Slide
Slide
Slide
previous arrow
next arrow

ಅಕ್ಕಿ ಮಾರಾಟಗಾರರು ದಾಸ್ತಾನು ಘೋಷಿಸಿ: ಕೇಂದ್ರ ಸರ್ಕಾರ ಸೂಚನೆ

300x250 AD

ಕಾರವಾರ: ಕೇಂದ್ರ ಸರ್ಕಾರದ ಆದೇಶದಂತೆ ಅಕ್ಕಿ/ಭತ್ತ ವ್ಯಾಪಾರಸ್ತರು/ಸಗಟು ವ್ಯಾಪಾರಸ್ತರು, ಚಿಲ್ಲರೆ ವ್ಯಾಪಾರಸ್ತರು, ಸಂಸ್ಕರಣೆದಾರರು/ಗಿರಣಿದಾರರು Broken Rice (ತುಂಡು ಅಕ್ಕಿ), Non-Basmati white (ಬಾಸ್ಮತಿ ಅಲ್ಲದ ಬಿಳಿ ಅಕ್ಕಿ), Parboiled (ಕುಚ್ಚಲಕ್ಕಿ), Basmati Rice (ಬಾಸ್ಮತಿ ಅಕ್ಕಿ) ಮತ್ತು ಭತ್ತಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವೆಬ್ ಪೋರ್ಟಲ್ ವಿಳಾಸ https://evegoils.nic.in/login.html ದಲ್ಲಿ ನೋಂದಣಿ ಮಾಡಿಕೊಂಡು ಪ್ರತಿ ಶುಕ್ರವಾರ ಅಕ್ಕಿ/ಭತ್ತ ದಾಸ್ತಾನು ಘೋಷಿಸಿಕೊಳ್ಳಲು ಸೂಚಿಸಲಾಗಿರುತ್ತದೆ.

ನೋಂದಣಿ ಮತ್ತು ದಾಸ್ತಾನು ಘೋಷಣೆ ಸಂಬಂಧ ಸ್ಪಷ್ಟೀಕರಣ/ಸಮಸ್ಯೆ ನಿವಾರಣೆಗಾಗಿ ಕೇಂದ್ರ ಸರ್ಕಾರದ ಇಮೇಲ್ ವಿಳಾಸ wheatstock-fpd@gov.in ಅನ್ನು ಸಂಪರ್ಕಿಸಲು ಸೂಚಿಸಲಾಗಿರುತ್ತದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉತ್ತರ ಕನ್ನಡ ಕಾರವಾರ ಇವರನ್ನು ಸಂಪರ್ಕಿಸಬಹುದಾಗಿರುತ್ತದೆ.

300x250 AD
Share This
300x250 AD
300x250 AD
300x250 AD
Back to top