Slide
Slide
Slide
previous arrow
next arrow

ಇಂಡಿಯಾ ಎನರ್ಜಿವೀಕ್ ಮಹಾಮೇಳ: ಭಾರೀ ವಾಹನಗಳಿಗೆ ಪ್ರವೇಶ ನಿರ್ಬಂಧ

300x250 AD

ಕಾರವಾರ: ಗೋವಾದ ಬೆತುಲ್‌ನಲ್ಲಿ ಇಂಡಿಯಾ ಎನರ್ಜಿವೀಕ್ ಮಹಾಮೇಳ ನಡೆಯಲಿರುವ ಕಾರಣ ಭಾರಿ ಗಾತ್ರದ ವಾಹನಗಳಿಗೆ ಫೆ.10ರವರೆಗೆ ಗೋವಾ ಪ್ರವೇಶಕ್ಕೆ ನಿಷೇಧ ಮಾಡಲಾಗಿದೆ. ಇದರಿಂದ ತಾಲೂಕಿನ ಮಾಜಾಳಿ ಗಡಿಯಲ್ಲಿ ಸಾಲುಗಟ್ಟಿ ನಿಂತಿವೆ. ಅಗತ್ಯ ವಸ್ತುಗಳ ಸಾಗಾಟದ ವಾಹನ ಹೊರತಾಗಿ ಬೇರೆಲ್ಲ ರೀತಿಯ ವಾಹನಗಳ ಪ್ರವೇಶವನ್ನು ಗಡಿಯಲ್ಲೇ ತಡೆಯಲು ಗೋವಾ ರಾಜ್ಯ ಸರ್ಕಾರದಿಂದ ಸೂಚನೆ ನೀಡಲಾಗಿದ್ದು, ಇದರಿಂದಾಗಿ ಕರ್ನಾಟಕ ಗೋವಾ ಗಡಿಯ ಮಾಜಾಳಿಯಲ್ಲಿ ಹತ್ತಾರು ಭಾರಿ ಗಾತ್ರದ ವಾಹನಗಳು ನಿಲ್ಲುವಂತಾಗಿದೆ. ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮಕ್ಕೆ 120 ದೇಶಗಳ 35 ಸಾವಿರ ಪ್ರತಿನಿಧಿಗಳು ಆಗಮಿಸಲಿದ್ದು, ಅವರಿಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಭಾರೀ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಗೋವಾ ಅಧಿಕಾರಿಗಳು ತಿಳಿಸಿದ್ದಾರೆ

300x250 AD
Share This
300x250 AD
300x250 AD
300x250 AD
Back to top