ಸಿದ್ದಾಪುರ: ತಾಲೂಕಿನ ನಾಣಿಕಟ್ಟಾದಲ್ಲಿ ತ್ಯಾಗಲಿ ಹಿ.ಪ್ರಾ. ಶಾಲೆಯ ಮೈದಾನದಲ್ಲಿ ಇತ್ತೀಚಿಗೆ ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ ಇವರ ಸಮರ್ಥ ಸಂಯೋಜನೆಯಲ್ಲಿ ‘ಹನುಮಾರ್ಜುನ ಮತ್ತು “ಕೃಷ್ಣಾರ್ಜುನ ಕಾಳಗ’ ಅದ್ಧೂರಿ ಪೌರಾಣಿಕ ಯಕ್ಷಗಾನ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸವಿ ನೆನಪಿನಲ್ಲಿ, ಶ್ರೀ ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ ಉ.ಕ. ಮತ್ತು ಅತಿಥಿ ಶ್ರೇಷ್ಠ ಕಲಾವಿದರ ಕೂಡುವಿಕೆಯಲ್ಲಿ ವಿಜೃಂಭಣೆಯಿಂದ ಜರುಗಿತು.
ವೇ.ಮೂ. ಶ್ರೀ ವಿನಾಯಕ ಸು ಭಟ್ಟ ಅವರ ದಿವ್ಯ ಉಪಸ್ಥಿತಿಯಲ್ಲಿ “ನಾಣಿಕಟ್ಟಾ ಯಕ್ಷೋತ್ಸವ” ನಡೆದಿದ್ದು, ಸಭೆಯ ಅಧ್ಯಕ್ಷತೆಯನ್ನು ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್.ಬಿ. ಹೆಗಡೆ ಮತ್ತೀಹಳ್ಳಿ ವಹಿಸಿದ್ದರು. ಟಿ.ಮ್.ಎಸ್. ಸಿದ್ದಾಪುರದ ಅಧ್ಯಕ್ಷ & ಕೆಡಿಸಿಸಿ ಜಿಲ್ಲಾ ಬ್ಯಾಂಕ್ ನಿರ್ದೇಶಕ ಆರ್.ಎಮ್. ಹೆಗಡೆ ಬಾಳೇಸರ ಮತ್ತು ಜಿಲ್ಲೆಯ ಯುವ ನೇತಾರ ಸಾಮಾಜಿಕ ಹೋರಾಟಗಾರ ಕಲಾ ಪೋಷಕರೂ ಆದಂತಹ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದರು, ಹಾಗೇ ಮುಖ್ಯ ಅತಿಥಿಗಳಾಗಿ ಶ್ರೀ ಸ್ವರ್ಣವಲ್ಲೀ ಸೋಂದಾ ಮಹಾಸಂಸ್ಥಾನದ ಆಡಳಿತ ಸಮಿತಿ ಸದಸ್ಯರಾದ ಎಂ.ಆರ್.ಹೆಗಡೆ ಬಾಳೇಜಡ್ಡಿ , ತ್ಯಾಗಲಿ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಯಶೋಧಾ ದತ್ತಾತ್ರೇಯ ನಾಯ್ಕ, ತ್ಯಾಗಲಿ ಪಂಚಾಯತದ ಕ್ರೀಯಾಶೀಲ ಸದಸ್ಯರಾದ ಗಣಪತಿ ಹೆಗಡೆ ತ್ಯಾಗಲಿ, ಕಲಾ ಪೋಷಕರಾದ ಗೋಪಾಲ ಹೆಗಡೆ ವಾಜಗದ್ದೆ, ನಾಣಿಕಟ್ಟಾದ ಹಿರಿಯ ಪ್ರಾಥಮಿಕ ಶಾಲೆ ತ್ಯಾಗಲಿ ಎಸ್‌ಡಿಎಂಸಿ ಅಧ್ಯಕ್ಷರಾದ ಗಣೇಶ ನಾಯ್ಕ, ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ ಸಮಿತಿಯ ಮುಖ್ಯಸ್ಥರಾದ ಮಂಜುನಾಥ ಎಮ್ ಹೆಗಡೆ ಹಂಗಾರಖಂಡ ಮತ್ತು ಗಣಪತಿ ಗಣೇಶ ಹೆಗಡೆ ಸೂರನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಈ ಎಲ್ಲ ಗಣ್ಯ ಮಹನೀಯರ ಉಪಸ್ಥಿತಿಯಲ್ಲಿ ಯಕ್ಷರಂಗದ ದಿಗ್ಗಜ ಭಾಗವತರಾದ ಸುರೇಶ ಶೆಟ್ಟಿ ಶಂಕರನಾರಾಯಣ ಅವರಿಗೆ “ಯಕ್ಷಗಾನ ಗಂಧರ್ವ” ಬಿರುದು ನೀಡಿ ಸನ್ಮಾನಿಸಲಾಯಿತು.ನಂತರ ‘ನಾಣಿಕಟ್ಟಾ ಯಕ್ಷೋತ್ಸವ’ ಅದ್ಧೂರಿಯಾಗಿ ಜರುಗಿತು. ಪ್ರಾರಂಭದಲ್ಲಿ ‘ಹನುಮಾರ್ಜುನ’ ಯಕ್ಷಗಾನ ನಂತರ ‘ಕೃಷ್ಣಾರ್ಜುನ’ ಯಕ್ಷಗಾನ ಸುಂದರವಾಗಿ ಮೂಡಿಬಂದಿತು. ಹಿಮ್ಮೇಳದಲ್ಲಿ ಸುರೇಶ ಶೆಟ್ಟಿ ಎಸ್, ರಾಮಕೃಷ್ಣ ಹೆಗಡೆ ಹಿಲ್ಲೂರು ಅವರುಗಳ ಸುಮಧುರ ದ್ವಂದ್ವ ಭಾಗವತಿಕೆ ಹಾಡುಗಳು, ನಾದ ಶಂಕರ ಶಂಕರ ಭಾಗವತರು, ಅನಿರುದ್ಧ ವರ್ಗಾಸರ, ಮದ್ದಲೆಯ ಝೇಂಕಾರ ಹಾಗೇ ಚಂಡೆಯ ಮಾಂತ್ರಿಕ ವಿಘ್ನೇಶ್ವರ ಕೆಸರಕೊಪ್ಪ ಅವರ ಚಂಡೆಯ ಅಬ್ಬರ ಸೇರಿದ ಐದನೂರುಕ್ಕೂ ಹೆಚ್ಚಿನ ಕಲಾ ಪ್ರೇಕ್ಷಕರ ಮನಸೂರೆಯಾಗಿ ಜನಮನ್ನಣೆ ಗಳಿಸಿತು. ಹಾಗೇ ಮುಮ್ಮೇಳದಲ್ಲಿ ಹನುಮಾರ್ಜುನದಲ್ಲಿ ಅಂಜನಾದೇವಿಯ ಪುತ್ರ ಕಲಿಹನುಮನಾಗಿ ಗಣಪತಿ ನಾಯ್ಕ ಕುಮಟಾ, ವೀರ ಅರ್ಜುನನಾಗಿ ರಾಮಚಂದ್ರ ಹೆಗಡೆ ಕೊಂಡದಕುಳಿ,ಬ್ರಾಹ್ಮಣನಾಗಿ ಹಾಸ್ಯ ಚಕ್ರವರ್ತಿ ಶ್ರೀಧರ ಭಟ್ಟ ಕಾಸರಕೋಡ, ರಾಮರೂಪನಾಗಿ ಕುಮಾರ ನಿತಿನ ದಂಟ್ಕಲ್ ಸುಂದರ ಅಭಿನಯ ಪ್ರದರ್ಶಿಸಿದರೆ, ನಂತರ ಕೃಷ್ಣಾರ್ಜುನದ ಘನ ಗಾಂಭೀರ್ಯದ ಪಾರ್ಥನಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಬಳ್ಕೂರು ಕೃಷ್ಣ ಯಾಜಿ ,ಸುಂದರ ಕೃಷ್ಣನಾಗಿ ಯಕ್ಷಯುವರಾಜ ನಾಟ್ಯಸುಂದರ ಯಕ್ಷಕಣ್ಮಣಿ ಕಾರ್ತಿಕ ಹೆಗಡೆ ಚಿಟ್ಟಾಣಿ, ಸುಭದ್ರಯಾಗಿ ಅಭಿನಯ ಚತುರ ಯಕ್ಷಕೌಶಲ್ಯಗಳ ಆಗರ ಗಣೇಶ ನಾಯ್ಕ ಮುಗ್ವಾ,ವಾಯು ಸುಥ ಭೀಮನಾಗಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಅಶೋಕ ಭಟ್ಟ ಸಿದ್ದಾಪುರ ಅವರು ಧಾರುಕನಾಗಿ ಹಾಸ್ಯ ಚಕ್ರವರ್ತಿ ಶ್ರೀಧರ ಭಟ್ಟ ಕಾಸರಕೋಡ, ವೀರ ಅಭಿಮನ್ಯುನಾಗಿ ರಾಜ್ಯ ಮಟ್ಟದ ಉದಯೋನ್ಮುಖ ಪ್ರತಿಭೆ ಕು.ತುಳಸಿ ಹೆಗಡೆ ಬೆಟ್ಟಕೊಪ್ಪ ಸುಂದರ ಅಭಿನಯ ಪ್ರದರ್ಶನ , ಸಭೆಯಲ್ಲಿ ಇದೇ ಸಂದರ್ಭದಲ್ಲಿ ಯುವ ಯಕ್ಷಗಾನ ಸಂಘಟಕರಾದ , ಇಲ್ಲಿಯವರೆಗೆ 87 ಯಕ್ಷಗಾನಗಳನ್ನು ಯಶಸ್ವಿಯಾಗಿ ಸಂಘಟಿಸಿದ ನಟರಾಜ ಎಮ್ ಹೆಗಡೆ ಹಂಗಾರಖಂಡ ಅವರಿಗೆ ಸಾಮಾಜಿಕ ಹೋರಾಟಗಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಹೊರಾಡುತ್ತಿರುವ ಅನಂತಮೂರ್ತಿ ಹೆಗಡೆ ಸನ್ಮಾನ ಮಾಡಿ ಇಂತಹ ಯಕ್ಷಗಾನ ಸಂಘಟಕರು ಕಲಾ ಪ್ರೋತ್ಸಾಹಕರು ಬೇಕು, ಅವರಿಗೆ ಪ್ರೋತ್ಸಾಹ ಮಾಡಬೇಕು. ಅವರಿಗೆ ನಮ್ಮ ಬೆಂಬಲ ಯಾವತ್ತೂ ಇದೆ ಎಂದರು.
ಸಭೆಯ ಸ್ವಾಗತ ಭಾಷಣವನ್ನು ಸಮಿತಿ ಅಧ್ಯಕ್ಷ ನಟರಾಜ ಎಮ್ ಹೆಗಡೆ ನಡೆಸಿದರೆ, ನಿರ್ವಹಣೆಯನ್ನು ಉಪಾಧ್ಯಕ್ಷರಾದ ರಮೇಶ ಟಿ. ನಾಯ್ಕ, ವಂದಾರ್ಪಣೆಯನ್ನು ಸಮಿತಿಯ ಕ್ರೀಯಾಶೀಲ ಕಾರ್ಯದರ್ಶಿ ರಮೇಶ ಎನ್. ನಾಯ್ಕ ಬಾಳೇಕೈ ನಡೆಸಿದರೇ, ಹರೀಶ ನಾಯ್ಕ ಬಾಳೇಕೈ, ಮಂಜುನಾಥ ಎಮ್ ಗೌಡ ನಾಣಿಕಟ್ಟಾ ಉಮೇಶ ಗ ಹೆಗಡೆ ಸೂರನ್, ರಾಮಕೃಷ್ಣ ಭಟ್ಟ ಶೇಲೂರು, ನಾಗರಾಜ ನಾಯ್ಕ ಹಂಗಾರಖಂಡ, ಪ್ರವೀಣ ಜಿ ನಾಯ್ಕ ಹಂಗಾರಖಂಡ ಇವರುಗಳು ವೇದಿಕೆಯ ಮೇಲಿದ್ದಂತಹ ಗಣ್ಯರಿಗೆ ಪುಷ್ಪಗುಚ್ಚ ನೀಡುವುದರ ಜತೆಗೆ ಪ್ರಸಿದ್ಧ ಭಾಗವತರಾದ
ಸುರೇಶ ಶೆಟ್ಟಿ ಎಸ್. ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭಾ ಕಾರ್ಯಕ್ರಮವನ್ನು ಮನೋಜ್ಞವಾಗಿ ಅಚ್ಚುಕಟ್ಟಾಗಿ ಸುಂದರವಾಗಿ ನಡೆಸಿಕೊಟ್ಟರು.