ ಆಗಿ ಸೇವೆ ಸಲ್ಲಿಸುತ್ತಿರುವ ಸಂತೋಷ ಗವಸ್ ಅವರಿಗೆ ಕಳೆದ 5 ವರ್ಷಗಳಿಂದ ಸಾಲು ಮರದ ತಿಮ್ಮಕ್ಕ ಉದ್ಯಾನ ವನದಲ್ಲಿ ಚಿಟ್ಟೆಗಳ ಸಂರಕ್ಷಣೆ ಮತ್ತು ಚಿಟ್ಟೆಗಳ ವೃದ್ದಿಗೆ ಶ್ರಮಿಸಿದ ಇವರನ್ನು ಹಾರ್ನಬಿಲ್ ಉತ್ಸವದಲ್ಲಿ ಸನ್ಮಾನಿಸಲಾಯಿತು.
ತಮ್ಮ ಕರ್ತವ್ಯದ ಜೊತೆಗೆ ಚಿಟ್ಟೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಇವರು ಜೋಯಿಡಾ ಅರಣ್ಯ ಇಲಾಖೆ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಇರವ ಚಿಟ್ಟೆ ಪಾರ್ಕ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ,ಚಿಟ್ಟೆಗಳ ಛಾಯಗ್ರಹಣ ಮತ್ತು ಅವುಗಳ ಜೀವನ ಶೈಲಿ ಬಗ್ಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.ಈವರೆಗೆ 185 ಬಗೆಯ ಚಿಟ್ಟೆಗಳನ್ನು ಗುರುತಿಸಿದ್ದಾರೆ.
ಈ ಸಂದರ್ಭದಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಬೆಂಗಳೂರು ಸ್ಮಿತಾ ಬಿಜ್ಜೂರ, ಅರಣ್ಯ ಸಂರಕ್ಷಣಾ ಅಧಿಕಾರಿಗಳು ಕೆನರಾ ವೃತ್ತ ಶಿರಸಿ ವಸಂತ ರೆಡ್ಡಿ, ಡಿ.ಎಪ್.ಓ ಪ್ರಶಾಂತ ಕುಮಾರ್ ಎ.ಸಿ.ಎಪ್ ಸಂತೋಷ ಚಹ್ಹಾಣ, ಜೋಯಿಡಾ ವಲಯ ಅರಣ್ಯಾಧಿಕಾರಿ ಶಫಿ ಇತರರು ಇದ್ದರು.