Slide
Slide
Slide
previous arrow
next arrow

ಸಂಘಟಿತ ಯುವಕರಿಂದ ಎಲ್ಲ ಕೆಲಸವೂ ಸಾಧ್ಯ: ರಾಘವೇಶ್ವರ ಶ್ರೀ

300x250 AD

ಭಟ್ಕಳ: ತಾಲ್ಲೂಕಿನ ಶಕ್ತಿಕ್ಷೇತ್ರವಾದ ಕಿತ್ರೆಯ ಶ್ರೀ ಕ್ಷೇತ್ರ ದುರ್ಗಾ ಪರಮೇಶ್ವರಿ ದೇವಸ್ಥಾನದ ರಥೋತ್ಸವ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಭಾನುವಾರ ಮಧ್ಯಾಹ್ನ ಸಂಪನ್ನಗೊಂಡಿತು.

ಭಟ್ಕಳ ಸಮಾಜ ಜಾಗೃತರಾಗಿ ಒಗ್ಗಟ್ಟಾಗಬೇಕಿದೆ. ಉತ್ತಮ ಸಂಘಟನೆ ಇದ್ದರೆ ಏನನ್ನೂ ಮಾಡಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಹೊಸ ತಲೆಮಾರು ಜವಾಬ್ದಾರಿ ವಹಿಸಿಕೊಳ್ಳಬೇಕು. ದೇವಸ್ಥಾನ, ಶ್ರೀ ಮಠದ ಕಾರ್ಯದಲ್ಲಿ ಹಿರಿಯರ ಜೊತೆ ಯುವಕರೂ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. ಯುವಕರು ಸಂಘಟಿತರಾದರೆ ಯಾವುದೇ ಕೆಲಸ ಮಾಡಬಹುದು. ಶ್ರೀಮಠದ 107 ವಲಯದಲ್ಲಿ ಭಟ್ಕಳದ ಭವತಾರಿಣಿ ವಲಯ ಅತ್ಯಂತ ಕ್ರಿಯಾಶೀಲವಾಗಿದೆ. ಇಲ್ಲಿನ ಯುವಕರು ಜಾಗೃತರಾಗಿ ಮತ್ತು ಸಂಘಟಿತರಾಗಿ ಕೆಲಸ ಮಾಡುತ್ತಿದ್ದಾರೆ. ಕಿತ್ರೆಯ ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನ ವಿಶೇಷ ಕ್ಷೇತ್ರವಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಬೆಳೆಯಲಿದೆ. ದೇವಸ್ಥಾನದ ಬ್ರಹ್ಮ ಕಲಶೋತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಿ ದೇವಿ ಮತ್ತು ಗುರುಗಳಿಗೆ ಖುಷಿ ಆಗುವ ಹಾಗೆ ಮಾಡಲಾಗಿದೆ. ಇಲ್ಲಿನ ಯುವಕರ ಒಗ್ಗಟ್ಟು ಮತ್ತು ಸಂಘಟನೆ ನಿರಂತರ ಮುಂದುವರಿಯಬೇಕು. ದೇವಸ್ಥಾನವನ್ನು ಮತ್ತಷ್ಟು ಅಭಿವೃದ್ಧಿಯ ಕಡೆಗೆ ಒಯ್ಯಬೇಕು ಎಂದರು.

300x250 AD

ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ತಾಂತ್ರಿಕ ಅಮೃತೇಶ್ ಭಟ್ಟ ಗೋಕರ್ಣ ನೇತೃತ್ವದಲ್ಲಿ ಸಾಂಗವಾಗಿ ಜರುಗಿತು. ನೂರಾರು ಜನರು ರಥ ಕಾಣಿಕೆ ಸಲ್ಲಿಸಿದರು. ಭಾನುವಾರ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸ್ವರ್ಣಲೇಪಿತ ಶಿಖರ ಕಲಶ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮುಂತಾದವು ಜರುಗಿದವು. ರಥೋತ್ಸವದಲ್ಲಿ ದೇವಸ್ಥಾನದ ಮೊಕ್ತೇಸರ ಉಮೇಶ್ ಹೆಗಡೆ,ಪ್ರದಾನ ಅರ್ಚಕ ಬಾಲಚಂದ್ರ ಭಟ್ಟ, ವೇ.ಮೂ. ಸುಬ್ರಮಣ್ಯ ಉಪಾಧ್ಯಾಯ, ಗುರು ಉಪಾಧ್ಯಯ, ಶ್ರೀಧರ ಭಟ್ಟ, ಹವ್ಯಕ ಮಂಡಲದ ಅಧ್ಯಕ್ಷ ಮೋಹನ ಹೆಗಡೆ, ಹೊನ್ನಾವರ ಮಂಡಲದ ಅಧ್ಯಕ್ಷ ಆರ್ ಜಿ ಹೆಗಡೆ, ದೇವಿಮನೆ ಆಡಳಿತ ಸಮಿತಿಯ ಅಧ್ಯಕ್ಷ ಶಿವಾನಂದ ಹೆಬ್ಬಾರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಭವತಾರಿಣಿ ವಲಯದ ಅಧ್ಯಕ್ಷ ವಿನಾಯಕ ಭಟ್ಟ ತೆಕ್ನಗದ್ದೆ, ಪ್ರಮುಖರಾದ ಎಂ.ಎಂ. ಹೆಬ್ಬಾರ್, ನಾರಾಯಣ ಹೆಬ್ಬಾರ ಬೆಣಂದೂರು,ರಾಧಾಕೃಷ್ಣ ಬೆಂಗಳೂರು, ಶಿವಾನಂದ ಹೆಬ್ಬಾರ್, ಅನಂತ ಹೆಬ್ಬಾರ ,ಅನಂತ್ ಹೆಬ್ಬಾರ್, ಶ್ರೀನಿವಾಸ ಹೆಗಡೆ, ಪರಮೇಶ್ವರ ಭಟ್ಟ, ಶಂಕರ್ ಭಟ್ಟ ಮುಂತಾವರು ಉಪಸ್ಥಿತರಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀರಕ್ಷಾ ಹೆಬ್ಬಾರ ಇವರಿಂದ ನಡೆದ ತಬಲಾ ಸೋಲೋ, ಶಿರಸಿಯ ನಾಟ್ಯದೀಪ ಕಲ್ಚರಲ್ ತಂಡದಿಂದ ನಡೆದ ಭರತನಾಟ್ಯ, ಪಂಡಿತ್ ಗಣಪತಿ ಭಟ್ಟ ಹಾಸಣಗಿ ಇವರ ಹಿಂದೂಸ್ಥಾನಿ ಸಂಗೀತ ಹಾಗೂ ಸರಿಗಮಪ ಖ್ಯಾತಿಯ ಶ್ರೀ ಹರ್ಷ ತಂಡದವರ ಭಕ್ತಿ ಭಾವ ಸಂಗಮ ಪ್ರೇಕ್ಷಕರ ಮನರಂಜಿಸಿತು.

ದೇವಸ್ಥಾನದ ಮೊಕ್ತೇಸರ ಉಮೇಶ ಹೆಗಡೆ ಸಭಾ ಪೂಜೆ ನೆರವೇರಿಸಿ ಸ್ವಾಗತಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬ್ಬಾರ ಮುಲ್ಲೆಮಕ್ಕಿ ವರದಿ ವಾಚಿಸಿದರು. ಬ್ರಹ್ಮ ಕಲಶೋತ್ಸವದ ಸಮಿತಿಯ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು ವಂದಿಸಿದರು. ಪ್ರಶಾಂತ ಮೂಡಲಮನೆ, ಶುಭ ದೇಸಾಯಿ ನಿರೂಪಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಲಂಭೋದರ ಭಟ್ಟ ದಂಪತಿ, ದೇವಸ್ಥಾನದ ಮೊಕ್ತೇಸರ ಉಮೇಶ ಹೆಗಡೆ ದಂಪತಿ, ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬ್ಬಾರ ಮುಲ್ಲೆಮಕ್ಕಿ ದಂಪತಿ, ದೇವಸ್ಥಾನದ ವ್ಯವಸ್ಥಾಪಕ ಶ್ರೀರಾಮ ಹೆಬ್ಬಾರ ದಂಪತಿ, ಗುತ್ತಿಗೆದಾರ ಮಾಧವ ಭಟ್ಟ ದಂಪತಿ ಅವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಸಭೆಯಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ಹವ್ಯಕ ಮಹಾ ಮಂಡಲದ ಅಧ್ಯಕ್ಷ ಮೋಹನ ಹೆಗಡೆ, ಹೊನ್ನಾವರ ಮಂಡಲದ ಅಧ್ಯಕ್ಷ ಆರ್ ಜಿ ಹೆಗಡೆ, ಭಟ್ಕಳದ ವಲಯದ ಅಧ್ಯಕ್ಷೆ ರೇಷ್ಮಾ ಭಟ್ಟ ಸೇರಿದಂತೆ ಹಲವು ಮುಖಂಡರು, ಸಮಾಜ ಬಾಂಧವರಿದ್ದರು.

Share This
300x250 AD
300x250 AD
300x250 AD
Back to top