ಅಂಕೋಲಾ: ಬೇಟಿ ಬಚಾವೋ ಬೇಟಿ ಪಡಾವೋ ಜಾಗೃತಿ ಕುರಿತು ತಾಲೂಕಿನಲ್ಲಿ ಬೀದಿ ನಾಟಕ ಪ್ರದರ್ಶನ ನಡೆಯಿತು.
ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ, ತಾಲೂಕ ಪಂಚಾಯತ, ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಜನರಿಗೆ ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸಲಾಯಿತು. ತಾಲೂಕಿನ ಅವರ್ಸಾ ಮೀನು ಮಾರುಕಟ್ಟೆ ಎದುರು ಮತ್ತು ಪಟ್ಟಣದ ಪೊಲೀಸ್ ಠಾಣಾ ವೃತ್ತದಲ್ಲಿ ದೇವಮಾತಾ ವಿವಿದ್ದೋದೇಶ ಸಂಸ್ಥೆ ಅಮದಳ್ಳಿ ಇವರ ಬೀದಿ ನಾಟಕ ತಂಡದಿಂದ ಹೆಣ್ಣು ಶಿಶು ಹತ್ಯೆ ತಡೆಯುವುದು, ಹೆಣ್ಣು ಶಿಶುಗಳ ಹತ್ಯೆಯಿಂದ ಸಮಾಜದ ಮೇಲೆ ಆಗುವ ಅಸಮತೋಲನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಉಪತಹಶೀಲ್ದಾರ ಬಿ.ಜಿ ಕುಲಕರ್ಣಿ ತಮಟೆ ಬಾರಿಸುವ ಮೂಲಕ ಬೀದಿ ನಾಟಕಕ್ಕೆ ಚಾಲನೆ ನೀಡಿದರು. ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸವಿತಾ ಶಾಸ್ತ್ರೀಮಠ, ಬಿಇಓ ಮಂಗಳಲಕ್ಷ್ಮೀ ಪಾಟೀಲ, ಪಿಎಸ್‌ಐ ಉದ್ದಪ್ಪ ದರೇಪ್ಪನವರ, ಟಿಎಚ್‌ಒ ಜಗದೀಶ ನಾಯ್ಕ ಸೇರಿದಂತೆ ಹಲವರು ಇದ್ದರು.