Slide
Slide
Slide
previous arrow
next arrow

ತೀವ್ರ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ಆಸರೆಯಾಗಲು ಮನವಿ

300x250 AD

ಹೊನ್ನಾವರ: ಪಟ್ಟಣದ ಪ್ರಭಾತ ನಗರದ ನಿವಾಸಿಯಾಗಿರುವ ಸುಪ್ರಿತಾ ಪಾಲೇಕರ್ ಎನ್ನುವ ಬಡಕುಟುಂಬದ ಯುವತಿ ಅತಿವಿರಳವಾದ,ಜೀವಕ್ಕೆ ಅಪಾಯಕಾರಿಯಾದ ಕರುಳ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಅಂದಾಜು 6ಲಕ್ಷದಷ್ಟು ಖರ್ಚಾಗಲಿದ್ದು ದಾನಿಗಳು ನೆರವಾಗುವಂತೆ ಕುಟುಂಬಸ್ಥರು ಕೋರಿದ್ದಾರೆ.

ಈ ಕುರಿತು ಸುಪ್ರಿತಾಳ ತಾಯಿ ಅನಿತಾ ಪತ್ರಿಕೆಯ ಮೂಲಕ ವಿನಂತಿಸಿದ್ದು, ತಮ್ಮ ಮಗಳು ಸುಮಾರು ನಾಲ್ಕುವರೆ ವರ್ಷಗಳಿಂದ ಕ್ರೋನ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಮಣಿಪಾಲದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇನೆ. ಕ್ರೋನ್ಸ್ ಒಂದು ಕರುಳ ಸಂಬಂಧಿ ಕಾಯಲೆಯಾಗಿದ್ದು, ತುಂಬಾ ಅಪರೂಪದ ಕಾಯಿಲೆಯಾಗಿದೆ. ತಮ್ಮ ಮಗಳನ್ನು ಈ ಒಂದು ವರ್ಷದಲ್ಲಿ ಸತತವಾಗಿ ಏಳು ಸಲ ಮಣಿಪಾಲದಲ್ಲಿ ಆಡ್ಮಿಟ್ ಮಾಡಿದ್ದೇನೆ. ಮಗಳನ್ನು ಆರೋಗ್ಯವಾಗಿ ಉಳಿಸಿಕೊಳ್ಳಲು ಇಲ್ಲಿಯವರೆಗೂ ಒಂಟಿಯಾಗಿ ಸತತ ಪ್ರಯತ್ನ ಮಾಡಿದೆ. ಆದರೇ ಈಗ ಮಗಳಿಗೆ ಪ್ರತೀ ಎರಡು ತಿಂಗಳಿಗೆ ಒಂದರಂತೇ ಎರಡು ವರ್ಷ ಆ ಕಾಯಿಲೆಗೆ ಸಂಬಂಧಪಟ್ಟ ಇಂಜೆಕ್ಷನ್ ಅಗತ್ಯವಿದ್ದು, ಒಂದು ಇಂಜೇಕ್ಷನ್ ಬೆಲೆ ಬರೋಬರಿ ₹90ಸಾವಿರ ರೂಪಾಯಿ ಆಗಿರುತ್ತದೆ. ಇಷ್ಟೊಂದು ದುಬಾರಿಯ ವೆಚ್ಚವನ್ನು ಭರಿಸಲು ಕಷ್ಟವಾಗಿದೆ. ಜೊತೆಗೇ ಮಾತ್ರೆಗಳು, ಪ್ರತೀ ಹದಿನೈದು ದಿನಕ್ಕೊಮ್ಮೆ ಬ್ಲಡ್ ಚೆಕಪ್, ಎಂ ಆರ್ ಐ ಸಿಟಿ ಸ್ಕ್ಯಾನ್, ಕೊಲೋನ್ ಸ್ಕೋಪೀ ಇವೆಲ್ಲವನ್ನು ಎದುರಿಸಲು ಕಷ್ಟಸಾಧ್ಯವಾಗಿದೆ ಎಂದು ಅಳಲನ್ನು ತೋಡಿಕೊಂಡಿದ್ದು,ದಾನಿಗಳು ಹಣಕಾಸಿನ ಸಹಾಯ ನೀಡಿ ಎಂದು ವಿನಂತಿಸಿದ್ದಾರೆ. ಸಹಾಯ ನೀಡಲಿಚ್ಚಿಸುವವರು ಈ ಕೆಳಗಿನ ಬ್ಯಾಂಕ್ ಖಾತೆ ಅಥವಾ ಆನ್ಲೈನ್ ಪೇಮೆಂಟ್ ಮಾಡಬಹುದು ಎಂದು ತಿಳಿಸಿದ್ದಾರೆ.

300x250 AD

Name – ANITA UDAY PALEKAR
Account number – 122003527690
IFSC code – KSCB0016001
Branch – honnavar
KDCC Bank
GP & phone pay No –tel:+919986851440
Contact number –tel:+919986851440/ tel:+919148737117

Share This
300x250 AD
300x250 AD
300x250 AD
Back to top