Slide
Slide
Slide
previous arrow
next arrow

ಗಾಂಜಾ ಸಾಗಾಟ: ಐವರ ಬಂಧನ

300x250 AD

ಯಲ್ಲಾಪುರ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ 5 ಜನರನ್ನು ಯಲ್ಲಾಪುರ ಪೊಲೀಸರು ತಾಲೂಕಿನ ತಾಟವಾಳದ ಬಳಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಯಲ್ಲಾಪುರದ ನೂತನ ನಗರದ ಮೀರ್ ಅದಂ ಮೀರ್ ಮುನಾಫ, ಸೈಯ್ಯದ್ ನಯೀಂ ಸೈಯ್ಯದ್ ಮಹಮ್ಮದ್, ಮಲ್ಲಿಕ್ ರಿಹಾನ್ ಹರೂನ್ ಶೇಖ್, ಉದ್ಯಮನಗರದ ಪವನ ಸರ್ವೇಶ ಬನ್ಸೋಡೆ ಹಾಗೂ ಮದನೂರು ಸಮೀಪದ ಖಂಡ್ರೆನಕೊಪ್ಪದ ಮಾಲು ಲಕ್ಕು ಲಾಂಬೋರೆ ಬಂಧಿತರು. ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇವರನ್ನು ಪೊಲೀಸರು ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ. ಇವರಿಂದ 565 ಗ್ರಾಂ ಗಾಂಜಾ, 2600 ರೂ ನಗದು, 4 ಮೊಬೈಲ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top