Slide
Slide
Slide
previous arrow
next arrow

ದಾಂಡೇಲಿಯಲ್ಲಿ ಭಾರತಿ ದಿನದರ್ಶಿಕೆ ಬಿಡುಗಡೆ

300x250 AD

ದಾಂಡೇಲಿ : ಹಿಂದೂ ಸಮಾಜದ ಮಾರ್ಗದರ್ಶನದಲ್ಲಿ ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ಸಾಹಿ ಯುವ ಮುಖಂಡ ದಯಾನಂದ ಮರಾಠಿ ಮತ್ತು ಯಲ್ಲಾಪುರದ ಗಣೇಶ ಭಂಟ ಸಿದ್ದಪಡಿಸಿ, ಮುದ್ರಿಸಿದ ಭಾರತಿ ದಿನದರ್ಶಿಕೆಯ ಬಿಡುಗಡೆ ಸಮಾರಂಭವು ಗುರುವಾರ ನಗರದ ಶಂಕರ ಮಠದಲ್ಲಿ ಜರುಗಿತು.

ಭಾರತಿ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಪತ್ರಕರ್ತರಾದ ಸಂದೇಶ್.ಎಸ್.ಜೈನ್, ದಯಾನಂದ ಮರಾಠಿ ಮತ್ತು ಗಣೇಶ ಭಂಟ ಅವರು ಸಿದ್ದಪಡಿಸಿ,‌ಮುದ್ರಿಸಿರುವ ಭಾರತಿ ದಿನದರ್ಶಿಕೆ ಧರ್ಮ ಜಾಗೃತಿಯ ಜೊತೆಗೆ ಭವಿಷ್ಯದಲ್ಲಿ ದಾಂಡೇಲಿಗೊಂದು ಹೆಸರನ್ನು ತಂದುಕೊಡುವ‌ ನಿಟ್ಟಿನಲ್ಲಿ ಮುಂದಡಿಯಿಡಲಿದ್ದು, ಆ ನಿಟ್ಟಿನಲ್ಲಿ ಈ ದಿನದರ್ಶಿಕೆಯಿದೆ ಎಂದರು. ವೇಗವಾಗಿ ಬೆಳೆಯುತ್ತಿರುವ ಇಂದಿನ ದಿನಮಾನಗಳಲ್ಲಿ ಸಂಸ್ಕೃತಿ, ಸಂಸ್ಕಾರ‌ ಮಾಯವಾಗುತ್ತಿದೆ. ಹಿಂದೆ ಕೂಡು ಕುಟುಂಬ ಜೀವನ ಪದ್ಧತಿಯಿದ್ದ ಸಂದರ್ಭದಲ್ಲಿ ಮಕ್ಕಳ ಭವಿಷ್ಯದ ಉನ್ನತಿಗೆ ಸುಯೋಗ್ಯ ಸಂಸ್ಕಾರ, ಸಂಸ್ಕೃತಿಯ ವಾತವರಣವಿತ್ತು. ಇಂದು ನಾವು ನಮ್ಮ ಮಕ್ಕಳನ್ನು ವೈದ್ಯರನ್ನಾಗಿಸುವ, ಇಂಜೀನಿಯರನ್ನಾಗಿಸುವ ಧಾವಂತದಲ್ಲಿ ಮಕ್ಕಳಲ್ಲಿ ಧರ್ಮ ಜಾಗೃತಿ, ಉನ್ನತ ಆಚಾರ-ವಿಚಾರಗಳನ್ನು ಕಲಿಸುವ ಪದ್ದತಿಯಿಂದ ವಿಮುಖರಾಗಿದ್ದೇವೆ. ಹಾಗಾದಾಗ ಧರ್ಮ‌ಜಾಗೃತಿ, ಧರ್ಮ ಸಂಸ್ಥಾಪನೆ ಹೇಗೆ ಸಾಧ್ಯ. ನಾವು ನಮ್ಮ ಮೂಲ‌ ಸಂಸ್ಕೃತಿ, ಸಂಸ್ಕಾರ, ಆಚಾರ – ವಿಚಾರಗಳನ್ನು ನಮ್ಮ‌ ಮಕ್ಕಳಲ್ಲಿ ಮೈಗೂಡಿಸಿಕೊಳ್ಳಲು ಮುಂದಾಗಬೇಕೆಂದು ಕರೆ ನೀಡಿದರು.

ಜೆವಿಡಿ ಪಿಯು ಕಾಲೇಜಿನ ಹಿರಿಯ ಉಪನ್ಯಾಸಕರು ಹಾಗೂ ವಾಗ್ಮಿಗಳಾಗಿರುವ ಜಿ.ಎಸ್.ಹೆಗಡೆ ಮಾತನಾಡಿ ದಿನದರ್ಶಿಕೆಯ ಮಹತ್ವವನ್ನು ವಿವರಿಸಿ, ಪಂಚಾಗದ ಸಮಗ್ರ ವಿವರಣೆಯನ್ನು ನೀಡಿದರು. ನೂತನವಾಗಿ ಬಿಡುಗಡೆಗೊಂಡ‌ ಭಾರತಿ ದಿನದರ್ಶಿಕೆ ಹಿಂದೂ ಧರ್ಮಬಾಂಧವರ ಹೊಸ ವರ್ಷ ಯುಗಾದಿಯ ದಿನವನ್ನೆ ವರ್ಷದ ಮೊದಲ ದಿನವನ್ನಾಗಿಸಿಕೊಂಡು ಸಿದ್ದಪಡಿಸಲಾಗಿದ್ದು, ಅತ್ಯುತ್ತಮವಾದ ಕಾರ್ಯ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಆರ್.ಎಸ್.ಎಸ್ ಪ್ರಮುಖರಾದ ವಾಸುದೇವ ಪ್ರಭು, ಪ್ರತಿಯೊಬ್ಬ ಹಿಂದೂ ಧರ್ಮಿಯರು ಭಾರತಿ ದಿನದರ್ಶಿಕೆಯನ್ನು ತಮ್ಮ ತಮ್ಮ‌ ಮನೆಗಳಲ್ಲಿ ಇಟ್ಟುಕೊಳ್ಳಬೇಕು‌ ಮತ್ತು ಅದರಂತೆ ನಡೆದುಕೊಳ್ಳಬೇಕೆಂದು ಕರೆ‌ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಂಕರ ಮಠದ ಅಧ್ಯಕ್ಷರು ಹಾಗೂ ನಗರದ ವಕೀಲರ ಸಂಘದ ಅಧ್ಯಕ್ಷರಾದ ಎಚ್.ಎಸ್.ಕುಲಕರ್ಣಿ, ಭಾರತಿ ದಿನದರ್ಶಿಕೆ ಎಲ್ಲಾ ಹಿಂದೂ ಧರ್ಮಿಯರ ಮನೆಗಳಲ್ಲಿ ಅಗತ್ಯವಾಗಿ ಇರಬೇಕು. ಹಿಂದೂ ಧರ್ಮ ಜಾಗೃತಿ ಮತ್ತು ಸಂಸ್ಥಾಪನೆಯಲ್ಲಿ ಭಾರತಿ ದಿನದರ್ಶಿಕೆ ಮುಖ್ಯ ಪಾತ್ರವನ್ನು ವಹಿಸಲಿದೆ ಎಂದರು.

300x250 AD

ವೇದಿಕೆಯಲ್ಲಿ ನಗರಸಭೆಯ ಸದಸ್ಯರಾದ ಬುದ್ಧಿವಂತ ಗೌಡ ಪಾಟೀಲ್, ಗಜಾನನ ಉಪಸ್ಥಿತರಿದ್ದರು. ಭಾರತಿ ದಿನದರ್ಶಿಕೆಯ ಪ್ರಮುಖರಾದ ದಯಾನಂದ ಮರಾಠಿಯವರು ಭಾರತಿ ದಿನದರ್ಶಿಕೆಯ ಉದ್ದೇಶದೊಂದಿಗೆ ಇದರ ಅಗತ್ಯತೆಯನ್ನು ವಿವರಿಸಿ, ಸ್ವಾಗತಿಸಿದರು. ಭಾರತಿ ದಿನದರ್ಶಿಕೆಯ ಇನ್ನೋರ್ವ ಪ್ರಮುಖರಾದ ಗಣೇಶ ಭಂಟ ವಂದಿಸಿದರು. ಶಿಕ್ಷಕರಾದ ಗಣೇಶ್ ಹೆಗಡೆಯವರು ಕಾರ್ಯಕ್ರಮವನ್ನು ನಿರೂಪಿಸಿದರು

Share This
300x250 AD
300x250 AD
300x250 AD
Back to top