ದಾಂಡೇಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಶ್ರಯದಡಿ ದಾಂಡೇಲಿಯಿಂದ ಐದು ಜನ ಕರಸೇವಕರು ಸೇರಿ ಒಟ್ಟು 22 ಭಕ್ತರು ಶನಿವಾರ ಪ್ರಭು ಶ್ರೀರಾಮಚಂದ್ರನ ಅಯೋಧ್ಯೆಗೆ ತೆರಳಿದರು.
ಅಂದು ರಾಮಮಂದಿರ ನಿರ್ಮಾಣಕ್ಕಾಗಿ ಕರ ಸೇವಕರಾಗಿ ಅಯೋಧ್ಯೆಗೆ ಹೋಗಿದ್ದಂತಹ ಅರ್ಜುನ ನಾಯ್ಕ, ತುಕಾರಾಮ ಬಡಿಗೇರ, ರಾಮಚಂದ್ರ ಯಾಜಿ, ಯಶವಂತ ಹರಾಡೆ, ವಿಠ್ಠಲ್ ಬೈಲೂರಕರ ಹಾಗೂ ಸಂಘ ಪರಿವಾರದ ಸದಸ್ಯರುಗಳಾದ ಗುರುರಾಜ ಗಲಗಲಿ, ಶ್ರೀನಿವಾಸ ಸದರಜೋಶಿ, ಮಾರುತಿ ಸೋನಾರ, ಸಂಜಯ್ ಚವ್ಹಾಣ, ಗೋಪಾಲ್ ಜಾಧವ, ಅರ್ಜುನ ನಾಯ್ಕ, ವೀರಸಂಗಯ್ಯ ಕುಲಕರ್ಣಿ, ಲಕ್ಷ್ಮಣ ನಾಯ್ಕ, ಅಶೋಕ ಬೋಜಪ್ಪಾ ಚೌಗಲಾ, ರಾಮಕೃಷ್ಣ ನಾರಾಯಣ ಗಾಂವಕರ, ಸಂತೋಷ ಕಾಳೆ, ಅಶೋಕ ದುಂಡಪ್ಪ ಬ್ಯಾಳಿ, ಚಂದ್ರಕಾಂತ ಮಿರಾಶಿ, ಲಕ್ಷ್ಮೀ ಚಂದ್ರಕಾಂತ ಮಿರಾಶಿ, ಚ.ಪರಶುರಾಮ, ಗಿರಿಜಾ ಲಕ್ಷ್ಮಣ ನಾಯ್ಕ, ಅಶೋಕ ಗೋಪಾಲ ಕೃಷ್ಣ ಕಾಮತ್ ಮತ್ತು ಶ್ವೇತಾ ಅಶೋಕ ಕಾಮತ್ ಅವರ ತಂಡ ಅಯೋಧ್ಯೆಗೆ ಹುಬ್ಬಳ್ಳಿಯಿಂದ ರೈಲ್ವೆಯ ಮೂಲಕ ಪ್ರಯಾಣ ಬೆಳೆಸಿದರು.
ಹುಬ್ಬಳ್ಳಿಗೆ ತೆರಳುವ ಮುನ್ನ ದಾಂಡೇಲಿಯಲ್ಲಿ ಸಂಘ ಪರಿವಾರದ ಮುಖಂಡರು ಹಾಗೂ ಕಾರ್ಯಕರ್ತರು ಅಯೋಧ್ಯೆಗೆ ತೆರಳುತ್ತಿರುವ ಭಕ್ತರನ್ನು ಗೌರವಿಸಿ ಬೀಳ್ಕೊಟ್ಟರು.