Slide
Slide
Slide
previous arrow
next arrow

ಉತ್ತಮ ಸೇವೆ ಎಂದಿಗೂ ಜನಮಾನಸದಲ್ಲಿ ನೆಲೆಯಾಗುತ್ತದೆ: ಭವೇಶಾನಂದ ಸ್ವಾಮೀಜಿ

300x250 AD

ಕಾರವಾರ: ತಾಲೂಕಿನ ಅಸ್ನೋಟಿ ಶಿಕ್ಷಣ ಸಂಸ್ಥೆ ಅಸ್ನೋಟಿ, ಶಿವಾಜಿ ವಿದ್ಯಾ ಮಂದಿರ ಅಸ್ನೋಟಿ ಕಾರವಾರ ಇವರ ಸಹಯೋಗದೊಂದಿಗೆ ಡಿಸ್ಟ್ರಿಕ್ಟ್ ಸರ್ಜನ್ ಡಾ.ಶಿವಾನಂದ ಕುಡ್ತರಕರವರಿಗೆ ಅಸ್ನೋಟಿಯಲ್ಲಿ ವಿದ್ಯಾ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ರಾಮಕೃಷ್ಣ ಆಶ್ರಮ ಕಾರವಾರದ ಭವೇಶಾನಂದ ಮಹಾಸ್ವಾಮಿಗಳು, ಉತ್ತಮ ಸೇವೆಯು ಸದಾ ಜನಮಾನಸದಲ್ಲಿ ನಡೆದಾಡುತ್ತದೆ ಅಂತಹ ಆದರ್ಶ ವ್ಯಕ್ತಿತ್ವವನ್ನು ಕುಡ್ತರಕರ ಹೊಂದಿರುವುದು ಈ ನೆಲದ ಸುದೈವವೆಂದು ಪ್ರಶಂಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯ ಡಾ.ಶಿವಾನಂದ ನಾಯಕ ನಮ್ಮ ಕಾರ್ಯಗಳು ಸಮಾಜದಲ್ಲಿ ನೆನೆಸುವಂತಿರಬೇಕು ಅಂದಾಗ ಈ ಜನ್ಮಕ್ಕೆ ಸಾರ್ಥತೆ ದೊರಕುತ್ತವೆ ಅದನ್ನು ಡಾ.ಕುಡ್ತರಕರ ಮಾಡಿರುವದು ಸ್ಮರಣೀಯವಾಗಿದೆ ಎಂದರು.

300x250 AD

ಇನ್ನೋರ್ವ ಅತಿಥಿಗಳಾದಾ ಸಾಹಿತಿ ಎ.ಎನ್. ರಮೇಶ್ ಗುಬ್ಬಿ, ಜ್ಞಾನ ದೇಗುಲದಲ್ಲಿ ಬಹು ಸಂಭ್ರಮದ ವೇದಿಕೆ ಆಯೋಜನೆ ಆಗಿರುವದು ಸಂತಸ ನೀಡಿದೆ ಎನ್ನುತ್ತಾ ಸ್ವರಚಿತ ಕವನ ವಾಚಿಸಿದರು.ಕ.ಸಾ.ಪ.ಕಾರವಾರದ ಅಧ್ಯಕ್ಷ ರಾಮಾ ನಾಯ್ಕ ಮಾತನಾಡುತ್ತಾ ಜಿಲ್ಲಾ ಆಸ್ಪತ್ರೆ ಇಂದು ಮಾದರಿಯಾದ ಆಸ್ಪತ್ರೆಯಾಗಿ ಬದಲಾವಣೆ ಆಗಿದೆ ಅದರ ಕೇಂದ್ರ ಬಿಂದು ಡಾ.ಕುಡ್ತರಕರವರು ಎಂದು ಮುಕ್ತಕಂಠದಿಂದ ಶ್ಲಾಘಿಸಿದರು. ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕರು ಹಲವು ರೋಗಿಗಳ ಬದುಕಿಗೆ ದೇವರಾಗಿ ಆಡಳಿತದ ಸುಧಾರಕರಾಗಿ ಎಷ್ಟೇ ಅಪವಾದಗಳು ಬಂದರು ಅದನ್ನು ಸಮಚಿತ್ತದಿಂದ ಬಗೆಹರಿಸಿ ಅತ್ಯುತ್ತಮ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ ನಮ್ಮ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ವಿದ್ಯಾ ರತ್ನ ಪ್ರಶಸ್ತಿ ನೀಡಿರುವದು ತುಂಬಾ ಖುಷಿಯನ್ನು ನೀಡಿದೆ ಎಂದು ಮಾರ್ಮಿಕವಾಗಿ ನುಡಿದರು. ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ಡಾ.ಶಿವಾನಂದ ಕುಡ್ತರಕರವರು ಬಾಲ್ಯದಿಂದಲೂ ಸತ್ಯದೊಂದಿಗೆ ಬೆಳೆಯುತ್ತಾ ಬಂದಿರುವೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಸ್ಪರ್ಧಾ ಜಗತ್ತಿನಲ್ಲಿ ವೈದ್ಯಕೀಯ ಪದವಿ ಪಡೆದು ನನ್ನಿಂದಾದ ಸಾರ್ವಜನಿಕ ಸೇವೆ ನೀಡುತ್ತಿರುವೆ ನನ್ನ ಅಲ್ಪ ಸೇವೆಯನ್ನು ಮನ್ನಿಸಿ ಶಿವಾಜಿ ವಿದ್ಯಾ ಮಂದಿರದಿಂದ ವಿದ್ಯಾ ರತ್ನ ಪ್ರಶಸ್ತಿ ಕೊಟ್ಟಿರುವದು ನನ್ನ ಭಾಗ್ಯ ಮುಂದೆಯೂ ಈ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಬದ್ಧನಾಗಿರುತ್ತೇನೆ ಎಂದು ಭಾವನಾತ್ಮಕವಾಗಿ ನುಡಿದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯಾಧ್ಯಪಕರಾದ ದಿನೇಶ ಗಾಂವಕರವರು ವಹಿಸಿ ನಮ್ಮ ಶಾಲೆಗೆ ಏನೆಲ್ಲಾ ಅನುಕೂಲತೆ ಮಾಡಿ ಶಾಲೆ ಸುಂದರವಾಗಿ ಕಾಣಬೇಕು ಎಂಬ ಸದುದ್ದೇಶದಿಂದ ಶಾಲೆಗೆ ಸುಣ್ಣ ಬಣ್ಣ ಮಾಡಿಸಿ ಹೊಸ ಮದುವಣಗಿತ್ತಿಯಂತೆ ಮಾಡಿದ್ದಾರೆ ಅದಕ್ಕೆ ಋಣಿಯಾಗಿದ್ದೇವೆ ಎನ್ನುತ್ತಾ ಕೃತಜ್ಞತೆಯನ್ನು ಅರ್ಪಿಸಿದರು. ವೇದಿಕೆಯ ಮೇಲೆ ಲ.ಡಾ.ನಯೀಮ್ ಮುಖಾದಮ್ ಹಾಗು ಪೂಜಾ ಕುಡ್ತರಕರ ಉಪಸ್ಥಿತರಿದ್ದರು. ಸ್ವಾತಿ ಮನೊಜೆ,ಅರುಶಿ ಶಾಜಿಯವರ ಭರತನಾಟ್ಯದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಡಾ.ಗಣೇಶ ಬಿಷ್ಠಣ್ಣನವರ ಸ್ವಾಗತಿಸಿ, ನಿರೂಪಿಸಿದರು. ಸಮಾರಂಭದಲ್ಲಿ ಅಭಿಮಾನಿಗಳು, ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top