Slide
Slide
Slide
previous arrow
next arrow

ಶಿವಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಪ್ರಕಾಶ ರಜಪೂತ್

300x250 AD

ಕಾರವಾರ: ಕಾಯಕ ಶರಣರು ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ಹೋಗಲಾಡಿಸಿ ಎಲ್ಲರೂ ಸಮಾತೆಯಿಂದ ಬದುಕಬೇಕೆಂದು ತಮ್ಮ ಕಾಯಕ ಹಾಗೂ ಸರಳ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಕಾಯಕ ಶರಣರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಉರಿಲಿಂಗಪೆದ್ದಿ, ಮಾದರ ಧೂಳಯ್ಯ, ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
12ನೇ ಶತಮಾನದಲ್ಲಿನ ಶ್ರೇಷ್ಠ ಶರಣರಲ್ಲಿ ಉರಿಲಿಂಗಪೆದ್ದಿ, ಮಾದಾರ ಧೂಳಯ್ಯ, ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ ಪ್ರಮುಖರು. ಇವರು ತಮ್ಮ ಕಾಯಕದ ಮೂಲಕ ಸಮಾಜದಲ್ಲಿ  ತಾವು  ಮಾಡುವ ಕಾಯಕದಲ್ಲಿ ಶಿವನನ್ನು ಕಂಡವರು. ಯಾವುದೇ ವೃತ್ತಿಯಲ್ಲಿ ಮೇಲು ಕೀಳು ಎಂಬ ಭಾವನೆ ಇರಬಾರದು, ನಾವು ಮಾಡುವ ವೃತ್ತಿಯಲ್ಲಿ ಪ್ರಾಮಾಣಿಕತೆ, ಶ್ರದ್ಧೆ ಇರಬೇಕು ಎಂದು ತೋರಿಸಿಕೊಟ್ಟವರು. ಅಂತಹ ಮಹಾನ ಶಿವಶರಣರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಡಾ.ಡಿ.ಎಸ್. ದೊಡ್ಡಮನಿ ಉಪನ್ಯಾಸ ನೀಡಿ, ಕರ್ನಾಟಕ ಇತಿಹಾಸ ಮತ್ತು ಕನ್ನಡ ಸಾಹಿತ್ಯದಲ್ಲಿ 12ನೇ ಶತಮಾನ ಅತ್ಯಂತ ಪ್ರಮುಖ ಕಾಲಘಟ್ಟ.  ಈ ಕಾಲಘಟ್ಟದಲ್ಲಿ ಜನಸಾಮಾನ್ಯರು ಶಿಕ್ಷಣದಿಂದ ವಂಚತರಾಗಿದ್ದರು, ಇಂತಹ ಸಂದರ್ಭದಲ್ಲಿ ಕಾಯಕ ಶರಣರು ಆಡುಭಾಷೆಯಲ್ಲಿ ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಸರಳವಾಗಿ ವಚನಗಳನ್ನು ರಚನೆ ಮಾಡಿ ಸಮಾಜದಲ್ಲಿನ ಮೇಲು ಕೀಳು ಎಂಬ ತಾರತಮ್ಯವನ್ನು ಹೋಗಲಾಡಿಸಿ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಎಂದರು. ಯಾವುದೇ ಕಾಯಕವು ಜಾತಿಯ ಸಂಕೇತವಲ್ಲ.  ಜಾತಿ ಹುಟ್ಟಿನಿಂದ ಬಂದಿದ್ದಲ್ಲ,  ಉಪ ಜೀವನಕ್ಕೆ ಕೈಗೊಂಡ ಕಾಯಕ ಜಾತಿಯಲ್ಲ ಎಂಬ ಕಾಯಕ  ಶರಣರ ನಿಲುವು ಸಮಾಜದಲ್ಲಿ ಬದಲಾವಣೆ ತಂದಿತು ಎಂದರು.

300x250 AD

ಸಭಾ ಕಾರ್ಯಕ್ರಮಕ್ಕೂ ಮುನ್ನ  ಕಾಯಕ ಶರಣರ ಭಾವಚಿತ್ರವಿರುವ  ಜಾಥಾಕ್ಕೆ ಚಾಲನೆ ನೀಡಲಾಯಿತು. ಜಾಥದಲ್ಲಿ ವಿದ್ಯಾರ್ಥಿಗಳು, ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಚಮಗಾರ ಹರಳಯ್ಯ ಸಮಾಜದ ರಾಜ್ಯ ಸಂಘಟನಾ ಸಂಚಾಲಕ ದೀಪಕ ಕುಡಾಳಕರ, ನಗರ ಸಭೆ ಸದಸ್ಯ ಹನಮಂತಪ್ಪ ತಳವಾರ, ನಗರ ಸಭೆ ಪೌರಾಯುಕ್ತ ಚಂದ್ರಮೌಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಮಚಂದ್ರ ಕೆ.ಎಮ್., ವಿವಿಧ ಸಮಾಜದ ಮುಖಂಡರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top