Slide
Slide
Slide
previous arrow
next arrow

ಫೆ.17, 18ಕ್ಕೆ ದಾಂಡೇಲಿಯಲ್ಲಿ ಹಾರ್ನ್‌ಬಿಲ್ ಹಬ್ಬ

300x250 AD

ಕಾರವಾರ: ಅರಣ್ಯ ಇಲಾಖೆ ಕೆನರಾ ವೃತ್ತ ಶಿರಸಿ, ಹಳಿಯಾಳ ಅರಣ್ಯ ವಿಭಾಗ ವತಿಯಿಂದ ಹಾರ್ನ್ ಬಿಲ್ ಹಬ್ಬ-2024 ಕಾರ್ಯಕ್ರಮವು ಫೆಬ್ರವರಿ 17 ಮತ್ತು 18 ರಂದು , ಹಾರ್ನ್‌ಬಿಲ್ ಭವನ, ಸರಕಾರಿ ಮರಮುಟ್ಟುಗಳ ಕೋಠಿ ಆವರಣ ದಾಂಡೇಲಿಯಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಘನ ಉಪಸ್ಥಿತರಿರಲಿದ್ದು, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ.ದೇಶಪಾಂಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷರು ಹಾಗೂ ಶಾಸಕ ಸತೀಶ್ ಕೆ. ಸೈಲ್, ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಶಿವರಾಮ ಹೆಬ್ಬಾರ್, ದಿನಕರ ಕೆ. ಶೆಟ್ಟಿ, ಭೀಮಣ್ಣ ಟಿ. ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರು, ಶಾಂತಾರಾಮ ಬುಡ್ನಾ ಸಿದ್ದಿ, ಗಣಪತಿ ಉಳ್ವೇಕರ ಮತ್ತಿತರು ಪಾಲ್ಗೊಳ್ಳಲಿದ್ದಾರೆ.
ದಾಂಡೇಲಿಯು ತನ್ನ ಪ್ರಾಕೃತಿಕ ಸೌಂದರ್ಯದಿAದ ಸಮೃದ್ಧವಾಗಿದೆ. ಎಲೆ ಉದುರುವ ಅರಣ್ಯದಿಂದ ನಿತ್ಯ ಹರಿದ್ವರ್ಣ ಅರಣ್ಯದರೆಗಿನ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ಇಲ್ಲಿರುವ ಜೀವ ವೈವಿಧ್ಯತೆಯು ಪರಿಸರ ಪ್ರೇಮಿಗಳನ್ನು ಕೈಬೀಸಿ ಆಯಸ್ಕಾಂತದಂತೆ ತನ್ನತ್ತ ಸೆಳೆಯುತ್ತದೆ. ದಾಂಡೇಲಿ ಪ್ರಾಕೃತಿಕ ಶ್ರೇಣಿಯ ಪ್ರತೀಕವಾಗಿರುವ ಮುಕುಟ ಪ್ರಾಯ ಪಕ್ಷಿಯೇ ಹಾರ್ನ ಬಿಲ್ ಅರ್ಥಾತ್ ಮಂಗಟ್ಟೆ ಪಕ್ಷಿ. ಪ್ರತಿ ವರ್ಷ ಕರ್ನಾಟಕ ಅರಣ್ಯ ಇಲಾಖೆ ಹಳಿಯಾಳ ಪ್ರಾದೇಶಿಕ ಅರಣ್ಯ ವಿಭಾಗವು ಈ ಪಕ್ಷಿಯ ಮಹತ್ವವನ್ನು ಹಾಗೂ ಪ್ರಾತಿನಿಧ್ಯವನ್ನು ಪ್ರಚುರಪಡಿಸಲು ಹಾರ್ನಬಿಲ್ ಹಬ್ಬವನ್ನು ವಿದ್ಯುಕ್ತವಾಗಿ ಆಚರಿಸುತ್ತದೆ. ದಾಂಡೇಲಿ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಒಟ್ಟು ನಾಲ್ಕು ಬಗೆಯ ಹಾರ್ನಬಿಲ್ ಪಕ್ಷಿಗಳಿದ್ದು ಅವುಗಳ ಹೆಸರು ಮಲಬಾರ್ ಗ್ರೇ ಹಾರ್ನಬಿಲ್, ಮಲಬಾರ್ ಪೈಡ್ ಹಾರ್ನಬಿಲ್, ಗ್ರೇಟ್ ಹಾರ್ನಬಿಲ್, ಇಂಡಿಯನ್ ಗ್ರೇ ಹಾರ್ನಬಿಲ್. ಇವುಗಳ ಸ್ವರ್ಗ ತಾಣವೇ ದಾಂಡೇಲಿಯಾಗಿದೆ. ಈ ಹಕ್ಕಿಹಬ್ಬದಲ್ಲಿ ನೊಂದಣಿ ಮೂಲಕ ಭಾಗವಹಿಸುವ ಎಲ್ಲರಿಗೂ ಚರ್ಚೆಗಳು, ಸಫಾರಿ, ಪಕ್ಷಿ ವೀಕ್ಷಣೆ, ಚಾರಣವನ್ನು ಹಮಿಕೊಳ್ಳಲಾಗುತ್ತದೆ. ಹಳಿಯಾಳ ಅರಣ್ಯ ವಿಭಾಗವು ಹಾರ್ನಬಿಲ್ ಹಕ್ಕಿಹಬ್ಬಕ್ಕೆ ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುತ್ತಿದ್ದು, ಹೆಮ್ಮೆಯ ಹಾರ್ನಬಿಲ್ ಹಬ್ಬದಲ್ಲಿ ಎಲ್ಲರೂ ಭಾಗವಹಿಸುವಂತೆ ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ್ ಕುಮಾರ್ ಕೆ.ಸಿ. ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top