ಶಿರಸಿ: ಇತ್ತೀಚೆಗೆ ಸೇಡಂನಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ ಶಿರಸಿಯ ಗಣೇಶನಗರದ ಸರ್ಕಾರಿ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿಗಳಾದ ದರ್ಶನ ಬಾಗೇವಾಡಿ ಮತ್ತು ರಕ್ಷಿತಾ ಹೆಗಡೆ ಇವರು ಮಂಡಿಸಿದ “ಪರಿಸರ ವ್ಯವಸ್ಥೆ ಮತ್ತು ಆರೋಗ್ಯಕ್ಕಾಗಿ ವೈಜ್ಞಾನಿಕ ತಾಂತ್ರಿಕತೆ” ಎಂಬ ವಿಷಯದ ಮೇಲೆ ಮಂಡಿಸಿದ ಪ್ರೊಜೆಕ್ಟ್ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ವಿಜ್ಞಾನ ಶಿಕ್ಷಕ ಕೆ.ಎಲ್. ಭಟ್ಟ ಮಾರ್ಗದರ್ಶನ ನೀಡಿದ್ದು,ಅಭಿಷೇಕ್ ನಾಯ್ಕ ತಾಂತ್ರಿಕ ನೆರವು ನೀಡಿದ್ದಾರೆ. ಈ ಸಾಧನೆಗೆ ನೆರವಾದ ಎಲ್ಲರನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪಿ.ಬಸವರಾಜ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್.ಸಿ.ನಾಯ್ಕ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಪ್ರಕಾಶ ಆಚಾರಿ, ಮುಖ್ಯಾಧ್ಯಾಪಕ ಆರ್.ಜಿ.ಪಟಗಾರ ಮತ್ತು ಶಿಕ್ಷಕವೃಂದದವರು ಅಭಿನಂದಿಸಿದ್ದಾರೆ.