ಶಿರಸಿ: ಕರ್ನಾಟಕ ಕೆಮಿಸ್ಟ್ & ಡ್ರಗ್ಗಿಸ್ಟ್ ಅಸೋಸಿಯೇಶನ್ ಶಿರಸಿ ಘಟಕ, ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಶಿರಸಿ ಘಟಕ, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.) ಜಿಲ್ಲಾ ಶಾಖೆ: ಉತ್ತರ ಕನ್ನಡ, ಕರ್ನಾಟಕ ರಾಜ್ಯ ಸರ್ಕಾರಿ ಪ್ರಯೋಗಶಾಲಾ ತಂತ್ರಜ್ಞರ ಸಂಘ ಜಿಲ್ಲಾ ಶಾಖೆ: ಉತ್ತರ ಕನ್ನಡ ಇವರ ಸಹಭಾಗಿತ್ವದೊಂದಿಗೆ ಮತ್ತು ಇಕೋ ಕೇರ್ (ರಿ.) ಶಿರಸಿ, ಜೆ.ಕೆ. ಫಾರ್ಮ ಶಿರಸಿ ಮತ್ತು ಜೆ.ಕೆ. ಎಂಟರ್ಪ್ರೈಸಸ್ ಶಿರಸಿ ಇವರ ಸಹಕಾರದೊಂದಿಗೆ ಹೆಲ್ತ್ ಕ್ರಿಕೆಟ್ ಲೀಗ್ HCL-2024 ಸೀಸನ್-2, ಫೆ.11, ರವಿವಾರ ಬೆಳಿಗ್ಗೆ 9:30 ಕೆ ಶಿರಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು.
ಶಿರಸಿ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀಧರ್ ಹೆಗಡೆ ದೀಪ ಬೆಳಗಿಸಿ ಮಾತನಾಡಿ, ಕ್ರಿಕೆಟ್ ಕ್ರೀಡೆಯ ಬಗ್ಗೆ ಮಾತನಾಡಿ ಎಲ್ಲರಿಗೂ ಶುಭ ಹಾರೈಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೆ.ಕೆ. ಫಾರ್ಮ ಮತ್ತು ಜೆ.ಕೆ. ಎಂಟರ್ಪ್ರೈಸಸ್ ಶಿರಸಿಯ ಮಾಲೀಕರಾದ ಜಿತೇಂದ್ರ ಕುಮಾರ್ ತೋನ್ಸೆ ಭಾಗವಹಿಸಿ ಕ್ರಿಕೆಟ್ ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಫಾರ್ಮಸಿ ಅಧಿಕಾರಿಗಳ ಸಂಘ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಮಹೇಶ್ ಡಿ. ನಾಯಕ, ಅತಿಥಿಗಳಾಗಿ ಕಪಿಲಾ ಮೆಡಿಕಲ್ಸ್ ಏಜೆನ್ಸಿ ಶಿರಸಿಯ ಚಂದ್ರಶೇಖರ್ ಹೆಗಡೆ, HCL ಕಮಿಟಿಯ ಸದಸ್ಯರಾಗಿರುವ ವಿಜಯಕುಮಾರ್ ಬಿ.ಎಂ, ವಿನಾಯಕ್ ಭಾಗವತ್, ಅನೀಸ್ ಜವಳಿ, ಹಿರಿಯ ಫಾರ್ಮಸಿ ಅಧಿಕಾರಿ ಎಸ್.ವಿ. ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಕ್ರಿಕೆಟ್ ಪಂದಾವಳಿ ನಡೆಯಿತು. ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಕಾರ್ಯದರ್ಶಿಗಳಾದ ರಮೇಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.