Slide
Slide
Slide
previous arrow
next arrow

ಫೆ.11ಕ್ಕೆ ಕಾರವಾರದಲ್ಲಿ ‘ವಾಕಾಥಾನ್’

300x250 AD

ಕಾರವಾರ: ಇಲ್ಲಿನ ರೋಟರಿ ಕ್ಲಬ್ ಪಶ್ಚಿಮದಿಂದ ಫೆ. 11ರಂದು ಬೆಳಗ್ಗೆ 6.30ಕ್ಕೆ ಮಾಲಾದೇವಿ ಕ್ರೀಡಾಂಗಣದಿಂದ ವಾಕಾಥಾನ್ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಅರವಿಂದ ನಾಯಕ ತಿಳಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, 15 ವರ್ಷದ ಒಳಗೆ, 60 ಮೇಲ್ಪಟ್ಟವರಿಗೆ 5k, 16 ರಿಂದ 35, 36ರಿಂದ 59 ವರ್ಷ 10k ಸ್ಪರ್ಧೆ ಇರುತ್ತದೆ. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವೀತಿಯ ಬಹುಮಾನ ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ನೀಡಲಾಗುತ್ತದೆ ಎಂದು ತಿಳಿಸಿದರು.

300x250 AD

ಕ್ಲಬ್‌ನ ಪ್ರಕಾಶ ರೇವಣಕರ ಮಾತನಾಡಿ, ಈ ಕಾರ್ಯಕ್ರಮಕ್ಕಾಗಿ ದಾನಿಗಳ ಬಳಿ ಹಣ ಪಡೆಯಲಾಗುತ್ತದೆ. ಕಾರ್ಯಕ್ರಮದ ಬಳಿಕ ಉಳಿದಿರುವ ಹಣವನ್ನು ಸಮಾಜದ ವಿವಿಧ ಕೆಲಸಕ್ಕಾಗಿ ಸದ್ವಿನಿಯೋಗ ಮಾಡಲಾಗುತ್ತದೆ. ಕಳೆದ ಬಾರಿ ಹೆಚ್ಚುವರಿಯಾಗಿ ಉಳಿದ ಹಣದಲ್ಲಿ ಅಂಕೋಲಾ ಕಾರವಾರ ಭಾಗದಲ್ಲಿ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಶಿವಾನಂದ ನಾಯಕ,
ಜಯದೀಪ ಪಾಟೀಲ, ಲಕ್ಷ್ಮೀಕಾಂತ ತೆಂಡುಲಕರ, ಅಶ್ವಥ ನಾಯಕ, ದಿನೇಶ ನಾಯ್ಕ, ರತ್ನಾಕರ ಅಂಬಿಗ
ಪತ್ರಿಕಾಗೋಷ್ಟಿಯಲ್ಲಿದ್ದರು.

Share This
300x250 AD
300x250 AD
300x250 AD
Back to top