Slide
Slide
Slide
previous arrow
next arrow

ಚುನಾವಣೆ ಪ್ರಕ್ರಿಯೆಯಲ್ಲಿ ಬೂತ್ ಲೆವೆಲ್ ಏಜೆಂಟ್‌ ಪಾತ್ರ ಮಹತ್ವದ್ದು: ಸಚಿವ ವೈದ್ಯ

300x250 AD

ಹೊನ್ನಾವರ: ಚುನಾವಣೆ ಪ್ರಕ್ರಿಯೆಯಲ್ಲಿ ಬೂತ್ ಲೆವೆಲ್ ಏಜೆಂಟ್‌ರ ಪಾತ್ರ ಮಹತ್ವದಾಗಿದ್ದು, ಜಿಲ್ಲೆಯ 1435 ಬೂತಗಳಲ್ಲೂ ಸಕ್ರಿಯ ಮತ್ತು ಕ್ರಿಯಾತ್ಮಕ ಕಾಂಗ್ರೇಸ್ ಕಾರ್ಯಕರ್ತರನ್ನು ಬೂಲ್ ಲೆವೆಲ್ ಏಜೆಂಟರನ್ನಾಗಿ ನೇಮಕ ಮಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಜಯ ಭಾರಿಸುತ್ತದೆ ಎಂದು ಉಸ್ತುವಾರಿ ಸಚಿವ ಮಂಕಾಳ ವೈಧ್ಯ ಹೇಳಿದರು.

 ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಸಾಯಿಗಾಂವಕರ ನೇತೃತ್ವದ ಹೊನ್ನಾವರ ತಾಲೂಕಿನ, ಸಾಗರ ರೆಸಿಡೆನ್ಸಿ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಿಗೆ ಏಜೆಂಟ್ ನೇಮಕಾತಿಯ ಮಾಹಿತಿಯ ಕಡತವನ್ನ ವಿತರಿಸಿ ಮೇಲಿನಂತೆ ಮಾತನಾಡುತ್ತಿದ್ದರು.

 ವಿಧಾನ ಸಭೆ ಚುನಾವಣೆ ಫಲಿತಾಂಶದಂತೆ, ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯೋನ್ಮುಖರಾಗಬೇಕೆಂದು ಅವರು ತಿಳಿಸಿದರು. ಸಭೆಯಲ್ಲಿ ಶಿರಸಿ ಶಾಸಕ ಭಿಮಣ್ಣ ನಾಯ್ಕ, ಕಾರವಾರ ಶಾಸಕ ಸತೀಶ್ ಶೈಲ್, ಕುಮಟ ಕ್ಷೇತ್ರದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತಾ ಆಳ್ವಾ ಕಾರ್ಯರ್ತರಿಗೆ ಸಂಘಟನೆಯ ಕುರಿತು ಮಾಹಿತಿ ನೀಡಿದರು. ಡಿಸಿಸಿ ಉಪಾಧ್ಯಕ್ಷ ರಾಮ ಮೊಗೇರ್ ಉಪಸ್ಥಿತರಿದ್ದರು. ಕೆನರಾ ಲೋಕಸಭೆ ಕ್ಷೇತ್ರದ ಬೂತ್ ಲೆವೆಲ್ ಏಜೆಂಟ್ ರಚನಾ ಸಮಿತಿಯ ಅಧ್ಯಕ್ಷ ರವೀಂದ್ರ ನಾಯ್ಕ ಏಜೆಂಟ್ ನೇಮಕಾತಿಯ ಮಾಹಿತಿಯನ್ನು ನೀಡಿದರು.

300x250 AD

 ಕಾರ್ಯಕ್ರಮದಲ್ಲಿ ಮಂಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕ ಸ್ವಾಗತಿಸಿದರೆ, ಜಿಲ್ಲಾ ಕಾಂಗ್ರೇಸ್ ಎಸ್. ಸಿ. ಸೇಲ್ ಅಧ್ಯಕ್ಷ ಬಸವರಾಜ ದೊಡ್ಮನೆ ವಂದಿಸಿದರು. ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಆರ್.ಹೆಚ್.ನಾಯ್ಕ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಜಿಲ್ಲೆಯ ಎಲ್ಲಾ ಬ್ಲಾಕ್, ಎಲ್ಲಾ ಸೇಲ್‌ಗಳ, ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು, ಕಾಂಗ್ರೇಸ್ ಪಕ್ಷದ ಕೆಪಿಸಿಸಿ ಸದಸ್ಯರು ಮುಂತಾದವರು ಸಭೆಯಲ್ಲಿ ಹಾಜರಿದ್ದರು.

Share This
300x250 AD
300x250 AD
300x250 AD
Back to top