Slide
Slide
Slide
previous arrow
next arrow

ಲಂಚ ಪಡೆದ ಗ್ರಾಮ ಲೆಕ್ಕಾಧಿಕಾರಿಗೆ ಶಿಕ್ಷೆ ಪ್ರಕಟ

300x250 AD

ಕಾರವಾರ: ಜಮೀನನ್ನು ವಾಂಟಣಿ ಮಾಡಿಕೊಡಲು ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಭ್ರಷ್ಠಾಚಾರ ಪ್ರತಿಬಂಧಕ ಕಾಯ್ದೆ -1988 ರ ಕಲಂ 7 ರಡಿ 2 ವರ್ಷಗಳ ಕಠಿಣ ಕಾರಾಗೃಹ ವಾಸ ಶಿಕ್ಷೆ ಹಾಗೂ 5000 ರು ದಂಡ ಹಾಗೂ ಕಲಂ13(1)(ಡಿ)ಸಹಿತ 13(2) ರಡಿಯಲ್ಲಿ 2 ವರ್ಷಗಳ ಕಠಿಣ ಕಾರಾಗೃಹ ವಾಸ ಶಿಕ್ಷೆ ಹಾಗೂ 10000 ರು ದಂಡ ವಿಧಿಸಿ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 6 ತಿಂಗಳ ಕಾರಾವಾಸ ಶಿಕ್ಷೆ ವಿಧಿಸಿ, ವಿಶೇಷ ಮತ್ತು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯ ಕುಮಾರ್ ತೀರ್ಪು ನೀಡಿದ್ದಾರೆ.

ಪ್ರಕರಣ ಹಿನ್ನಲೆ: ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಎಚ್,ಭಜಂತ್ರಿ ಇವರು , ಗಂಗಾ ತಿಮ್ಮಯ್ಯ ಕೋಡಿಯಾ ಅವರ ಜಮೀನನ್ನು ಅವರ ಮಕ್ಕಳಾದ ಮಹಾಬಲೇಶ್ವರ ತಿಮ್ಮಯ್ಯ ಕೊಡಿಯಾ ಹಾಗೂ ಶಂಕರ ಕೊಡಿಯಾ ಅವರ ಹೆಸರಿಗೆ ವಾಂಟಣಿ ಮಾಡಿಕೊಡಲು 20000 ಲಂಚದ ಹಣಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ 1500 ಪಡೆದುಕೊಂಡು ನಂತರ 18500 ಹಣಕ್ಕೆ ಬೇಡಿಕೆ ಇಟ್ಟಿದ್ದು, ಟ್ರಾಪ್ ಕಾರ್ಯಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಆಪಾದಿತ ನೌಕರರ ವಿರುದ್ದ ವಿಶೇಷ ಮತ್ತು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ, ಉತ್ತರ ಕನ್ನಡದಲ್ಲಿ ದೋಷಾರೋಪಣ ಪತ್ರ ಸಲ್ಲಿಕೆಯಾಗಿ, ವಿಚಾರಣೆ ನಡೆಸಲಾಗಿತ್ತು. ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ಲಕ್ಷ್ಮಿಕಾಂತ ಎಮ್. ಪ್ರಭು ವಾದ ಮಂಡಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top