ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ಸವಿತಾ ಮಹರ್ಷಿಗಳ ಜಯಂತಿ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸವಿತಾ ಮಹರ್ಷಿಗಳ ಅವರ ಭಾವಚಿತ್ರಕ್ಕೆ ಪುಷ್ಪ ಗೌರವವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಎಂ.ಎನ್.ಮಠದ್ ಅವರು ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿಗಳ ಆಚರಣೆ ನಮಗೆಲ್ಲರಿಗೂ ಆದರ್ಶಗಳ ಹಾದಿಯಲ್ಲಿ ನಡೆಯಲು ಪ್ರೇರಣಾದಾಯಿಯಾಗಿದೆ. ಸವಿತಾ ಸಮಾಜ ಹಿಂದುಳಿದ ಸಮಾಜವಾಗಿದ್ದು, ಸಮಾಜವು ಸಂಘಟನೆಯಿಂದ ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷ ಣಿಕವಾಗಿ ಬೆಳೆಯಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಅಧ್ಯಕ್ಷರಾದ ವಿಠ್ಠಲ್ ನಾರಾಯಣ ಕಾಳೆ, ಸಮಾಜದ ಪ್ರಮುಖರಾದ ವಿಜಯಾನಂದ ವಡ್ಡಮನಿ, ಶಾಂತರಾಮ್ ಮಹಾಲೆ, ಗೋಪಿನಾಥ್ ಗೋಡೆಕೆ, ಸಂತೋಷ್ ಮಾಜಿಗೌಕರ್, ಸಂತೋಷ್ ಗಂಗಾಧರ್, ಮನೋಜ್ ಪರಮಾರ ಹಾಗೂ ಸವಿತಾ ಸಮಾಜ ಬಾಂಧವರು, ಕಂದಾಯ ನಿರೀಕ್ಷಕರಾದ ರಾಘವೇಂದ್ರ ಪಾಟೀಲ್, ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳಾದ ಮುಕುಂದ ಬಸವಮೂರ್ತಿ, ದೀಪಾಲಿ ಪೆಡ್ನೇಕರ್, ಭರತ್, ಗಜಾನನ ಮೊದಲಾದವರು ಉಪಸ್ಥಿತರಿದ್ದರು.